Advertisement

ಜೀವಜಲ ರಕ್ಷಣೆಗೂ ಸೈ ಮತದಾನ ಜಾಗೃತಿಗೂ ಜೈ!

05:35 PM Mar 27, 2019 | Team Udayavani |
ಶಿರಸಿ: ಎನ್ನೆಸ್ಸೆಸ್‌ ಯೋಜನೆ. ಆದರೆ, ಜಿಲ್ಲಾ ಎನ್ನೆಸ್ಸೆಸ್‌ ಸೂಚನೆ ಮೇರೆಗೆ ವಿವಿಧ ಕಾಲೇಜುಗಳ ಘಟಕಗಳು ನಾನು ಸೇವೆ ಸಲ್ಲಿಸತ್ತೇನೆ ಎಂಬ ವಿನಯದ ಕಾರ್ಯಕ್ಕೆ ಮುಂದಾಗಿದೆ. ಕೆರೆ ಜಲ ಸಂರಕ್ಷಣೆ ಜಾಗೃತಿಗೂ, ಮತದಾನದ ಕುರಿತು ಅರಿವು ಮೂಡಿಸಲೂ ಹೆಜ್ಜೆ ಇಟ್ಟಿವೆ. ಒಣಗುತ್ತಿರುವ ಭೂಮಿಯಲ್ಲಿ ಹಸಿರು ಫಸಲು ಮೂಡಿಸಲು ಮುಂದಾಗಿವೆ.
ಜಿಲ್ಲೆಯಲ್ಲಿ 41 ಎನ್ನೆಸ್ಸೆಸ್‌ ಘಟಕಗಳು ವಿವಿಧ ಪಿಯು ಹಾಗೂ ಕಾಲೇಜು ವಿಭಾಗದಲ್ಲಿ ಕಾರ್ಯ
ಮಾಡುತ್ತಿವೆ. ಒಂದೊಂದೂ ಘಟಕಗಳು ನೆಲ ಜಲ ಸಂರಕ್ಷಣೆ ಹೆಸರಿನಲ್ಲಿ ಫಣತೊಟ್ಟು ತಲಾ ಒಂದೊಂದು ಕೆರೆಯ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವಲ್ಲಿ ಸಕ್ರೀಯವಾಗಿವೆ. ಮುಚ್ಚಿಹೋದ ಕಲ್ಯಾಣಿ, ಕೆರೆ, ಸ್ವಚ್ಛಗೊಳಿಸಿ, ಕೆಲವು ಕೆರೆಗಳ ಹೂಳನ್ನೂ ತೆಗೆದು ಯುವ ಶಕ್ತಿ ಮೂಲಕ ಮಾದರಿ ಮೇಲ್ಪಂಕ್ತಿ ಹಾಕಿವೆ. ನೀರಿನ ಮೂಲ ಹರಿಯುವಂತೆ ಮಾಡಿದಲ್ಲಿ ಇಡೀ ಜಿಲ್ಲೆಯ ಸುಮಾರು ಮೂರು ಸಾವಿರ ವಿದ್ಯಾರ್ಥಿ‌ಳ ಕರಗಳು ಈ ಕಾರ್ಯಕ್ಕೆ ಕಂಕಣ ಕಟ್ಟಿವೆ. ಎನ್ನೆಸ್ಸೆಸ್‌ ಜಿಲ್ಲಾ ನೋಡೆಲ್‌ ಅಧಿ ಕಾರಿ ಜಿ.ಟಿ. ಭಟ್ಟ ಈ ಹಿಂದಿನ ಶಕ್ತಿ ಆಗಿದ್ದಾರೆ. ಏನಾದರೂ ಹೊಸತನ ಮಾಡಬೇಕು ಎಂಬ ತುಡಿತದಲ್ಲಿರುವ ಇಲ್ಲಿನ ಎಂಇಎಸ್‌ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಜಿ.ಟಿ. ಭಟ್ಟ ತಂಡ ಯುವ ಶಕ್ತಿಗೆ ಹೊಸ ಉಮೇದು ಕೊಟ್ಟಿದೆ.
ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಸ್ತಾವನೆ ನೋಡಿದ ಧಾರವಾಡ ವಿವಿ ಕುಲಪತಿಗಳು ಧಾರವಾಡ, ಹಾವೇರಿ, ಗದಗ ಒಳಗೊಂಡ ಧಾವರಾಡ ವಿವಿಗೆ ಇದೇ ಜೀವಜಲ ಸಂರಕ್ಷಣೆ ಎನ್ನೆಸ್ಸೆಸ್‌ ಹೊಣೆ ಎಂದು ಘೋಷಿಸಿ ಕಾರ್ಯ ಮಾಡಿಸುತ್ತಿದ್ದಾರೆ. ಈ ಕಾರಣದಿಂದ 211 ಎನ್ನೆಸ್ಸೆಸ್‌ ಘಟಕಗಳು, 10 ಸಾವಿರ ವಿದ್ಯಾರ್ಥಿಗಳ ಪಡೆ ಹೊಸ ಶಕ್ತಿಯಾಗಿ ಪರಿಣಮಿಸಿದೆ. ಕಳೆದ ವರ್ಷ ಸ್ವಚ್ಛ ಭಾರತ ಅಭಿಯಾನದಲ್ಲೂ ಮುಂಚೂಣಿಯಲ್ಲಿತ್ತು ಎಂಬುದು ಉಲ್ಲೇಖನೀಯ.
ಮತದಾನ ಜಾಗೃತಿಗೂ ಜೈ:ಮತದಾರರು ತಪ್ಪದೇ ಮತದಾನದಲ್ಲಿ ಪಾಲ್ಗೊಂಡು ಭಾರತವನ್ನು ಸದೃಢಗೊಳಿಸುವಂತಾಗಬೇಕು ಎಂಬುದು ಎಲ್ಲರ ಒಲವು. ಇದಕ್ಕಾಗಿ ಮತದಾನ ಕಡ್ಡಾಯವಾಗಬೇಕು. ಈ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ ಕೂಡ ಆಗಬೇಕು. ಇದಕ್ಕಾಗಿ ಜಿಲ್ಲೆಯ ಪದವಿ ಕಾಲೇಜುಗಳ ಎನ್ನೆಸ್ಸೆಸ್‌ ಘಟಕಗಳು ಸಹ ಗ್ರಾಮೀಣ ಭಾಗದಲ್ಲಿ ಮತದಾರರಲ್ಲಿ ಅರಿವು ಮೂಡಿಸಲು ಮುಂದಾಗಿವೆ.
ಸುಶಿಕ್ಷಿತರ ಪ್ರಮಾಣ ಹೆಚ್ಚಾದರೂ ಸಹ ಚುನಾವಣೆಗಳಲ್ಲಿ ಮತದಾನ ಪ್ರಮಾಣ ನಿರೀಕ್ಷೆಯಷ್ಟು ಸಾಧ್ಯವಾಗುತ್ತಿಲ್ಲ ಎಂಬ ಬೇಸರದ ಮಧ್ಯೆ ಹೊಸ ಮತದಾರರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರುಂಟೇ? ಹಳಬರು ಮತದಾನ ಮಾಡದೇ ಇರಬೇಡಿ ಎಂಬ ಕಳಕಳಿಯ ಕಾರ್ಯಕ್ಕೂ ಮುಂದಾಗಿವೆ. ಕಳೆದ ವಿಧಾನ ಸಭೆ ಹಾಗೂ ಈ ವರ್ಷದ ಲೋಕಸಭಾ ಚುನಾವಣೆಯಲ್ಲೂ ಪದವಿ ಕಾಲೇಜುಗಳ ಎನ್ನೆಸ್ಸೆಸ್‌ ಘಟಕಗಳು ಕಾರ್ಯೋನ್ಮುಖವಾಗಿರುವುದು ವಿಶೇಷವಾಗಿದೆ.
ಹೀಗಾಗಿ ಮತ ಪ್ರಮಾಣ ಹೆಚ್ಚಿಸಲು ಮತದಾರರೇ ಮತಗಟ್ಟೆಗೆ ಬನ್ನಿ… ನಿಮ್ಮ ಹಕ್ಕು ಚಲಾಯಿಸಿ ಎಂದು ಮತದಾರರಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗ ಜಿಲ್ಲಾ ಸ್ವೀಪ್‌ ಸಮಿತಿ ಮೂಲಕ ಜಾಗೃತಿ ಕೈಗೊಂಡಿದ್ದು ಇನ್ನೊಂದು ನಡೆಯಾಗಿದೆ.
ಜಿಲ್ಲೆಯ ಅನುದಾನಿತ ಹಾಗೂ ಸರಕಾರಿ ಪದವಿ ಕಾಲೇಜುಗಳು, ಬಿಎಡ್‌ ಕಾಲೇಜುಗಳಲ್ಲಿ ಒಟ್ಟು
41ಎನ್ನೆಸ್ಸೆಸ್‌ ಘಟಕಗಳಿವೆ. ಒಟ್ಟು 2500 ಸ್ವಯಂ ಸೇವಕರನ್ನು ಒಳಗೊಂಡಿದೆ. ಎನ್ನೆಸ್ಸೆಸ್‌ ಘಟಕಗಳು ಜಿಲ್ಲಾ ಸ್ವೀಪ್‌ ಸಮಿತಿ ಸಹಯೋಗದಲ್ಲಿ ಜಾಗೃತಿಗೆ ಅಣಿಯಾಗುವ ಮೊದಲು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿವೆ. ಆ ಗ್ರಾಮಗಳಲ್ಲಿ ಮತದಾರರಲ್ಲಿ ಅರಿವಿನ ಕಾರ್ಯಕ್ಕೆ ಸಂಚಾರ ನಡೆಸಿವೆ.
ಪ್ರೊ| ಜಿ.ಟಿ. ಭಟ್ಟ
ಎನ್ನೆಸ್ಸೆಸ್‌ ಜಿಲ್ಲಾ ನೋಡಲ್‌ ಅಧಿಕಾರಿ.
ರಾಘವೇಂದ್ರ ಬೆಟ್ಟಕೊಪ್ಪ 
Advertisement

Udayavani is now on Telegram. Click here to join our channel and stay updated with the latest news.

Next