ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೆಳಂಬಾರ ಕಡಲ ತೀರದಲ್ಲಿ ಇನ್ನೊಂದು ಅರ್ಧ ಮೃತದೇಹ ಗುರುವಾರ ಪತ್ತೆಯಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ 7ಕ್ಕೇರಿಕೆಯಾಗಿದೆ.
ಘೋರ ದುರಂತಕ್ಕೆ ಸಾಕ್ಷಿಯಾಗಿ ಪತ್ತೆಯಾದ ಮೃತದೇಹ ಪುರುಷ ಅಥವಾ ಮಹಿಳೆಯದ್ದೋ ಎಂದು ತಿಳಿದು ಬರುತ್ತಿಲ್ಲ. ಮನುಷ್ಯನ ಕಾಲಿನ ಬಾಗ ಮಾತ್ರ ಸಮುದ್ರದಲ್ಲಿ ತೇಲಿ ತೀರಕ್ಕೆ ಬಂದಿದೆ. ಪಿಎಸ್ಐ ಉದ್ದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಒಂದೇ ಕುಟುಂಬದ ಐವರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಕುಟುಂಬದ ಬಾಲಕಿ ಅವಂತಿಕಾ ಮೃತದೇಹ ಕುಮಟಾ ತಾಲೂಕಿನ ಗಂಗೆ ಕೊಳ್ಳದ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಇನ್ನೋರ್ವ ಪುರುಷನ ಮೃತದೇಹ ಮಂಜುಗುಣಿಯ ಗಂಗಾವಳಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಈ ಹಿಂದೆ ಲಕ್ಷ್ಮಣ ನಾಯ್ಕ, ಹೆಂಡತಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮತ್ತು ಚಾಲಕ ಸಿನವಣ್ಣನ್ ಸೇರಿ ನಾಲ್ಕು ಮೃತದೇಹ ಪತ್ತೆಯಾಗಿತ್ತು.