Advertisement
ಹೌದು, ನಾಗರ ಪಂಚಮಿಯ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆ ಇದೆ. ನಾಗರ ಬನದಲ್ಲಿ ಪೂಜೆ ಮಾಡಿ ಭಕ್ತಿ ಶ್ರದ್ಧೆ ಅರ್ಪಿಸುವುದು ನಾಗರ ಪಂಚಮಿಯ ದಿನ ಸರ್ವೇ ಸಾಮಾನ್ಯ. ಆದರೇ, ಇಲ್ಲೊಬ್ಬರು ನಿಜ ನಾಗರ ಹಾವಿಗೆ ಪೂಜೆ ಮಾಡಿ ಹಣ್ಣು ಕಾಯಿ ನೈವೇದ್ಯ ಮಾಡಿ ಭಕಿ ಸಮರ್ಪಿಸಿದ್ದಾರೆ.
Related Articles
Advertisement
ಕಳೆದ ಮೂರು ದಶಕಗಳಿಂದ ನಾಡಿಗೆ ಬಂದ ವಿಷಕಾರಿ ಹಾವನ್ನೂ ಹಿಡಿದು ಕಾಡಿಗೆ ಬಿಟ್ಟ ತಜ್ಞ ತಂದೆ ಸುರೇಶ ಹುಲೇಕಲ್ ಅಗಲಿಕೆಯ ಬಳಿಕವೂ ಕಳೆದ ನಾಲ್ಕು ವರ್ಷದಿಂದ ನಾಗರ ಪಂಚಮಿ ದಿನದಂದು ಕಾಡಿನಲ್ಲಿ ಹಾವು ಹುಡುಕಿ ಅದಕ್ಕೆ ಪೂಜಿಸುವ ಮೂಲಕ ಜನ ಜಾಗೃತಿ ಮಾಡುತ್ತಿರುವ ಉರಗ ಪ್ರೇಮಿ ಪ್ರಶಾಂತ ಹುಲೆಕಲ್ ಹಾಗೂ ಕುಟುಂಬ ಈ ವರ್ಷದ ನಾಗರ ಪಂಚಮಿಗೂ ಅದೇ ಪದ್ಧತಿಯನ್ನು ಮುಂದು ವರಿಸಿದ್ದಾರೆ.
ಹೆಡೆ ಎತ್ತಿ ತಲೆದೂಗಿಸುತ್ತಾ ಆಶೀರ್ವದಿಸುತ್ತಿರುವಂತೆ ನಾಗರ ಹಾವು ಭಕ್ತಿಯನ್ನು ಸ್ವೀಕಾರ ಮಾಡಿಕೊಂಡಿದೆ.
ಇದನ್ನೂ ಓದಿ : ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಿ: ಸಿದ್ದರಾಮಯ್ಯ