Advertisement

ಶಿರಸಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸಭೆ

08:21 PM Sep 20, 2021 | Team Udayavani |

ಶಿಸಿ: ಗುಡ್ಡಗಾಡು‌ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವೃತ್ತ ವ್ಯಾಪ್ತಿಯಲ್ಲಿ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ‌ ಮಹತ್ವದ  ಸಭೆ ಬೆಂಗಳೂರಿನಲ್ಲಿ ನಡೆಯಿತು.

Advertisement

ಶಿರಸಿ ವೃತ್ತದಲ್ಲಿ 33 ಕೆವಿ ರೆಫೆರನ್ಸ್ ಗಳನ್ನು ಕಲ್ಪಿಸಿಕೊಡುವ, ಶಕ್ತಿ ಪರಿವರ್ತಕಗಳನ್ನು ವೃದ್ಧಿಸುವ ಕಾಮಗಾರಿಗಳು ಹಾಗೂ ಇನ್ನಿತರೆ ಕಾಮಗಾರಿಗಳನ್ನು ಕೆ.ಪಿ.ಟಿ.ಸಿ.ಎಲ್ ವತಿಯಿಂದ ತ್ವರಿತವಾಗಿ ಕೈಗೆತ್ತಿಕೊಳ್ಳುವ ಮಹತ್ವದ ಸಭೆ ಇದಾಗಿತ್ತು.

ಸೋಮವಾರ ವಿಧಾನಸೌಧದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಸಚಿವ ಎಸ್.ಎಮ್.ಹೆಬ್ಬಾರ್ ಹಾಗೂ ಉ.ಕ.ಜಿಲ್ಲೆಯ  ಶಾಸಕ ದಿನಕರ ಶೆಟ್ಟಿ, ಸುನೀಲ್ ನಾಯ್ಕ್,  ಆರ್.ವಿ.ದೇಶಪಾಂಡೆ,  ರೂಪಾಲಿ ನಾಯ್ಕ್ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next