Advertisement

ಆಸ್ಪತ್ರೆ ಕಾಮಗಾರಿ ಶೀಘ್ರ ಮುಗಿಸಿ

03:34 PM Jun 22, 2019 | Naveen |

ಶಿರಸಿ: ಇಲ್ಲಿಯ ಪಂಡಿತ್‌ ಜನರಲ್ ಆಸ್ಪತ್ರೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.

Advertisement

ಏಳು ವರ್ಷಗಳ ಹಿಂದೆ ಮಂಜೂರಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಗುಣಮಟ್ಟದಿಂದ ಅತಿಶೀಘ್ರವಾಗಿ ಮುಗಿಯಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಪ್ರತ್ಯೇಕವಾದರೆ ಸರ್ಕಾರಿ ಆಸ್ಪತ್ರೆಯ ಒತ್ತಡ ಕಡಿಮೆ ಆಗುತ್ತದೆ ಎಂದರು.

ಅಭಿಯಂತರರು ಉತ್ತರಿಸಿ ಶೇ. 20ರಷ್ಟು ಕಾಮಗಾರಿ ಆಗಿದ್ದು ಆದಷ್ಟು ಬೇಗ ಮಾಡುವಂತೆ ಗುತ್ತಿಗೆದಾರನಿಗೆ ನೋಟಿಸ್‌ ನೀಡಲಾಗಿದೆ ಎಂದರು.

ಶವ ಪರೀಕ್ಷೆ ವಿಳಂಬವಾಗುತ್ತಿದೆ ಎಂಬ ದೂರು ಬರುತ್ತಿದೆ ಎಂದು ಶಾಸಕರು ವೈದ್ಯರನ್ನು ಪ್ರಶ್ನಿಸಿದರು. ಶವ ಪರೀಕ್ಷೆಯನ್ನು ಎಂಬಿಬಿಎಸ್‌ ವೈದ್ಯರೇ ಮಾಡಬೇಕಾಗಿದ್ದು, ನಿತ್ಯ ಕರ್ತವ್ಯ ಮುಗಿಸಿ ಮಾಡಬೇಕಾಗಿರುವುದರಿಂದ ರಾತ್ರಿ ಶವ ಪರೀಕ್ಷೆ ಮಾಡುವುದು ಕಷ್ಟ ಎಂದರು. ಶಾಸಕರು ಸಿಪಿಐ ಗಿರೀಶ್‌ ಅವರ ಅಭಿಪ್ರಾಯ ಪಡೆದು ಜನರಿಗೆ ತೊಂದರೆಯಾಗದಂತೆ ವೈದ್ಯರು ರೊಟೇಶನ್‌ ಪದ್ಧತಿಯಲ್ಲಿ ಶವ ಪರೀಕ್ಷೆ ಮಾಡುವಂತೆ ಸೂಚಿಸಿದರು. ಸಿಪಿಐ ಗಿರೀಶ್‌ ಆಸ್ಪತ್ರೆ ಶವಾಗಾರದಲ್ಲಿ ಶೈತ್ಯಾಗಾರ ಮಾಡುವಂತೆ ಮನವಿಮಾಡಿದರು.

ಮಕ್ಕಳ ವಿಭಾಗಕ್ಕೆ ಸಿ.ಪ್ಯಾಕ್‌ ಯಂತ್ರದ ಬೇಡಿಕೆಯನ್ನು ವೈದ್ಯರು ಇಟ್ಟಾಗ ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದರು. ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವಿಭಾಗದಲ್ಲಿ ಅಟೋ ಎನಲೈಸರ್‌ ಹಾಳಾಗಿದ್ದು ದುರಸ್ತಿಗೆ ಮನವಿ ಮಾಡಿದರು. ಆಸ್ಪತ್ರೆಯಲ್ಲಿ ಕಾಟ್, ಬೆಡ್‌, ಬೆಡ್‌ ಶೀಟ್ ಬದಲಾಯಿಸಬೇಕೆಂದು ಕೋರಿದರು.

Advertisement

ವೈದ್ಯರು ಆಪರೇಷನ್‌ ರೂಮಿನಲ್ಲಿ ಒಟಿ ಟೇಬಲ್, ಕರೆಂಟ್ ವ್ಯವಸ್ಥೆ ಬದಲಾಯಿಸಲು ಮನವಿ ಮಾಡಿದರು. ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಬೇಗ ಕ್ರಮವಹಿಸಲು ಸೂಚಿಸಿದರು. ವೈದ್ಯರಾದ ಗಜಾನನ ಭಟ್ಟರು ಯೂರಾಲಜಿ ಆಪರೇಶನ್‌ ವಿಭಾಗ ಆರಂಭಿಸುವ ಬಗ್ಗೆ ಪ್ರಸ್ತಾಪಿಸಿದರು. ನಿಯಮಾವಳಿ ಪ್ರಕಾರ ಪ್ರಾರಂಭಿಸುವಂತೆ ಸಭೆ ಒಪ್ಪಿಗೆ ನೀಡಿತು.

ಶಾಸಕ ಕಾಗೇರಿ, ಆಸ್ಪತ್ರೆಗೆ ದಾನಿಗಳಿಂದ 10 ಲಕ್ಷ ರೂ.ಗಳ ಜನರೇಟರ್‌ ಕೊಡಿಸಿದ್ದು, ಐಸಿಯು ವಿಭಾಗದ ಕಾಮಗಾರಿಯನ್ನು ಬೇಗ ಮುಗಿಸಿ ಅದರ ಬಳಕೆ ಆರಂಭಿಸಬೇಕು ಎಂದರು. ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯವಿರುವ ಸೌಲಭ್ಯ ಒದಗಿಸಿದ್ದೇವೆ. ಇನ್ನು ಅಗತ್ಯವಿರುವುದನ್ನು ಆದ್ಯತೆ ಮೇಲೆ ನೀಡುತ್ತೇವೆ ಎಂದರು.

ತಾ.ಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಅಕಾರಿ ಚಿನ್ನಣ್ಣವರ್‌, ಸಮಿತಿ ಸದಸ್ಯರು, ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next