Advertisement

ಸೋಂಕಿತರಿಗೆ ಅನುಕೂಲ ಕಲ್ಪಿಸಿದ ಶ್ರೀನಿವಾಸ ಮಾನೆ

09:04 PM May 15, 2021 | Team Udayavani |

ಹಾನಗಲ್ಲ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸ್ಥಿತಿಯಲ್ಲಿರದ 5 ವೆಂಟಿಲೇಟರ್‌ಗಳನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಿ ಕೋವಿಡ್‌ ಕೊರೊನಾ ಸೋಂಕಿತರಿಗೆ ಅನುಕೂಲ ಕಲ್ಪಿಸುವ ಮೂಲಕ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ನುಡಿದಂತೆ ನಡೆದಿದ್ದಾರೆ.

Advertisement

ನಾಲ್ಕಾರು ದಿನಗಳ ಹಿಂದೆ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್‌ ಚಿಕಿತ್ಸಾ ಸಾಮಗ್ರಿಗಳ ಪರಿಶೀಲನೆ ನಡೆಸಿದ್ದ ಅವರಿಗೆ ಇಲ್ಲಿರುವ 5 ವೆಂಟಿಲೇಟ್‌ರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಈ ಕುರಿತು ವೈದ್ಯಾ ಧಿಕಾರಿಗಳೊಂದಿಗೆ ಚರ್ಚಿಸಿದಾಗ, ತಜ್ಞರಿಲ್ಲದೆ ಬಹು ಕಾಲ ಬಳಸದ ಕಾರಣ ವೆಂಟಿಲೇಟರ್‌ಗಳು ಕೆಲಸಕ್ಕೆ ಬಾರದಂತಾಗಿವೆ ಎಂದು ಪರಿಸ್ಥಿತಿಯನ್ನು ವಿವರಿಸಿದ್ದರು. ಕೂಡಲೇ ಈ ಐದೂ ವೆಂಟಿಲೇಟರ್‌ಗಳ ದುರಸ್ತಿಯ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ನುಡಿದಂತೆ ಐದಾರು ದಿನಗಳಲ್ಲಿ ಲಕ್ಷಾಂತರ ರೂ. ವೆಚ್ಚದ ಸಾಮಗ್ರಿಗಳನ್ನು ಪೂರೈಸಿ ವೆಂಟಿಲೇಟರ್‌ಗಳು ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ.

ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಸಾಮಗ್ರಿ ಒದಗಿಸಿದ ನಂತರ ಮಾತನಾಡಿದ ಅವರು, ಎಲ್ಲೆಡೆ ಈಗ ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಪ್ರಾಣ ವಾಯುವಿನ ಅಭಾವದಿಂದ ಹಲವೆಡೆ ಸಾವು-ನೋವು ಸಂಭವಿಸುತ್ತಿವೆ. ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು ಸ್ವಯಂ ಆಕ್ಸಿಜನ್‌ ಉತ್ಪಾದಿಸಿಕೊಳ್ಳಲಿದ್ದು, ಸೋಂಕಿತರಿಗೆ ನಿರಾತಂಕವಾಗಿ ಚಿಕಿತ್ಸೆ ಮುಂದುವರೆಸಬಹುದಾಗಿದೆ. ತಾಲೂಕಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಬಾ ಧಿತರಿಗೆ ಸೂಕ್ತ ಚಿಕಿತ್ಸೆ ನೀಡುವಂತಾಗಬೇಕು. ಆಕ್ಸಿಜನ್‌, ಬೆಡ್‌ ಹಾಗೂ ಯಾವುದೇ ಔಷಧೋಪಚಾರದ ಕೊರತೆಯಾಗಬಾರದು. ನಮ್ಮ ಸ್ವಂತ ವೆಚ್ಚದಲ್ಲಿ ಮೂರು ಮಲ್ಟಿ ಪ್ಯಾರಾ ಮಾನಿಟರ್‌, 5 ಎನ್‌ ಐವಿ ಮಾಸ್ಕ್ ಹಾಗೂ ಒಂದರಿಂದ ಐದು ಲೀಟರ್‌ ಕ್ಷಮತೆಯುಳ್ಳ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಸದ್ಯಕ್ಕೆ ಪೂರೈಸಿದ್ದೇನೆ ಎಂದು ತಿಳಿಸಿದರು.

ತಮ್ಮ ಪಕ್ಷದ ಕಾರ್ಯಕರ್ತರ ಸಹಕಾರದೊಂದಿಗೆ ತಾಲೂಕಿನಲ್ಲಿ ಕೊರೊನಾ ಬಾ ಧಿತರಿಗೆ ಸಹಾಯವಾಣಿ ಆರಂಭಿಸಲಾಗಿದೆ. ನಮ್ಮ ಕಾರ್ಯಕರ್ತರು ಅಗತ್ಯವಿರುವವರಿಗೆ ಎಲ್ಲ ಸಹಾಯ ನೀಡಲಿದ್ದಾರೆ ಎಂದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭೀಕರ ಅನಾರೋಗ್ಯಕರ ವಾತಾವರಣದಲ್ಲಿ ಸಾರ್ವಜನಿಕರ ಸಹಾಯಕ್ಕೆ ನಿಲ್ಲುವಲ್ಲಿ ವಿಫಲವಾಗಿರುವುದು ವಿಷಾದದ ಸಂಗತಿ. ತಾಲೂಕು ಆಡಳಿತದ ಆರೋಗ್ಯಾ ಧಿಕಾರಿಗಳು ನಿರ್ಲಕ್ಷÂ ಮಾಡದೆ ಕೊರೊನಾ ವಿಷಯದಲ್ಲಿ ಕಾಳಜಿ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖುರ್ಷಿದ್‌ ಅಹ್ಮದ್‌ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ್‌ ಪವಾಡಿ, ಟಿಎಚ್‌ಒ ಡಾ.ಲಿಂಗರಾಜು, ವೈಧಿದ್ಯಾ ಕಾರಿ ಡಾ.ಮಾರುತಿ ಚಿಕ್ಕಣ್ಣನವರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ರಂಗನಗೌಡ ಪಾಟೀಲ, ಪುಟ್ಟಪ್ಪ ನರೇಗಲ್‌, ಮುಖಂಡರಾದ ಯಾಸೀರ್‌ಖಾನ್‌ ಪಠಾಣ, ಶಿವು ಭದ್ರಾವತಿ, ಶಿವು ತಳವಾರ, ರಾಜೂ ಗುಡಿ, ಪರಶುರಾಮ್‌ ಖಂಡೂನವರ, ರವಿ ದೇಶಪಾಂಡೆ, ದಾನಪ್ಪ ಗಂಟೇರ, ಬಸವರಾಜ್‌ ಹಾದಿಮನಿ, ವಿರೂಪಾಕ್ಷಪ್ಪ ಕಡಬಗೇರಿ, ಇರ್ಫಾನ್‌ ಇನಾಂದಾರ, ನಾಗರಾಜ್‌ ಕ್ಯಾಬಳ್ಳಿ, ಶ್ರೀನಿವಾಸ್‌ ಭದ್ರಾವತಿ, ಪ್ರಸಾದ್‌ ಹೊನ್ನಗೌಡ್ರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next