ಶಿರ್ವ: ಪ್ರಸಿದ್ಧ ಪುಣ್ಯ ಕ್ಷೇತ್ರ ಕಾರ್ಕಳ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶಿರ್ವ ಆರೋಗ್ಯ ಮಾತಾ ದೇವಾಲಯದ ವತಿಯಿಂದ ನಡೆಯುವ 11ನೇ ವರ್ಷದ ಕಾಲ್ನಡಿಗೆ ಯಾತ್ರೆಗೆ ಚರ್ಚಿನಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದ ಬಳಿಕ ಪ್ರಧಾನ ಧರ್ಮಗುರು ರೆ|ಫಾ|ಡಾ|ಲೆಸ್ಲಿ ಡಿಸೋಜಾ ಸೋಮವಾರ ಚಾಲನೆ ನೀಡಿದರು. ಚರ್ಚಿನ ಸಹಾಯದ ಧರ್ಮಗುರು ರೆ|ಫಾ| ನೆಲ್ಸನ್ ಪೆರಿಸ್ ಉಪಸ್ಥಿತರಿದ್ದರು.
ಪಾದಯಾತ್ರೆಯಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ, ಕಾರ್ಯದರ್ಶಿ ಫ್ಲೆವಿ ಡಿಸೋಜಾ, ಆಸ್ಟ್ರೇಲಿಯಾದ ಧರ್ಮಗುರು ರೆ|ಫಾ|ಪ್ರಕಾಶ್ ಮೆನೇಜಸ್, ಫಾ|ಜಾರ್ಜ್ ಪಿಂಟೋ ,ಪಾಲನ ಮಂಡಳಿಯ ಸದಸ್ಯರು ಹಾಗೂ ಜಾತಿ,ಮತ ಧರ್ಮದ ಭೇದವಿಲ್ಲದೆ ಸುಮಾರು 100ಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು. ಉದ್ಯಮಿ ಆಲ್ವಿನ್ ಡಿ’ಸೋಜಾ ಹಾಗೂ ಮೈಕಲ್ ಡಿ’ ಸೋಜಾ ಕಾಲ್ನಡಿಗೆಯ ನೇತೃತ್ವ ವಹಿಸಿದ್ದರು.
ದಾರಿಯುದ್ದಕ್ಕೂ ಶಿರ್ವದ ಸಮಾಜ ಸೇವಕ ಅನಂತ್ರಾಯ ಶೆಣೈ , ಪ್ರಿನ್ಸ್ ಪಾಯಿಂಟ್ ಬಳಿ ಡೇವಿಡ್ ಡಿ’ ಸೋಜಾ, ಬೆಳ್ಮಣ್ ಜಂತ್ರದ ವಿಶ್ವನಾಥ ಪಾಟ್ಕರ್ ಅವರಿಂದ ನೀರು ಮತ್ತು ತಂಪು ಪಾನೀಯ ಹಾಗೂ ರಾಜೇಶ್ ಅರಾನ್ಹಾ ಅವರಿಂದ ಬೆಳ್ಮಣ್ ಪಕಲ ಚರ್ಚ್ ವಠಾರದಲ್ಲಿ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅತ್ತೂರಿನಿಂದ ಭಕ್ತರಿಗೆ ಹಿಂತಿರುಗಲು ಮೈಕಲ್ ಡಿ’ಸೋಜಾ ಬಸ್‌ನ ವ್ಯವಸ್ಥೆ ಕಲ್ಪಿಸಿದ್ದರು.
ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವ ಈಶ್ವರಪ್ಪ ಅವರನ್ನು ಗುಣಗಾನ ಮಾಡಿದ ಕಾಂಗ್ರೆಸ್ ಎಂಎಲ್ಸಿ