ಶಿರ್ವ: ಇಲ್ಲಿನ ಸುನ್ನಿ ಜಾಮಿಯಾ ಮಸೀದಿ, ತೋಪನಂಗಡಿ ಮಸೀದಿ ಸಹಿತ ಇತರ ಮಸೀದಿಗಳಲ್ಲಿ ಮುಸಲ್ಮಾನ ಬಾಂಧವರು ಈದುಲ್ ಫಿತ್ರ ನಮಾಜ್ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕೊರೊನಾ ಭೀತಿಯಿಂದಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ಗೆ ನಿರ್ಬಂಧ ವಿಧಿಸಿದ್ದರಿಂದಾಗಿ ಶಿರ್ವ ಪರಿಸರದ ಮುಸಲ್ಮಾನ ಬಾಂಧವರು ಮನೆಗಳಲ್ಲಿಯೇ ಈದುಲ್ ಫಿತ್ರ ನಮಾಜ್ ನೆರವೇರಿಸಿ ಮನೆಮಂದಿಯೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು.
ಇದನ್ನೂ ಓದಿ:ಮತ್ತು ಬರಿಸುವ ಔಷಧ ನೀಡಿ ಚಿನ್ನ ಕದಿಯುತ್ತಿದ್ದ ಕಳ್ಳಿಯರು
ಕೊರೊನಾದಿಂದಾಗಿ ಕಳೆಡೆರಡು ವರ್ಷಗಳಲ್ಲಿ ನೆರೆಹೊರೆಯವರೊಂದಿಗೂ ಶುಭಾಶಯ ವಿನಿಮಯ ಮಾಡಿಕೊಳ್ಳಲು ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ರಂಜಾನ್ ಹಬ್ಬದ ಪ್ರಾರ್ಥನೆಯೊಂದಿಗೆ ಆತಂಕಗಳು ದೂರವಾಗಿ ನೆಮ್ಮದಿಯ ಜನಜೀವನ ನೆಲೆಗೊಳ್ಳಲಿ ಎಂದು ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಜನಾಬ್ ಸಿರಾಜುದ್ದೀನ್ ಝೈನಿ ಮತ್ತು ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ /ಹಾಲಿ ಸದಸ್ಯ ಹಸನಬ್ಬ ಶೇಕ್ ಆಶಯ ವ್ಯಕ್ತಪಡಿಸಿದ್ದಾರೆ.