Advertisement

ಹೆಸರಿಗೆ ಮಾತ್ರ ಪಾರ್ಕಿಂಗ್‌ ಸ್ಥಳ-ತಪ್ಪದ ಅಪಾಯ!

03:25 PM Mar 01, 2020 | Naveen |

ಶಿರಸಿ: ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಾ.3 ರಿಂದ ಆರಂಭವಾಗುತ್ತಿದೆ. ನಗರಕ್ಕೆ ಆಗಮಿಸುವ ಭಕ್ತರ, ವರ್ತಕರ, ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನ ದಟ್ಟನೆ ನಿಯಂತ್ರಣ ಹಾಗೂ ಪಾರ್ಕಿಂಗ್‌ ಸ್ಥಳ ಕೊಡುವದು ನಗರದ ಪೊಲೀಸರಿಗೆ, ಅಧಿಕಾರಿಗಳಿಗೆ ದೊಡ್ಡ ತಲೆನೋವು. ಆದರೆ, ಇರುವ ಸ್ಥಳವೂ ಅಪಾಯದ ಕರಗಂಟೆ ಬಾರಿಸುವಂತಿದೆ.

Advertisement

ಶಿರಸಿ ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆಗಳಿದ್ದರೂ ಪಾರ್ಕಿಂಗ್‌ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ. ನಿತ್ಯ ಸಾವಿರಾರು ವಾಹನಗಳು, ಪ್ರವಾಸಿಗರು ಬಂದರೂ ಪಾರ್ಕಿಂಗ್‌ ಸಮಸ್ಯೆ ಕಾಡುತ್ತಿದೆ. ರಸ್ತೆಪಕ್ಕ ನಿಲ್ಲಿಸಿದರೆ ಪೊಲೀಸರು ದಂಡ ವಿಧಿಸಿದ ಘಟನೆಗಳೂ ನಡೆದಿದೆ ನಗರದ ಜನ ನಿಬಿಡ ರಸ್ತೆಗಳಲ್ಲಿ ಒಂದಾದ ಇಲ್ಲಿನ ಯಲ್ಲಾಪುರ ರಸ್ತೆಯ ಅಶ್ವಿ‌ನಿ ವೃತ್ತದಿಂದ ಡೆವಲಪಮೆಂಟ್‌ ಸೊಸೈಟಿ ಏರಿ ತನಕ ಸದಾ ವಾಹನ ಜಂಗುಳಿ ಇರುತ್ತದೆ. ಇಲ್ಲೇ ಎರಡಕ್ಕೂ ಹೆಚ್ಚು ಹೋಟೆಲ್‌ ಗಳು ಕಾರಣವಾಗಿದೆ. ರಾತ್ರಿ ನಗರ ಮಾರ್ಗವಾಗಿ ಬೆಂಗಳೂರಿಗೆ ತೆರಳುವ 50ಕ್ಕೂ ಅಧಿಕ ಖಾಸಗಿ ಬಸ್‌ ಗಳು ಸಾಮ್ರಾಟ್‌ ಹೋಟೆಲ್‌, ಅಶ್ವಿ‌ನಿ ವೃತ್ತ ಪಿಕ್‌ಅಪ್‌ ಪಾಯಿಂಟು ನೀಡುತ್ತಿವೆ. ಒತ್ತಡ ಗಮಿನಿಸಿಯೇ ಈ ಮೊದಲು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸ್ಥಳವಾದ ಸಾಮ್ರಾಟ್‌ ಹೋಟೆಲ್‌ ಮುಂಭಾಗದ ಸ್ಥಳ ತೆರವುಗೊಳಿಸಲಾಗಿತ್ತು. ಕಳೆದ ಜಾತ್ರೆ ಅವಧಿಯಲ್ಲೂ ಇಲ್ಲೂ ಪಾರ್ಕಿಂಗ್‌ ಸೌಲಭ್ಯ ಕೊಡಲಾಗುತ್ತದೆ ಎಂದೂ ಇದ್ದ ಗಟಾರಕ್ಕೆ ಮೇಲ್ಮುಚ್ಚಿಗೆ ಹಾಕಲಾಗಿತ್ತು.ದೊಡ್ಡ ದೊಡ್ಡ ವಾಹನಗಳು, ಕಾರುಗಳು ನಿಲ್ಲಲು ಸುರಕ್ಷಿತ ಹಾಗೂ ಅ ಧಿಕೃತ ಸ್ಥಳವೂ ಆಗಿತ್ತು.

ಕೆಲವಡೆ ಗಟಾರಕ್ಕೆ ಹಾಕಲಾದ ಸಿಮೆಂಟ್‌ ಮುಚ್ಚಳಗಳ ಕಳಪೆ ಕಾರಣದಿಂದ ಟ್ರಕ್‌ ಹೋದ ಕೂಡಲೆ ಕಟ್‌ ಆದವು. ಈಗಲೂ ಐನೂರು ಮೀಟರ್‌ ಉದ್ದನೆಯ ಮುಚ್ಚಳದ ನಡುವೆ ಗಟಾರದಲ್ಲೇ ಬಿದ್ದ, ತೂತಾದ, ತಂತಿ ಮೇಲೆದ್ದ ಸಿಮೆಂಟ್‌ ಹಲಗೆಗಳು ವಾಹನಗಳಿಗೂ, ಪಾದಚಾರಿಗಳಿಗೂ ಅಪಾಯ ತಂದಿಡುತ್ತಿದೆ. ಈಗಾಗಲೇ ಇದನ್ನು ನಿರ್ವಹಣೆ ಮಾಡಿದ ಲೋಕೋಪಯೋಗಿ ಇಲಾಖೆಗೂ, ನಗರದೊಳಗಿನ ರಸ್ತೆಗಳ ಜವಾಬ್ದಾರಿ ಹೊತ್ತ ನಗರಸಭೆಗೂ, ತಾಲೂಕು ಆಡಳಿತಕ್ಕೂ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ವಿವಿಧ ಸಭೆಗಳಲ್ಲಿ ಸೂಚನೆ ನೀಡಿದ್ದರೂ ಪ್ರಯೋಜನ ಆಗಿಲ್ಲ. ಜಾತ್ರೆಗೆ ಬರುವ ಪ್ರವಾಸಿಗರು ಇಲ್ಲಿ ವಾಹನ ನಿಲ್ಲಿಸಲು ಹೋದರೆ ಕಾಣದೇ ಗಟಾರದಲ್ಲಿ ಗಾಳಿ ಇಳಿಸಿಕೊಳ್ಳುವ ಅಥವಾ ಇವರೇ ಬೀಳುವ ಅಪಾಯಗಳೂ ಇವೆ.

ಕಳೆದ ವರ್ಷವೇ ರಾಜ್ಯದ ಪ್ರಸಿದ್ಧ ಲೇಖಕರೊಬ್ಬರ ಕಾರೂ ಇಲ್ಲಿ ಬಿದ್ದು ಹೋಗಿತ್ತು. ಅನೇಕ ಬೈಕ್‌ ಸವಾರರು ಕೂಡ ಉದಿರು ಬಿದ್ದದ್ದೂ ಇದೆ. ಈ ನಿರ್ಲಕ್ಷ್ಯಕ್ಕೆ ಹೊಣೆ ಯಾರು, ಒಂದೊಳ್ಳೆ ಪಾರ್ಕಿಂಗ್‌ ಸ್ಥಳದಲ್ಲಿ ಅಪಾಯಕಾರಿ ವಾತಾವರಣ ನಿರ್ಮಾಣ ಮಾಡಿದ್ದು ಸರಿನಾ ಎಂಬ ಪ್ರಶ್ನೆ ಎದ್ದಿದೆ.

ಈ ಮಧ್ಯೆ ನಗರಸಭೆ ಇಲ್ಲೊಂದು ಶೌಚಾಲಯ ಕೂಡ ನಿರ್ಮಾಣ ಮಾಡಿದ್ದು, ಅದಕ್ಕೆ ನೀರಿನ ವ್ಯವಸ್ಥೆ, ವಿದ್ಯುತ್‌ ವ್ಯವಸ್ಥೆ ಕೂಡ ಸರಿಯಾಗಿಲ್ಲದೇ ರಾತ್ರಿ ಬರುವ ಪ್ರವಾಸಿಗರು, ದೂರದೂರಿನ ಖಾಸಗಿ ಬಸ್ಸಿನ ಪ್ರಯಾಣಿಕರು ಮೂತ್ರ ವಿಸರ್ಜನೆಗೂ ಹೋಟೆಲ್‌ ಆಶ್ರಯಿಸುವದು ಅನಿವಾರ್ಯ ಆಗಿದೆ.

Advertisement

ಈ ಶೌಚಾಲಯದ ಸಮರ್ಪಕ ನಿರ್ವಹಣೆ ಹಾಗೂ ಸಾಮ್ರಾಟ್‌ ಎದುರಿನ ಪಾರ್ಕಿಂಗ್‌ ಸ್ಥಳದ ಕೊರತೆ ಹಾಗೂ ಅಪಾಯ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆ ಜವಬ್ದಾರಿ ಹೊರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next