Advertisement

ಶಿರಸಿ : ದೀಪಕ ಹೊನ್ನಾವರ ಅಭಿಮಾನಿ ಬಳಗದಿಂದ ಆಟೋ ಚಾಲಕರಿಗೆ ಫುಡ್ ಕಿಟ್ ವಿತರಣೆ

04:12 PM Jul 12, 2021 | Team Udayavani |

ಶಿರಸಿ : ಇಲ್ಲಿನ ದೀಪಕ ಹೊನ್ನಾವರ ಅಭಿಮಾನಿ ಬಳಗದಿಂದ ಬಸ್ ಸ್ಟ್ಯಾಂಡ್ ಸಮೀಪವಿರುವ ಆಟೋ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಒಳಗಾದ ಆಟೋ ಚಾಲಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು.

Advertisement

ಕಿಟ್ ವಿತರಣೆ ಮಾಡಿ ಮಾತನಾಡಿದ ಸುಷ್ಮಾ ರಾಜಗೋಪಾಲ್, ನಗರದಲ್ಲಿರುವ ಆಟೋ ಚಾಲಕರಿಗೆ ಆಹಾರವಸ್ತುಗಳನ್ನು ವಿತರಿಸುತ್ತದ್ದೇವೆ.ಕೋವಿಡ್ ಲಾಕ್ ಡೌನ್ ಸಂಕಷ್ಟದಲ್ಲಿ ತೊಂದರೆಗೊಳಗಾದ ಆಟೋ ಮಾಲಕರು,ಚಾಲಕರು ಜೀವನ ನಡೆಸಲು ಕಷ್ಟ ಪಟ್ಟಿದ್ದಾರೆ.ಟ್ಯಾಕ್ಸ್ ತುಂಬಲು,ಆಟೋ ಸುಸ್ಥಿತಿಯಲ್ಲಿ ಇಡಲು ತೊಂದರೆ ಅನುಭವಿಸಿದ್ದಾರೆ.ಅವರಿಗೆ ನಮ್ಮ ಕಡೆಯಿಂದ ಸಣ್ಣ ಸಹಾಯವನ್ನು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ :  ದಲೈ ಲಾಮಾ ಹುಟ್ಟುಹಬ್ಬ ಆಚರಣೆ; ಲಡಾಖ್ ಡೆಮ್ ಚುಕ್ ಪ್ರವೇಶಿಸಿ ಚೀನಾ ಸೈನಿಕರಿಂದ ಪ್ರತಿಭಟನೆ

ಸಿದ್ದಾಪುರ ನಗರದ ಟೆಂಪೋ ,ಆಟೋ ಚಾಲಕರು,ಸಹಾಯಕರಿಗೆ ಆಹಾರ ಕಿಟ್ ವಿತರಣೆಯನ್ನು ಮಾಡುತ್ತೇವೆ. ನಂತರ ಶಿರಸಿ ಮತ್ತು ಸಿದ್ದಾಪುರದ ಗ್ರಾಮೀಣ ಪ್ರದೇಶಗಳ ಪಂಚಾಯತ ಮಟ್ಟದಲ್ಲಿ ತೊಂದರೆಗೊಳಗಾದ ಆಯ್ದ ಬಡವರಿಗೆ ಆಹಾರ ಕಿಟ್ ವಿತರಿಸುತ್ತೇವೆ. ಎಲ್ಲರ ಸಹಕಾರದೊಂದಿಗೆ ಈ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸತೀಶ್ ನಾಯ್ಕ್ ಮಧುರವಳ್ಳಿ ಸ್ವಾಗತಿಸಿದರು.

Advertisement

ನಂತರ ನೀಲೆಕಣಿ,ಅಗಸೇಬಾಗಿಲು,ಕರ್ಜಗಿ ಕಲ್ಯಾಣಮಂಟಪ,ಸರಕಾರಿ ಆಸ್ಪತ್ರೆ,ಹೊಸ ಬಸ್ ಸ್ಟ್ಯಾಂಡ್, ಸಾಮ್ರಾಟ್ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿ ಚಾಲಕರಿಗೆ ಆಹಾರ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಸೂರ್ಯಪ್ರಕಾಶ ಹೊನ್ನಾವರ, ಸುಮಾ ಉಗ್ರಾಣಕರ್, ಆಟೋ ಚಾಲಕರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ, ರಾಜ್ಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿ ರಾಜು ಉಗ್ರಾಣಕರ್, ಮಹೇಶ ಶೆಟ್ಟಿ ಚಿಪಗಿ, ಕಿಸಾನ್ ಕಾಂಗ್ರೆಸ್ ನ ಮಾಲತಿ ಮರಾಠೆ, ಹಿರಿಯ ಕಾಂಗ್ರೆಸ್ಸಿಗರಾದ ಪಠಾಣ್ ಸಾಹೇಬ್ರು, ಶಂಕರ ಗುಡ್ಡದಮನೆ, ನಾಗಪ್ಪ ಪಟಗಾರ,ಸಲೀಂ,ಈಶ್ವರ ಆಚಾರಿ, ಸುರೇಶ ಮುಂತಾದವರು ಪಾಲ್ಗೊಂಡು ಕಿಟ್ ವಿತರಿಸುವಲ್ಲಿ ಸಹಕರಿಸಿದರು.

ಇದನ್ನೂ ಓದಿ : ಎಸ್ಎಸ್ಎಲ್ ಸಿ: ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು ಎಂದ ಸುರೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next