Advertisement

ಬೇಡಿಕೆ ಈಡೇರುವವರೆಗೂ ಹೋರಾಟ

10:56 AM Feb 04, 2019 | Team Udayavani |

ಶಿರಸಿ: ಅರಣ್ಯ ಅತಿಕ್ರಮಣದಾರರಿಗೆ ಸಂಬಂಧಿಸಿದ ಆರು ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸಲು ಆಗ್ರಹಿಸಿ ಫೆ.6 ರಂದು ಕಾರವಾರ ಚಲೋ ಸಂಘಟಿಸಲಾಗಿದ್ದು ಬೇಡಿಕೆಗೆ ಸೂಕ್ತ ಪರಿಹಾರ ಸಿಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಆವರಣ ಬಿಟ್ಟು ಹಿಂದಿರುಗಲಾರೆವು ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದ್ದಾರೆ.

Advertisement

ಅವರು ರವಿವಾರ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗೆ ಬರೆದಿರುವ 6 ಪ್ರಮುಖ ಬೇಡಿಕೆಗಳ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್‌ ಪರಿಶೀಲಿಸಿ ಅರಣ್ಯವಾಸಿಗಳಿಗೆ ಹಕ್ಕನ್ನು ಒದಗಿಸಬೇಕು. ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿ ಹಕ್ಕನ್ನು ಪಡೆಯಲು ವಿಫಲಗೊಂಡವರಿಗೆ ಬದಲೀ ವ್ಯವಸ್ಥೆ ನೀಡಬೇಕು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹಕ್ಕು ಪಡೆದ ಅತಿಕ್ರಮಣದಾರರ ಕಂದಾಯ ಮತ್ತು ಅರಣ್ಯ ದಾಖಲೆಯಲ್ಲಿ ಹಕ್ಕನ್ನು ನಮೂದಿಸಬೇಕು, ನಗರ ಅತಿಕ್ರಮಣಕ್ಕೆ ಸಂಬಂಧಿಸಿ ಅರಣ್ಯ ಅತಿಕ್ರಮಣದಾರರ ಅರ್ಜಿಯನ್ನು ಮಂಜೂರಿಗೆ ಶೀಘ್ರದಲ್ಲಿ ಒಳಪಡಿಸಬೇಕು. ಅರಣ್ಯಹಕ್ಕು ಕಾಯಿದೆ ಅರ್ಜಿ ಮತ್ತು ಮೇಲ್ಮನವಿ ಮಂಜೂರಿ ಪ್ರಕ್ರಿಯೆಯಲ್ಲಿ ಅಥವಾ ವಿಚಾರಣೆಯಲ್ಲಿ ಇರುವಾಗ ಕರ್ನಾಟಕ ಅರಣ್ಯ ಕಾಯಿದೆ ಕಲಂ: 64-ಎ ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ತಕ್ಷಣದಿಂದ ಸ್ಥಗಿತಗೊಳಿಸಲು ಅರಣ್ಯಾಧಿಕಾರಿಗಳಿಗೆ ಆದೇಶಿಸಬೇಕು.

ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಹೋರಾಟಗಾರರ ವೇದಿಕೆಯ ಸಮಕ್ಷಮ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಜರುಗಿಸಬೇಕು ಎಂದು ಆಗ್ರಹಿಸಿದರು. ವಿವಿಧ ವಿಭಾಗದ ಸಂಚಾಲಕರಾದ ಇಬ್ರಾಹಿಂ ನಬೀಸಾಬ್‌, ಉದಯ ನಾಯ್ಕ, ಮಂಜುನಾಥ ಬಿ. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next