Advertisement
ಮಹಾರಾಷ್ಟ್ರ ಘಟಕದ ಪ್ರಮುಖ ರಾದ ಯಶೋಧರ ಕೋಟ್ಯಾನ್, ಜಾನ್ ಡಿ’ಸೋಜಾ, ರೇಮಸ್ ಡಿ’ಸೋಜಾ, ವಿನ್ಸೆಂಟ್ ಮೆಂಡೋನ್ಸಾ ಉಪಸ್ಥಿತರಿದ್ದರು. ಮಹೇಶ್ ಹೆಗ್ಡೆ ಸ್ವಾಗತಿಸಿದರು.
Related Articles
Advertisement
ಅವಿರೋಧ ಪುನರಾಯ್ಕೆ ಪ್ರಸಕ್ತ ಅಧ್ಯಕ್ಷ ಮಹೇಶ್ ಹೆಗ್ಡೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ ಉಪಾಧ್ಯಕ್ಷರಾಗಿ ಜಾನ್ ಡಿ’ಸೋಜಾ, ಕಾರ್ಯದರ್ಶಿಯಾಗಿ ಪ್ರಸಿÇÉಾ ಮೆಂಡೋನ್ಸಾ, ಜತೆ ಕಾರ್ಯದರ್ಶಿಯಾಗಿ ಕ್ಲಾರಾ ಮಿನೇಜಸ್, ಕೋಶಾಧಿಕಾರಿಯಾಗಿ ರೇಮಸ್ ಡಿ’ಸೋಜಾ, ಜತೆ ಕೋಶಾ ಧಿಕಾರಿಯಾಗಿ ಸಿಎ ಸಂತೋಷ್ ಶೆಟ್ಟಿ, ಜನ ಸಂಪರ್ಕಾಧಿಕಾರಿಗಳಾಗಿ ಜಾನ್ ಅರ್. ಡಿಕುನ್ಹಾ, ಹ್ಯುಬರ್ಟ್ ಫೆರ್ನಾಂಡಿಸ್, ಕಾನೂನು ಸಲಹೆಗಾರರಾಗಿ ಅರ್‌ಜಿ. ಶೆಟ್ಟಿ, ಸದಸ್ಯರಾಗಿ ಜೂಲಿಯೆಟ್ ಡಿ’ಸೋಜಾ, ಪ್ರಿಯಾ ಶೆಟ್ಟಿ, ಇರೆನ್ ಮಾರ್ಟಿಸ್, ಲೀನಾ ಡೆಸಾ, ಸರ್ವಮಂಗಳಾ ಶೆಟ್ಟಿ, ಜಾನ್ ಫೆರ್ನಾಂಡಿಸ್, ರವಿಂದ್ರ ಅಚಾರ್ಯ, ಪ್ರಸಾದ್ ಹಾಗೂ ಸಲಹೆಗಾರರಾಗಿ ಸದಾನಂದ ಕೋಟ್ಯಾನ್, ವಿನ್ಸೆಂಟ್ ಮೆಂಡೋನ್ಸಾ, ಯಶೋಧರ ಕೋಟ್ಯಾನ್, ಲ್ಯಾನ್ಸಿ ಬಬೋìಜ, ರೋಶನ್ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು. ಮಹೇಶ್ ಹೆಗ್ಡೆ ಮಾತನಾಡಿ, ನಮಗೆ ವಿದ್ಯಾದಾನ ಮಾಡಿದ ಸಂಸ್ಥೆಯ ನೆನಪಿನಲ್ಲಿ ನಾವು ಒಂದೇ ಸೂರಿನಡಿಯಲ್ಲಿ ಸೇರಿ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ, ತೊಂದರೆಯಲ್ಲಿರುವ ಸಹಪಾಠಿ ಗಳಿಗೆ ಸಹಕಾರಿಯಾಗುವಂಥ ಕೆಲಸ ಮಾಡೋಣ. ನಾವೆಲ್ಲರೂ ಒಂದೇ ಎಂಬ ಭಾವನೆ ಯಿಂದ ಸೇವೆಯಲ್ಲಿ ತೊಡಗೋಣ ಎಂದರು. ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ನೆಲೆ ಸಿದ್ದರೆ ನಮ್ಮನ್ನು ಸಂಪರ್ಕಿಸಿ ಈ ಸಂಸ್ಥೆಯ ಜೊತೆ ಸೇರಿಕೊಳ್ಳಬಹುದು ಎಂದು ಅವರು ಹೇಳಿದರು. ಸಂಘದ ಸದಸ್ಯ ರೋಶನ್ ಆಳ್ವ ವಂದಿಸಿದರು. ಚಿತ್ರ-ವರದಿ : ಹರೀಶ್ ಮೂಡಬಿದ್ರಿ ಪುಣೆ