Advertisement

Uttar Pradesh; ಶರ್ಟ್‌ ಧರಿಸದ ಅಧಿಕಾರಿ ಸಸ್ಪೆಂಡ್‌

07:56 PM Jun 14, 2023 | Team Udayavani |

ಲಕ್ನೋ: ಉತ್ತರ ಪ್ರದೇಶ ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ಸಸ್ಪೆಂಡ್‌ ಮಾಡಲಾಗಿದೆ.

Advertisement

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಗೆ ಆ ಅಧಿಕಾರಿ ಶರ್ಟ್‌ ಧರಿಸದೆ, ಬನಿಯನ್‌ನಲ್ಲಿ ಹಾಕಿಕೊಂಡು ಸಭೆಯಲ್ಲಿ ಭಾಗವಹಿಸಿದ್ದರು. ಸೂಕ್ತ ರೀತಿಯಲ್ಲಿ ಬಟ್ಟೆ ಧರಿಸದೇ ಅವರು ಕುಳಿತಿದ್ದರು ಎಂಬ ಆರೋಪವನ್ನು ಹೊರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಶಿಕ್ಷಣ ಖಾತೆಯ ನಿರ್ದೇಶಕ ವಿಜಯ ಕಿರಣ್‌ ಆನಂದ್‌ ಆ ಅಧಿಕಾರಿಯನ್ನು ಸಸ್ಪೆಂಡ್‌ ಮಾಡುವ ಆದೇಶ ಹೊರಡಿಸಿದ್ದಾರೆ. ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಧಿಕಾರಿ ಸೂಕ್ತ ರೀತಿಯಲ್ಲಿ ಬಟ್ಟೆ ಧರಿಸದೇ ಇದ್ದದ್ದು ಗಮನಕ್ಕೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next