ಹಾಲಿನ ವಿತರಣೆಯಲ್ಲಿ ಬೇಡಿಕೆ ಅಧಿ ಕ ಇರುವುದು ಕಾರ್ಮಿಕ ಇಲಾಖೆಯಲ್ಲೇ. ಜಿಲ್ಲೆಯಲ್ಲಿ ಕೊಳಗೇರಿ, ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಇರುವ ಕುಟುಂಬಕ್ಕೆ ಪ್ರತಿದಿನ ಹಾಲು ವಿತರಣೆ ಮಾಡಲು ಜಿಲ್ಲಾಡಳಿತ ಇಂತಿಷ್ಟು ಎಂದು ವಿವರಿಸಿ ಸುತ್ತೋಲೆ ಹೊರಡಿಸಿದೆ.
Advertisement
ರಾಜ್ಯ ಸರಕಾರದ ಸೂಚನೆಯ ಪ್ರಕಾರ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ನಂದಿನಿ ಹಾಲನ್ನು ವಿತರಿಸಲು ಶಿರಸಿಯಲ್ಲಿ ಏ. 4ರಂದು ಚಾಲನೆನೀಡಿದ್ದಾರೆ. ಕಾರವಾರದಲ್ಲಿ ಅತಿ ಹೆಚ್ಚು ಅಂದರೆ 1886 ಫಲಾನುಭವಿಗಳಿದ್ದರೆ, ಜೋಯಿಡಾದಲ್ಲಿ ಅತೀ ಕಡಿಮೆ 24 ಫಲಾನುಭವಿಗಳಿದ್ದಾರೆ.
ಇಡೀ ಜಿಲ್ಲೆಯಲ್ಲಿ ಕ್ಷೀರಭಾಗ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲೇ ಹೆಚ್ಚಿದ್ದಾರೆ. 2619 ಕಾರ್ಮಿಕರು ಫಲಾನುಭವಿಯಾಗಲಿದ್ದಾರೆ.
150, ಕಾರ್ಮಿಕ ಇಲಾಖೆ 29 ಅಂತೂ 179, ದಾಂಡೇಲಿಯ ನಗರಸಭೆ 150, ಕಾರ್ಮಿಕ ಇಲಾಖೆ 129 ಅಂತೂ 279, ಭಟ್ಕಳ ಪುರಸಭೆ 100, ಕಾರ್ಮಿಕ ಇಲಾಖೆ 206 ಅಂತೂ 306, ಕುಮಟಾ ಪುರಸಭೆ 100, ಸಮಾಜ ಕಲ್ಯಾಣ 15, ಕಾರ್ಮಿಕ ಇಲಾಖೆ 157 ಅಂತೂ 272, ಅಂಕೋಲಾ
ಪುರಸಭೆ 50, ಸಮಾಜ ಕಲ್ಯಾಣ 1, ಕಾರ್ಮಿಕ ಇಲಾಖೆ 96 ಅಂತೂ 147 ಜನ ಹಾಲಿನ ಸೌಲಭ್ಯ ಪಡೆಯಲಿದ್ದಾರೆ. ಹಳಿಯಾಳ ಪುರಸಭೆ 100, ಸಮಾಜ ಕಲ್ಯಾಣ ಇಲಾಖೆ 3 ಅಂತೂ 103, ಹೊನ್ನಾವರ ಪಪಂ 40, ಸಮಾಜ ಕಲ್ಯಾಣ 3, ಕಾರ್ಮಿಕ ಇಲಾಖೆ 96
ಅಂತೂ 178, ಯಲ್ಲಾಪುರ ಪಪಂ 40, ಕಾರ್ಮಿಕ ಇಲಾಖೆ 47 ಅಂತೂ 87, ಮುಂಡಗೋಡ ಪಪಂ 40, ಕಾರ್ಮಿಕ ಇಲಾಖೆ 22 ಅಂತೂ 62, ಜಾಲಿ ಪಪಂ 40, ಜೋಯಿಡಾ ಕಾರ್ಮಿಕ ಇಲಾಖೆಯಡಿ 24 ಜನ ಹಾಲು ಪಡೆಯಲಿದ್ದಾರೆ. ಪುರಸಭೆ-ನಗರಸಭೆಗಳಲ್ಲಿ 1000, ಸಮಾಜ ಕಲ್ಯಾಣ ಇಲಾಖೆ 30, ಕಾರ್ಮಿಕ ಇಲಾಖೆ 2619 ಅಂತೂ 3649 ಜನರು ಕ್ಷೀರಭಾಗ್ಯ ಪಡೆಯಲಿದ್ದಾರೆ.
Related Articles
Advertisement