Advertisement
ನ. 20ರಂದು ಅವರ ಮನೆಗೆ ಊರಿನವರು ಉಪನಯನದ ಆಮಂತ್ರಣ ಪತ್ರಿಕೆ ನೀಡಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ತೆರೆದಿದ್ದು, ಮನೆಯ ಹಾಲ್ನಲ್ಲಿ ಮಲಗಿದ್ದ ಅವರ ಮುಖದಲ್ಲಿ ಇರುವೆಗಳು ತುಂಬಿದ್ದು, ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದು ಮಲಗಿದ್ದಲ್ಲಿಯೇ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.
ಉಡುಪಿ: ಬಡಗುಬೆಟ್ಟು, ನಿವಾಸಿ ಸುರೇಶ್ (59) ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮದ್ಯಸೇವನೆ ಚಟ ಹೊಂದಿದ್ದ ಅವರು ಕುಕ್ಕಿಕಟ್ಟೆ ರಸ್ತೆಯ ಬಳಿ ಬಿದ್ದು ಹಣೆಗೆ ಪಟ್ಟಾಗಿದ್ದು, ಸಂಬಂಧಿ ಅಕ್ಷಯ ಅವರು ಮನೆಗೆ ಕರೆದುಕೊಂಡು ಹೋಗಿ, ಅನಂತರ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
Related Articles
Advertisement