Advertisement
ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮಹತ್ವವೂ ಇರುವ ಬನವಾಸಿಯಲ್ಲಿ ಕದಂಬರ ನೆನಪಿನ ಕದಂಬೋತ್ಸವ ಆಚರಣೆ ಪ್ರತೀವರ್ಷ ಗೆಜೆಟ್ ನೋಟಿಫಿಕೇಶನ್ ಅಡಿಯಲ್ಲೇ ಸರಕಾರವೇ ಖುದ್ದಾಗಿ ಆಚರಿಸಬೇಕು. ಇದು ನಾಡಿನ ಹೆಮ್ಮೆಯ ಉತ್ಸವವೂ ಹೌದು.
Related Articles
Advertisement
2008, 09ರ ತನಕವೂ ಕದಂಬೋತ್ಸವವನ್ನು ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ನಡೆಸಲಾಗುತ್ತಿತ್ತು. ಸ್ಥಳೀಯ ಪ್ರತಿಭೆಗಳಿಗೆ, ಜನರಿಗೂ ಪಾಲ್ಗೊಳ್ಳುವ ಅವಕಾಶ ಬೇಕು ಎಂಬ ಕಾರಣಕ್ಕೆ ಸ್ಥಳೀಯರ ಸಮಿತಿಗಳನ್ನೂ ರಚಿಸಲಾಯಿತು. ಬೆಂಗಳೂರಿನ ಹಿರಿಯ ಅಧಿಕಾರಿಗಳು ಎರಡೂ ದಿನ ಉತ್ಸವದಲ್ಲಿ ಪಾಲ್ಗೊಳ್ಳದೇ ವಾಪಸ್ಸಾಗಿದ್ದೂ ನಡೆಯಿತು. ಕೊನೆ ಕೊನೆಗೆ ಜಿಲ್ಲಾಡಳಿತಕ್ಕೇ ಸ್ವಲ್ಪ ಹಣ ನೀಡಿ ಕೈತೊಳೆದುಕೊಳ್ಳುವ ತೀರ್ಮಾನಕ್ಕೂ ಬರಲಾಯಿತು.
ಅರೆಕಾಸಿನ ಮಜ್ಜಿಗೆ?: ಕದಂಬೋತ್ಸವದ ಸಿದ್ಧತೆ, ಪ್ರಚಾರ, ಮೈಕು, ಲೈಟು, ವಿವಿಧ ಸ್ಪರ್ಧಾ ಬಹುಮಾನಗಳು ಸೇರಿದಂತೆ 75ರಿಂದ 80 ಲಕ್ಷ ರೂ.ಗಳಷ್ಟು ವಾರ್ಷಿಕ ವೆಚ್ಚವೇ ಇರುತ್ತದೆ. ಕಳೆದ ಐದಾರು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ನೆರವನ್ನೂ ಪಡೆದು ಉತ್ಸವ ನಡೆಸಲಾಗುತ್ತಿದೆ. ಕೆಲವು ಸಲ ಜಿಲ್ಲಾಡಳಿತ ಖರ್ಚು ವೆಚ್ಚ ತೂಗಿಸಲು ಸ್ಮರಣ ಸಂಚಿಕೆ ಪ್ರಕಟಿಸಿದ್ದೂ ಇದೆ. ಈ ಬಾರಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ವೈಶಿಷ್ಟಪೂರ್ಣವಾಗಿ ಆಚರಿಸಲೂ ಯೋಜಿಸ ಲಾಗುತ್ತಿದೆ. ಸಾಂಸ್ಕೃತಿಕ ಔತಣದ ಜೊತೆ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣಗಳ ಮೂಲಕವಾದರೂ ಪಂಪನನ್ನು ನೆನಪಿಸುವ ಕಾರ್ಯವೂ ಆಗಬೇಕು ಎಂಬ ಹಕ್ಕೊತ್ತಾಯ ಕೂಡ ಇದೆ.
ಈ ಬಾರಿ ಈಗಾಗಲೇ ಪ್ರವಾಸೋದ್ಯಮ ಇಲಾಖೆ 40 ಲಕ್ಷ ರೂ ಬಿಡುಗಡೆ ಮಾಡಿದೆ. ಮಾತೃ ಸಂಸ್ಥೆಯಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರ ಕೇವಲ 18 ಲಕ್ಷ ರೂ. ಅನುದಾನ ನೀಡಿದೆ. ತಾನೇ ಸ್ವತಃ ಮುಂದೆ ನಿಂತು ಮಾಡಬೇಕಾದ ಸಂಸ್ಕೃತಿ ಇಲಾಖೆ 18.85 ಲಕ್ಷ ರೂ ನೀಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಹೆಚ್ಚಳಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅನುದಾನ ಹೆಚ್ಚಳದ ನಿರೀಕ್ಷೆಯಿದೆ.•ಎಸ್.ಎಸ್. ನಕುಲ್,
ಜಿಲ್ಲಾಧಿಕಾರಿ ಪಂಪ ಪ್ರಶಸ್ತಿ ಪ್ರದಾನ, ಕದಂಬೋತ್ಸವ ಎರಡೂ ಐತಿಹಾಸಿಕ ಮಹತ್ವದ್ದೇ. ಅನುದಾನ ಹೆಚ್ಚಳಕ್ಕೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತಿದ್ದೇವೆ.
•ಶಿವರಾಮ ಹೆಬ್ಟಾರ, ಶಾಸಕ ರಾಘವೇಂದ್ರ ಬೆಟ್ಟಕೊಪ್ಪ