Advertisement
ಶೀರೂರು ಮಠದ ಸುತ್ತಮುತ್ತಲ ಮನೆಗಳಿಗೆ ಪೊಲೀಸರು ತೆರಳಿ ವಿಚಾರಣೆ ನಡೆಸುತ್ತಿದ್ದಾರೆ. ಮಠ ಮತ್ತು ಸುತ್ತಲಿನ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕುವುದಕ್ಕಾಗಿ ತನಿಖೆಗೊಳಪಡಿಸಿ ಹೇಳಿಕೆಗಳನ್ನು ಪಡೆಯಲಾಗುತ್ತಿದೆ.
Related Articles
ಉಡುಪಿ: ಪಟ್ಟದ ದೇವರನ್ನು ವಾಪಸ್ ಕೊಡುವ ವಿಚಾರದಲ್ಲಿ ಪುತ್ತಿಗೆ ಶ್ರೀಗಳನ್ನು ಹೊರತು ಪಡಿಸಿ, ಉಳಿದ ಪೀಠಾಧಿಪತಿಗಳ ಮೇಲೆ ಶೀರೂರು ಲಕ್ಷ್ಮೀವರತೀರ್ಥ ಶ್ರೀಪಾದರ ಕೇವಿಯೆಟ್ ಅನೂರ್ಜಿತಗೊಂಡಿದೆ.
Advertisement
ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಹಜವಾಗಿಯೇ ಕೇವಿಯೆಟ್ ಅನೂರ್ಜಿತಗೊಂಡಿದೆ. ಕೇವಿಯೆಟ್‌ಗೆ 90 ದಿನಗಳ ಸಮಯವಿದ್ದು, ಈ ವೇಳೆ ಶೀರೂರು ಶ್ರೀ, ಅವರ ಮಠದ ವಿರುದ್ಧ ಯಾರೂ ಮಾತನಾಡಬಾರದು ಮತ್ತು ಶಿಷ್ಯ ಸ್ವೀಕಾರ ಕುರಿತಾಗಿ ಒತ್ತಾಯಿಸಬಾರದು ಎಂದು ಹೇಳಲಾಗಿತ್ತು.
ಪಟ್ಟದ ದೇವರನ್ನು ಕೊಡದಿದ್ದರೆ ಮಠಾಧೀಶರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಶೀರೂರು ಶ್ರೀಗಳು ತಿಳಿಸಿದ್ದರು. ವಿಗ್ರಹ ಕೃಷ್ಣಮಠದಲ್ಲಿ ಇದ್ದು, ಪರ್ಯಾಯ ಪಲಿಮಾರು ಮಠಾಧೀಶರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಬುಧವಾರ ಬರುವಂತೆ ನ್ಯಾಯವಾದಿ ರವಿಕಿರಣ ಮುಡೇìಶ್ವರ ಅವರನ್ನು ಶ್ರೀಗಳು ಹೇಳಿದ್ದರು.
ಆದರೆ, ಅಂದೇ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ವಿಧಿವಶರಾಗಿದ್ದರು.
ಎರಡು ದಿನಗಳಲ್ಲಿ ತಾತ್ಕಾಲಿಕ ವರದಿಮರಣೋತ್ತರ ಪರೀಕ್ಷಾ ವರದಿಯಲ್ಲಿ ಒಂದು ತಾತ್ಕಾಲಿಕ ವರದಿ, ಇನ್ನೊಂದು ಅಂತಿಮ ವರದಿ ಬರುತ್ತದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರತ್ಯೇಕ ಸಿಗುತ್ತದೆ. ವೈದ್ಯರು ಮರಣೋತ್ತರ ಪರೀಕ್ಷಾ ವರದಿ ತಯಾರಿಸುತ್ತಿದ್ದಾರೆ. ಇದರ ತಾತ್ಕಾಲಿಕ ವರದಿ ಇನ್ನೆರಡು ದಿನಗಳಲ್ಲಿ ಸಿಗುವ ಸಾಧ್ಯತೆ ಇದೆ. ಅಂತಿಮ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ವರದಿಗೆ 2 ವಾರ ಬೇಕಾಗಬಹುದು. ಏತನ್ಮಧ್ಯೆ ಶ್ರೀಗಳ ಪರ ವಕೀಲರಾದ ರವಿಕಿರಣ ಮುಡೇìಶ್ವರ ಅವರು ತನಿಖೆಗಾಗಿ ಎಸ್‌ಪಿ ಅವರಿಗೆ ದೂರು ನೀಡಲು ಬಂದಿರಲಿಲ್ಲ. ಮರಣೋತ್ತರ ಪರೀಕ್ಷಾ ವರದಿ ಲಭ್ಯವಾದ ಬಳಿಕ ಅದರ ಆಧಾರದಲ್ಲಿ ದೂರು ನೀಡಬಹುದು ಎಂದಿದ್ದರಿಂದ, ದೂರು ನೀಡಿಲ್ಲ ಎಂದು ವಕೀಲರು “ಉದಯವಾಣಿ’ಗೆ ತಿಳಿಸಿದ್ದಾರೆ. ಆರೋಗ್ಯವರ್ಧಕ ಪೇಯ ವಶಕ್ಕೆ?
ರವಿವಾರ ಶೀರೂರು ಮಠದಲ್ಲಿ ಪತ್ತೆಯಾದ ಆರೋಗ್ಯವರ್ಧಕ ಪೇಯದ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪೇಯವನ್ನು ಸ್ವಲ್ಪ ಬಳಸಲಾಗಿದೆ. ಈ ಪೇಯವನ್ನು ಶ್ರೀಗಳು ನಿರಂತರ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. ವಿಚಾರಣೆಗೆ ಒಳಪಡಿಸಲಾದ ಮಹಿಳೆ ಚಾಲಕನ ಮೂಲಕ ಪರಿಚಯವಾಗಿದ್ದು, ಕೆಲವೇ ಸಮಯದಲ್ಲಿ ಸ್ವಾಮೀಜಿಗೆ ಆಹಾರ ತಂದು ಕೊಡುವಷ್ಟು ಹತ್ತಿರವಾಗಿದ್ದರು, ಮಠದ ವ್ಯವಹಾರ ನೋಡಿ ಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.