Advertisement
ಉತ್ತರ ಕನ್ನಡದ ಹಳ್ಳಿಗಳಿಗೆ ತ್ವರಿತ ಸೇವೆ ಕೊಡಬೇಕು ಎಂಬ ಆಶಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ಮೊಬೈಲ್ ಬ್ಯಾಂಕ್ ಉದ್ಘಾಟನೆಯಾಗಿದ್ದು, ಈ ಮಾಸಾಂತ್ಯದೊಳಗೆ ನಿಗದಿತ ದಿನ, ನಿಗದಿತ ಸಮಯಕ್ಕೆ ಜಿಲ್ಲೆಯ ವಿವಿಧೆಡೆ ಓಡಾಡಲು ಮಾರ್ಗಸೂಚಿ ಪ್ರಕಾರ ಕೆಲಸ ಮಾಡಲಿದೆ. ಕೆಡಿಸಿಸಿ ಬ್ಯಾಂಕ್ ಇದನ್ನು ನಿರ್ವಹಿಸಲಿದೆ.
Related Articles
Advertisement
ಏನೇನಿದೆ ಇಲ್ಲಿ?: ಮೊಬೈಲ್ ಬ್ಯಾಂಕ್ ವಾಹನ ಅತ್ಯಂತ ಸುಸಜ್ಜಿತವಾಗಿದೆ. ದೊಡ್ಡ ಟೆಂಪೋ ಮಾದರಿ ವಾಹನದಲ್ಲಿ ಎಟಿಎಂ ಕೇಂದ್ರವಿದೆ. ಇನ್ನೊಂದಡೆ ಬ್ಯಾಂಕ್ ಶಾಖೆ ಕೂಡ ಇದೆ. ಎರಡು ಕಂಪ್ಯೂಟರ್ ಒಳಗೊಂಡ ಭಾಗದಲ್ಲಿ ನಗದು ವಿಭಾಗ ಕೂಡ ಇದೆ.
ಇಡೀ ಕೌಂಟರ್ ಹವಾನಿಯಂತ್ರಿತವೂ ಆಗಿದ್ದು, ಜಿಪಿಎಸ್ ಸೇರಿದಂತೆ ಆಧುಕಿನ ಸೌಲಭ್ಯಗಳೂ ಇವೆ. ಐದು ಕೆವಿ ಜನರೇಟರ್, ಬ್ಯಾಟರಿ ಬ್ಯಾಂಕ್ ಆಫ್ ಕೂಡ ಅಳವಡಿಸಲಾಗಿದೆ. ಸರಕಾರಗಳ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತ ಕೆಡಿಸಿಸಿ ಬ್ಯಾಂಕ್ ಮಾಹಿತಿಗಳನ್ನೂ ಡಿಜಿಟಲ್ ಟಿವಿ ಮೂಲಕ ಬಿತ್ತರಿಸಲಾಗುತ್ತದೆ. ರಜಾ ದಿನ ಹೊರತಪಡಿಸಿ ಬೆಳಗ್ಗೆ 10ರಿಂದ ಸಂಜೆ 5ರ ತನಕ ಕಾರ್ಯಮಾಡಲಿದೆ.
ಗುಡ್ಡಗಾಡು ಜಿಲ್ಲೆಯಲ್ಲಿ: ಗುಡ್ಡಗಾಡು ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕನದ್ದೇ ಸಮಸ್ಯೆ ಇದೆ. ಆದರೂ ಈ ಪ್ರಯೋಗ ನವೀನವಾದದ್ದೇ. ವಾಹನಗಳ ನಿರ್ವಹಣೆ, ನೆಟ್ವರ್ಕ ಸೌಲಭ್ಯ, ಜನಪರವಾಗಿರುವ ಬ್ಯಾಂಕ್ ಸಿಬ್ಬಂದಿಗಳಿಂದ ಇದನ್ನು ಇನ್ನಷ್ಟು ಜನಪ್ರಿಯಗೊಳಿಸಬಹುದು.
ಬ್ಯಾಂಕ್ ಖಾತೆಯೇ ಇನ್ನೂ ಆಗದ ಅನೇಕ ಮಹಿಳೆಯರು, ವೃದ್ಧರು ಇದ್ದಾರೆ. ಅಂಥವರಿಗೂ ಇದು ನೆರವಾದರೆ ಸರಕಾರದ ಸೌಲಭ್ಯಗಳಿಗೂ ಅನುಕೂಲ ಆಗಬಹುದು. ಮನೆಬಾಗಿಲಿಗೆ ಬ್ಯಾಂಕ್ ಸೌಲಭ್ಯ ಯಶಸ್ಸಿಗೆ ಸಿಬ್ಬಂದಿಗಳ ಉತ್ಸುಕತೆ ಜನರಿಗೆ ತಲುಪಬೇಕಿದೆ.