Advertisement

ಶಿರಸಿ: ಮೂವರಿಗೆ ನಮ್ಮನೆ ಪ್ರಶಸ್ತಿ ಪ್ರದಾನ  ಮಾಡಿದ ಚಿತ್ರನಟಿ ತಾರಾ‌

05:29 PM Dec 14, 2021 | Team Udayavani |

ಶಿರಸಿ: ಕಲೆ ಸಾಹಿತ್ಯ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಅಧ್ಬತ ಕಾರ್ಯಕ್ರಮ ನಮ್ಮನೆ ಹಬ್ಬವಾಗಿದೆ ಎಂದು ಚಿತ್ರನಟಿ ತಾರಾ ಅನುರಾಧಾ ಹೇಳಿದರು.

Advertisement

ತಾಲೂಕಿನ ಬೆಟ್ಟಕೊಪ್ಪದಲ್ಲಿ  ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕ ಅಡಿಯಲ್ಲಿ ನಡೆದ ನಮ್ಮನೆ ಹಬ್ಬದ ದಶಮಾನೋತ್ಸವಕ್ಕೆ ಚಾಲನೆ ನೀಡಿ , ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ‌ ಮಾತನಾಡಿದರು.

ನಾವು ಎಲ್ಲೋ ಹೋದರೂ ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿ ಸಿಗುವ ಸಂತಸ ಬೆರೆಲ್ಲೂ ಸಿಗಲು ಸಾಧ್ಯವಿಲ್ಲ.  ಶಿರಸಿಯ ನೆಲ ಜಲ ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳ ತವರೂರು. ಕರುನಾಡಿಗೆ ಕಲಾವಿದರನ್ನುನೀಡಿದ ಶ್ರೇಷ್ಠ ಭೂಮಿ ಶಿರಸಿ.  ತೆರೆಮರೆ ಕಾಯಂತೆ ಇರುವ ಕಲಾವಿದರನ್ನು,ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತೀರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಮ್ಮನೆ ಹಬ್ಬ ಇನ್ನಷ್ಟು ಮತ್ತಷ್ಟು ಜನಪ್ರಿಯತೆ ಪಡೆಯಲಿ ಎಂದರು.

ಇದಕ್ಕೂ‌ ಮುನ್ನ ನಮ್ಮನೆ ಪ್ರಶಸ್ತಿ ಯನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಸೆಲ್ಕೋ ಇಂಡಿಯಾ ಬೆಂಗಳೂರು ಸಿ ಇ ಓ ಮೋಹನ ಹೆಗಡೆ ಯವರಿಗೆ ಹಾಗೂ ನಮ್ಮನೆ ಯುವ ಪುರಸ್ಕಾರ ವನ್ನು ಕಲಾವಿದ ವಿಭವ ಮಂಗಳೂರು ರವರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್,ಪ್ರತಿಯೊಬ್ಬರೂ ಈ ಹಬ್ಬ ನಮ್ಮನೆ ಹಬ್ಬವಾಗಿ ಆಚರಿಸುತ್ತಿದ್ದಾರೆ.ಪ್ರಶಸ್ತಿಯಿಂದೆ ನಾವು ಹೋಗಬಾರದು ಅದೇ ನಮ್ಮನ್ನು ಹುಡುಕಿಕೊಂಡು ಬರಬೇಕು. ಇಂತಹ ಶ್ರೇಷ್ಠ ಕಾರ್ಯಕ್ರಮ ದಲ್ಲಿ ನನ್ನನು ಸನ್ಮಾನಿಸಿರುವುದು ತುಂಬಾ ಸಂತಸ ತಂದಿದೆ ಎಂದರು.

Advertisement

ಸೆಲ್ಕೋದಮೋಹನ ಹೆಗಡೆ ಮಾತನಾಡಿ, ಮುಂದಿನ ವರ್ಷದ ನಮ್ಮನೆ ಹಬ್ಬದಲ್ಲಿ ಐದು ಜನ ಬಡ ಪ್ರತಿಭಾವಂತರಿಗೆ ಬೆಳಕಿಲ್ಲ ಎಂದರೆ ಸೆಲ್ಕೊ ಸಂಸ್ಥೆ ಉಚಿತವಾಗಿ ನೀಡುತ್ತದೆ. ವಿಶ್ವಶಾಂತಿ ಟ್ರಸ್ಟ ಅಂಥವರ ಆಯ್ಕೆ ಮಾಡಿಕೊಡಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿ ಉಮಾಕಾಂತ ಭಟ್ ಮಾತನಾಡಿ,‌ ಕಲಾವಿದರಿಗೆ, ಸಾಹಿತಿಗಳಿಗೆ ಎಲ್ಲರಿಗೂ ಇದು ನಮ್ಮನೆ. ಇನ್ನು

ಬಡಜನರಿಗೆ ಬೆಳಕನ್ನು ನೀಡುವ ಹಬ್ಬ ನಮ್ಮನೆ ಹಬ್ಬವಾಗಲಿದೆ . ನಮ್ಮ ಮುಂದಿನ ಜೀವನದ ಸಂಗತಿ ಚಿತ್ರರಂಗ . ವಿಶ್ವಕ್ಕೆ ಶಾಂತಿಯನ್ನು ಒದಗಿಸಿಕೊಟ್ಟ ಪುಣ್ಯ ಭೂಮಿ ನಮ್ಮ ಭಾರತ ಎಂದರು.

ಈ ಸಂದರ್ಭದಲ್ಲಿ ಚಲನಚಿತ್ರ ನಟ ರಾಮಕೃಷ್ಣ ಹೆಗಡೆ, ಇಂಥದೊಂದು ಸಾಂಸ್ಕೃತಿಕ ಸಂಭ್ರಮ ಎಲ್ಲಡೆ ನಡೆಯಲಿ ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ  ಅನಂತ ಅಶೀಸರ , ಕಲೆಯ‌ ಮೂಲಕ ವಿಶ್ವಶಾಂತಿ ಸಾರುವ ಪ್ರಯತ್ನ ಗಮನೀಯ ಎಂದರು. ಹಿರಿಯ ಪತ್ರಕರ್ತ ರವೀಂದ್ರ ಭಟ್, ಇಂಥ ಪುಟ್ಟ ಊರಿನಲ್ಲಿ ಕುಳಿತು ವಿಶ್ವಶಾಂತಿ ಸಂದೇಶ ಸಾರುವ ಪ್ರಯತ್ನ ನಡೆಯುತ್ತಿದೆ.  ನಮ್ಮನೆ ಹಬ್ಬ ಮಾಡಲು ದೊಡ್ಡ ‌ಮನೆಯೇ ಇರಬೇಕಿಲ್ಲ ಎಂದರು. ಟ್ರಸ್ಟ್ ಅಧ್ಯಕ್ಷೆ  ಭುವನೇಶ್ವರಿ ಹೆಗಡೆ, ಪ್ರೀತಿ ಕಟ್ಟುವ  ಕೆಲಸ ನಡೆಯುತ್ತಿದೆ ಎಂದರು.

ಭಾರತಿ ಹೆಗಡೆ, ಸ್ತುತಿ ಹೆಗಡೆ, ಪಲ್ಲವಿ ಹೆಗಡೆ ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಶಸ್ತಿ ಪತ್ರಿಕೆ ವಾಚಿಸಿದರು.

ಅರೆಹೊಳೆ ಸದಾಶಿವರಾವ್ ನಿರ್ವಹಿಸಿದರು. ಉಪಾಧ್ಯಕ್ಷ ರಮೇಶ ಕಾನಗೋಡ ವಂದಿಸಿದರು. ನಾಡಿನ ಹಲವಡೆಯಿಂದ ಐನೂರಕ್ಕೂ ಅಧಿಕ ಕಲಾ ಆಸಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next