Advertisement
ವರದಿಯಲ್ಲಿ 1,115 ಪುಟಗಳಿದ್ದು, ಇದರಲ್ಲಿ ಉಲ್ಲೇಖೀಸಿರುವಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳದ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು. ತನ್ನ 54ನೇವಯಸ್ಸಿನಲ್ಲಿ ಮರಣ ಹೊಂದಿರುವ ಸ್ವಾಮೀಜಿಯದ್ದು ಸ್ವಾಭಾವಿಕ ಮರಣ ಎಂದು ಹೇಳಿ ಕಡತ ಮುಕ್ತಾಯಗೊಳಿಸಿದ್ದಾರೆ. ವಿಚಾರಣೆ, ವಿಧಿವಿಜ್ಞಾನ ತಜ್ಞರ ಹೇಳಿಕೆಗಳು, ಪೋಸ್ಟ್‌ಮಾರ್ಟಂ ವರದಿ, ವಿಷ ವಿಜ್ಞಾನಿಗಳ ವರದಿಗಳು ದಾಖಲಾಗಿವೆ.
ಮಣಿಪಾಲ ಕೆಎಂಸಿಯ ಮೆಡಿಕಲ್ ಸುಪರಿಂಟೆಂಡೆಂಟ್ ಆಗಿರುವ ಡಾ| ಅವಿನಾಶ್ ಶೆಟ್ಟಿ ಅವರ ಪ್ರಕಾರ ಸ್ವಾಮೀಜಿಯ ದೇಹದಲ್ಲಿ ವಿಷದ ಅಂಶ ಇತ್ತು. ಡಾ| ಅವಿನಾಶ್ ಶೆಟ್ಟಿ ಮಾತ್ರವಲ್ಲದೆ ಟಾಕ್ಸಿಕಾಲಜಿ(ವಿಷವಿಜ್ಞಾನಿ) ವರದಿಯಲ್ಲೂ ಸ್ವಾಮೀಜಿಯವರ ರಕ್ತ, ಮೂತ್ರ ಮತ್ತು ಉದರದ ಅಂಶಗಳು ಪರಿಶೀಲನೆಗೆ ಒಳಪಟ್ಟಿದ್ದು, ಮೂರರಲ್ಲೂ ವಿಷವಿದೆ ಎಂದು ಟಾಕ್ಸಿಕಾಲಜಿಸ್ಟ್ ಕೆಎಂಸಿಯ ಅಸೋಸಿಯೇಟ್ ಪ್ರೊ| ಡಾ| ಅಶ್ವಿನಿ ಕುಮಾರ್ ಮತ್ತು ಡಾ| ಅನಿತಾ ಎಸ್. ತಿಳಿಸಿದ್ದಾರೆ. ಇನ್ನು ಮರಣೋತ್ತರ ವರದಿ ಪರೀಕ್ಷೆಯಲ್ಲೂ ಶ್ರೀಗಳ ರಕ್ತದಲ್ಲಿ ವಿಷದ ಅಂಶ ಇದೆ ಎನ್ನುವುದು ದೃಢವಾಗಿದೆ. ಈ ಬಗ್ಗೆ ಸ್ವಾಭಾವಿಕ ಮರಣ ದಾಖಲಾದುದು ಅಚ್ಚರಿ ತಂದಿದೆ ಎಂದು ರವಿಕಿರಣ್ ಮುಡೇìಶ್ವರ ಹೇಳಿದರು. ಸುಪರಿಂಟೆಂಡೆಂಟ್‌ಗೆ ನೋಟಿಸ್
ಮಣಿಪಾಲದ ಕೆಎಂಸಿಯಲ್ಲಿ ಟಿಎಲ್‌ಸಿ ಟೆಸ್ಟ್ ಮಾಡಲಾಗಿ ವರದಿ ನೀಡಲಾಗಿದೆ. ಆದರೆ ತನಿಖಾಧಿಕಾರಿಯಾಗಿದ್ದ ಬೆಳ್ಳಿಯಪ್ಪ ಅವರು ಕೆಎಂಸಿಯ ಸುಪರಿಟೆಂಡೆಂಟ್‌ಗೆ ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದು ಎಂದು ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೆ ಡಾ| ಅವಿನಾಶ್ ಶೆಟ್ಟಿ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಇಷ್ಟೆಲ್ಲ ವಿಚಾರಗಳಿರುವಾಗ ಯಾರೂ ಕೂಡ ಅಸಹಜ ಸಾವಿನ ಬಗ್ಗೆ ದೂರು ನೀಡಿಲ್ಲದ ಕಾರಣ ತನಿಖೆಗೆ ಹಿನ್ನಡೆಯಾಗಿದೆ ಎಂದರು.
Related Articles
ಸ್ವಾಮೀಜಿಗಳು ಜು.19ಕ್ಕೆ ಮರಣ ಹೊಂದಿದ್ದು, ಜು.31ಕ್ಕೆ ಸಂಗ್ರಹಿಸಿದ ಉದರಾಂಗವನ್ನು ವಿಧಿವಿಜ್ಞಾನ ಪ್ರಯೋಗಕ್ಕೆ ಕಳುಹಿಸಿಲ್ಲ. ವಿಷದ ಪರೀಕ್ಷೆಯನ್ನು ವಿಳಂಬಮಾಡಿದ್ದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಜು.31ಕ್ಕೆ ವಿಧಿ ವಿಜ್ಞಾನ ಪ್ರಯೋಗಕ್ಕೆ ಪತ್ರ ಬರೆಯಲಾಗಿದೆ. 11 ದಿನಗಳ ಕಾಲ ಉದರಾಂಗವನ್ನು ಶೇಖರಿಸಿಡಲಾಗಿತ್ತು. ಅವರು ಕೂಡ ವಿಳಂಬ ಮಾಡಿದರು. 20 ದಿನದ ಅನಂತರ ಪರೀಕ್ಷೆ ಮಾಡಲಾಯಿತು. ಇಲ್ಲಿ ವಿಷದ ಅಂಶ ಕಂಡುಬರುವುದಿಲ್ಲ. ಈ ವರದಿ ಅಲ್ಲಿಂದ ಬಂದಿದ್ದು, ಇವೆಲ್ಲವನ್ನು ಕ್ರೋಡೀಕರಿಸಿ ಸ್ವಾಭಾವಿಕ ಮರಣ ಎಂದು ವರದಿ ನೀಡಲಾಗಿದೆ ಎಂದರು.
Advertisement
ಸಾವು ಹೇಗಾಯಿತು?ಗಾಯಗೊಂಡ ಕಿಡ್ನಿಯಿಂದ ಶ್ರೀಗಳು ಮೃತಪಟ್ಟಿದ್ದಾರೆ; ರೋಗಗ್ರಸ್ತ ಕಿಡ್ನಿಯಿಂದಲ್ಲ. ಶ್ರೀಗಳಿಗ ವಿಷಪ್ರಾಶನವಾಗಿದೆ. ನಾಳದಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಸ್ವಾಭಾವಿಕ ಮರಣ ಎಂಬುದಾಗಿ ತನಿಖಾಧಿಕಾರಿಗಳು ದಾಖಲಿಸಿದ್ದಾರೆ. ಆದರೆ ಕಡತ ಇನ್ನೂ ಜೀವಂತವಿದೆ. ಇದನ್ನು ಮುಂದುವರಿಸುವ ಅಗತ್ಯವಿದೆ ಎಂದರು. ಕೊಲೆ ಪ್ರಕರಣ, ಸಂಶಯದ ಸಾವಿಗೆ ಕಾಲ ಪರಿಮಿತಿ ಇಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್‌ನಲ್ಲಿ ರಿಟ್ ಕೂಡ ಸಲ್ಲಿಸಬಹುದು ಎಂದು ರವಿಕಿರಣ್ ಮುಡೇìಶ್ವರ ಹೇಳಿದ್ದಾರೆ. ಆ. 7: ಶೀರೂರುಶ್ರೀ ಆರಾಧನೆ
ಉಡುಪಿ: ಕಳೆದ ವರ್ಷ ಅಸ್ತಂಗತರಾದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರ ಆರಾಧನೋತ್ಸವ ಹಿರಿಯಡಕ ಸಮೀಪದ ಶೀರೂರು ಮೂಲ ಮಠದಲ್ಲಿ ಆ. 7ರಂದು ನಡೆಯಲಿದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ವೃಂದಾವನ ಸ್ಥಾಪನೆ ಮಾಡಲಾಗುವುದು. ಕ್ಯಾಲೆಂಡರ್ ಪ್ರಕಾರದಂತೆ ಜು. 19ರಂದು ಉಪ್ಪೂರು ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾಮೀಜಿಯವರ ಅಭಿಮಾನಿಗಳು ಸಂಸ್ಮರಣೆ ಮಾಡಿದರು. ತಿಥಿ, ನಕ್ಷತ್ರ ಕ್ರಮದಂತೆ ಮೂಲಮಠದಲ್ಲಿ ಆರಾಧನೆ ನಡೆಯಲಿದೆ.