Advertisement
ಈ ಕುರಿತು ಮಾಹಿತಿ ನೀಡಿದ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಹೆಗಡೆಭತ್ತಗುತ್ತಿಗೆ ಹಾಗೂ ಇತರರು, ಜ.25 ರಿಂದ 27ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೀವಗಿ ರಮಾನಂದ ಸ್ವಾಮೀಜಿ ಹಾಗೂ ಸೋಂದಾ ಸ್ವರ್ಣವಲ್ಲೀ ಶ್ರೀಗಳು
ಸಾನ್ನಿಧ್ಯ ವಹಿಸಲಿದ್ದಾರೆ. ಆಗಮ ಪಂಡಿತ ಷಡಕ್ಷರಿ ಕೃಷ್ಣ ಭಟ್ಟ ಗೋಕರ್ಣ ಅವರ ಪ್ರಧಾನ ಆಚಾರ್ಯತ್ವದಲ್ಲಿ ಪ್ರತಿಷ್ಠಾ ವಿಧಿ ವಿಧಾನಗಳು ನಡೆಯಲಿವೆ ಎಂದು ವಿವರಿಸಿದರು.
ಜೀವ ರಕ್ಷಣೆಗಾಗಿ ಇಲ್ಲಿ ಬಂದು ನೆಲೆ ನಿಂತಿದ್ದನು. ಬಳಿಕ ಮಂದಿರ ನಿರ್ಮಾಣ ಮಾಡಿದ್ದಾನೆ ಎಂಬ ಉಲ್ಲೇಖವಿದೆ. 400 ವರ್ಷಗಳಿಂದ ಶಿವಪ್ಪ ನಾಯಕನಿಂದಲೇ ಕಡತೋಕದ ಅರ್ಚಕ ಕುಟುಂಬದವರು ಈ ದೇವಾಲಯದ ದೇವರ ಅರ್ಚನೆಗೆ ಬಂದವರು. ಪೂಜೆ ಪುನಸ್ಕಾರಗಳನ್ನೂ ಅದೇ ಕುಟುಂಬ ನಡೆಸಿಕೊಂಡು ಬಂದಿದ್ದು ಕಾಲಾಂತರದಲ್ಲಿ ಇದು
ಗ್ರಾಮದ ದೇವಸ್ಥಾನವಾಗಿದೆ. 1988ರಲ್ಲಿ ಒಮ್ಮೆ ಜೀರ್ಣೋದ್ಧಾರ ಆಗಿದ್ದರೂ
ಪ್ರಶ° ಮಂಗಲದ ಪ್ರಕಾರ ವೆಂಕಟೇಶ ಭಟ್ಟ ಫಲಕಾಡರ ಮಾರ್ಗದರ್ಶನದಲ್ಲಿ ನೂತನ ದೇವಸ್ಥಾನ ಹಾಗೂ ದೇವರ ಮೂರ್ತಿ ನಿರ್ಮಾಣ ಮಾಡಲಾಗಿದೆ. ವರ್ಲೆಗದ್ದೆ ವೆಂಕಟ್ರಮಣ ಹೆಗಡೆ ದೇವರ ಮೂರ್ತಿ ಕೆತ್ತನೆ
ಮಾಡಿಕೊಟ್ಟಿದ್ದಾರೆ. ವಾಸ್ತುಶಿಲ್ಪಿ ಮಹೇಶ ಮುನಿಯಂಗಳ ಅವರ
ಮಾರ್ಗದರ್ಶನಲ್ಲಿ ಕೇರಳ ಮಾದರಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿ ಗೋಪು ತಾಮ್ರ ಹೊದಿಕೆ ಮಾಡಲಾಗಿದೆ ಎಂದರು. ಗ್ರಾಮಸ್ಥರು, ಬೇರೆಡೆ
ಉದ್ಯೋಗದಲ್ಲಿರುವವರು ಹಾಗೂ ಈ ಗ್ರಾಮದ ತವರಿನ ಹೆಣ್ಣು ಮಕ್ಕಳು ಉದಾರವಾಗಿ ನೆರವಾಗಿದ್ದಾರೆ. ಈಗಾಗಲೇ 35 ಲಕ್ಷ ರೂ. ವಿನಿಯೋಗಿಸಲಾಗಿದೆ. 25ರಂದು ಬೆಳಗ್ಗೆ
ಸಾಮೂಹಿಕ ಪ್ರಾರ್ಥನೆ ಗಣೇಶ ಯಾಗ, ಬಿಂಬ ಪರಿಗ್ರಹ, ಬಿಂಬಾ ವಾಸಗಳು, ರಾತ್ರಿ ಯಾಗಶಾಲಾ ಪ್ರವೇಶ, ಕುಂಡ ಸಂಸ್ಕಾರಗಳು ನಡೆಯಲಿವೆ.
Related Articles
ಶ್ರೀಗಳಿಂದ ಪ್ರತಿಷ್ಠಾಪನೆ, ಶಿಖರ ಪ್ರತಿಷ್ಠೆ ಹೋಮಗಳು ನಡೆಯಲಿವೆ. 27ರಂದು ಕಲಾ ಸಾನ್ನಿಧ್ಯ, ಸ್ವರ್ಣವಲ್ಲೀ ಶ್ರೀಗಳಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 4ಕ್ಕೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಬಳಿಕ ತಾಳಮದ್ದಲೆ ನಡೆಯಲಿದೆ ಎಂದರು.
Advertisement
ದೇವಸ್ಥಾನದ ಕಾರ್ಯದರ್ಶಿ ಶಿವಾನಂದ ಹೆಗಡೆ ಉಗ್ರೇಸರ, ಎಲ್. ಎಂ. ಹೆಗಡೆ, ವಿಶ್ವನಾಥ ಶರ್ಮಾ ನಾಡಗುಳಿ, ಗಣಪತಿ ಭಟ್ಟ, ರಾಮಚಂದ್ರ ಭಟ್ಟ, ಶ್ರೀಧರ ಭಟ್ಟ ದೊಡ್ಮನೆ, ಮಹಾಬಲ ಭಟ್ಟ, ಗಜಾನನ ಹೆಗಡೆ, ಲಕ್ಷೀಕಾಂತ ಭಟ್ಟ, ಮಂಜುನಾಥ ಹೆಗಡೆ, ನಾಗಪತಿ ಗಡೆ ಬಾವಿಕೈ ಇತರರು ಇದ್ದರು.