Advertisement

ಶಿರ್ವ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ಗೆ ನಾಗರಿಕ ಸಮ್ಮಾನ

07:47 PM Aug 27, 2022 | Team Udayavani |

ಶಿರ್ವ: ಶಿರ್ವ ಗ್ರಾ. ಪಂ.ನಲ್ಲಿ 16 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದು, ದಾನಿಗಳ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 1 ಕೋಟಿಗೂ ಅಧಿಕ ಮೊತ್ತದ ಜನಪರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಜಾತಿ,ಮತ ಭೇದಗಳಿಲ್ಲದೆ ರಾಜಕೀಯ ರಹಿತ ಪ್ರಾಮಾಣಿಕ ಸೇವೆ ನೀಡಿ ತನ್ನ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರೈಸಿದ ಜನಸ್ನೇಹಿ ನಾಯಕ ಕೆ.ರಾಮರಾಯ ಪಾಟ್ಕರ್‌ ಅವರಿಗೆ ಬಂಟಕಲ್ಲು ಪರಿಸರದ ಸಂಘಟನೆಗಳ ಅಭಿನಂದನೆ ಕಾರ್ಯಕ್ರಮವು ಆ. 27 ರಂದು ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ನಡೆಯಿತು.

Advertisement

ಮುಖ್ಯ ಅತಿಥಿ ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಕೆ.ಜಿ ಮಂಜುನಾಥ್‌ ನಾಗರಿಕರ ಪರವಾಗಿ ಕೆ.ಆರ್‌. ಪಾಟ್ಕರ್‌ ಮತ್ತು ಸಂಗೀತಾ ಪಾಟ್ಕರ್‌ ದಂಪತಿಯ ಸಮ್ಮಾನ ನೆರವೇರಿಸಿ ಮಾತನಾಡಿ ಶಿರ್ವ ಗ್ರಾ.ಪಂ. ಅಧ್ಯಕ್ಷನಾಗಿ ಪಾಟ್ಕರ್‌ ಅವರು ಕರ್ತವ್ಯವನ್ನು ಗ್ರಹಿಸಿದ ರೀತಿ ಉತ್ತಮವಾಗಿದ್ದು ಹುದ್ದೆಯ ಮೌಲ್ಯವನ್ನು ಎತ್ತಿ ತೋರಿಸಿದ್ದಾರೆ. ಜನರ ನಿರೀಕ್ಷೆಯನ್ನು ಹುಸಿಮಾಡದೆ ಆಧುನಿಕತೆಗೆ ಒಗ್ಗಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿ ಮಾದರಿಯಾದ ಪಾಟ್ಕರ್‌ ಅವರ ಕೆಲಸವನ್ನು ನಾಗರಿಕ ಸಮಾಜ ಗುರುತಿಸಿದೆ ಎಂದರು.

ಶಿರ್ವ ಗ್ರಾ.ಪಂ. ಸದಸ್ಯೆ ವೈಲೆಟ್‌ ಕ್ಯಾಸ್ತಲಿನೋ ಅಭಿನಂದನಾ ಪತ್ರ ವಾಚಿಸಿದರು. ಸಮ್ಮಾನಕ್ಕೆ ಉತ್ತರಿಸಿದ ಕೆ.ಆರ್‌. ಪಾಟ್ಕರ್‌ ಗ್ರಾಮದ ಅಭಿವೃದ್ಧಿಗೆ ಕಾರಣೀಭೂತರಾದ ದಾನಿಗಳನ್ನು ಅಭಿನಂದಿಸಿ, ನಾಗರಿಕ ಸಮ್ಮಾನವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಇಗ್ನೇಶಿಯಸ್‌ ಡಿಸೋಜಾ ಮಾತನಾಡಿದರು. ಸಮಿತಿಯ ಅಧ್ಯಕ್ಷ ಮಾಧವ ಕಾಮತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಪರಿಸರದ ಸಂಘಟನೆಗಳ ಅಧ್ಯಕ್ಷರಾದ ವಿಲ್ಫ್ರೈಡ್‌ ಪಿಂಟೋ,ರೀನಾ ಡಿಸೋಜಾ,ಶಂಕರ ಪದಕಣ್ಣಾಯ,ಸುಜಿತ್‌ ಕುಮಾರ್‌, ಅನಂತರಾಮ ವಾಗ್ಲೆ, ಗೀತಾ ವಾಗ್ಲೆ, ಮಂಜುನಾಥ ಪೂಜಾರಿ,ಉಮೇಶ್‌ ರಾವ್‌,ಮುರಳೀಧರ ಆಚಾರ್ಯ ಮತ್ತು ಡೇವಿಡ್‌ ಡಿಸೋಜಾ ವೇದಿಕೆಯಲ್ಲಿದ್ದರು.

Advertisement

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು,ವಿವಿಧ ಸಂಘಟನೆಗಳ ಸದಸ್ಯರು,ಪದಾಧಿಕಾರಿಗಳು,ಪಾಟ್ಕರ್‌ ಅಭಿಮಾನಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಬಂಟಕಲ್ಲು ನಾಗರಿಕ ಸಮಿತಿಯ ಉಪಾಧ್ಯಕ್ಷ ಪುಂಡಲೀಕ ಮರಾಠೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಅರುಂದತಿ ಮತ್ತು ವಸಂತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪಾಟ್ಕರ್‌ ಅಭಿನಂದನಾ ಸಮಿತಿಯ ಕಾರ್ಯದರ್ಶಿ ದಿನೇಶ್‌ ದೇವಾಡಿಗ ವಂದಿಸಿದರು.

ಕೋಡುಗುಡ್ಡೆಯಿಂದ ಕೆ.ಆರ್‌.ಪಾಟ್ಕರ್‌ ಅವರನ್ನು ವಿವಿಧ ಬಿರುದಾವಲಿಯೊಂದಿಗೆ ಮೆರವಣಿಗೆಯ ಮೂಲಕ ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ವೇದಿಕೆಗೆ ಕರೆತರಲಾಯಿತು. ಕಲಾವಿದ ಪ್ರಕಾಶ್‌ ಸುವರ್ಣ ಕಟಪಾಡಿ ಬಳಗದವರಿಂದ ಸಂಗೀತ ರಸಮಂಜರಿ, ಕುಂದಾಪುರದ ಮೂರು ಮುತ್ತು ಬಳಗದವರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಯಿತು.

ಅಭಿವೃದ್ಧಿ ಕಾರ್ಯಗಳು

ಸತತ 5ನೇ ಅವಧಿಗೆ ಬಂಟಕಲ್ಲು ವಾರ್ಡ್‌ನ್ನು ಪ್ರತಿನಿಧಿಸಿದ್ದ ಪಾಟ್ಕರ್‌ ಸೀಮಿತ ಅವಧಿಯಲ್ಲಿ ಶಿರ್ವ ಪೇಟೆಯಲ್ಲಿ ಸುಸಜ್ಜಿತ ಬಸ್ಸು ತಂಗುದಾಣ, ಟಿವಿ ಪರದೆಯ ಮೇಲೆ ಬಸ್ಸುಗಳ ವೇಳಾಪಟ್ಟಿ, ಸಮಯ,ಸ್ಥಳಗಳ ಬಗ್ಗೆ ಮಾಹಿತಿ , ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮದ ಪ್ರಮುಖ ಸ್ಥಳಗಳಲ್ಲಿ 4 ಬಸ್ಸು ತಂಗುದಾಣಗಳು, ಆಯಕಟ್ಟಿನ ಕೇಂದ್ರಗಳಲ್ಲಿ ಸಿಸಿ ಕೆಮರಾ ಅಳವಡಿಕೆ, ಧ್ವಜಸ್ತಂಭ, ಹವಾನಿಯಂತ್ರಿತ ಬಂಟಕಲ್ಲು ಅಂಗನವಾಡಿ ಕೇಂದ್ರ,ಪದವು ಆರೋಗ್ಯ ಉಪಕೇಂದ್ರ, ಗ್ರಾ.ಪಂ. ಡಿಜಿಟಲ್‌ ಪಾವತಿ ವ್ಯವಸ್ಥೆ, ಗ್ರಾಮಸಭೆಯ ನೇರ ಪ್ರಸಾರ, ಶಿರ್ವಪೇಟೆ ಮತ್ತು ಬಂಟಕಲ್ಲಿನಲ್ಲಿ 8 ಹೈಮಾಸ್ಟ್‌ ದೀಪಗಳ ಅಳವಡಿಕೆ, ಎಸ್‌ಎಲ್‌ಆರ್‌ಎಂ ಘಟಕಕ್ಕೆ 12ಲಕ್ಷ ಮೌಲ್ಯದ ವಾಹನದ ವ್ಯವಸ್ಥೆ, ಪ್ಲಾಸ್ಟಿಕ್‌ ನಿಷೇಧ ಜಾಗೃತಿ, ಬಟ್ಟೆಚೀಲಗಳ ವಿತರಣೆ,ಸ್ವತ್ಛಶಿರ್ವ-ಸ್ವಸ್ಥ ಶಿರ್ವಯೋಜನೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ,ಸರಕಾರದಿಂದ ಜನಸಾಮಾನ್ಯರಿಗೆ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿ ಶಿಬಿರ, ಸಂಜೀವಿನಿ ಸಂತೆ,ಗ್ರಾ.ಪಂ.ಗೆ ಸಂಪನ್ಮೂಲ ಕ್ರೋಢೀಕರಣ, ಮೆಸ್ಕಾಂನ ಅನಿಯಮಿತ ವಿದ್ಯುತ್‌ ಕಡಿತದ ಬಗ್ಗೆ ಮುಂಚೂಣಿಯ ಹೋರಾಟ, ಕೊರೋನಾ ಲಾಕ್‌ಡೌನ್‌ ಅವಧಿಯ ಸೇವೆ,ಮಟ್ಟಾರುವಿನಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ ಸಹಿತ ಹತ್ತು ಹಲವು ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಅತ್ಯಲ್ಪ ಅವಧಿಯಲ್ಲಿ ಜನಮನ್ನಣೆ ಗಳಿಸಿದ ಸಮಾಜಸೇವಕನಿಗೆ ಸಾರ್ವಜನಿಕ ವಲಯದಿಂದ ಅಭಿನಂದನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next