Advertisement

ಕನ್ನಡದ ಉಳಿವಿಗೆ ಹೋಬಳಿಗೊಂದು ಮಾದರಿ ಶಾಲೆಯಾಗಲಿ

10:24 AM Jan 18, 2019 | Team Udayavani |

ಶಿರಸಿ: ಕನ್ನಡ ಶಾಲೆಯ ಉಳಿಸಲು ಹೋಬಳಿಗೊಂದು ಮಾದರಿ ಕನ್ನಡ ಶಾಲೆಯನ್ನು ಸರಕಾರ ಆರಂಭಿಸಬೇಕು ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ| ಮೋಹನ್‌ ಆಳ್ವಾ ರಾಜ್ಯ ಸರಕಾರವನ್ನು ಆಗ್ರಹಿಸಿದರು.

Advertisement

ನಗರದ ವಿಕಾಸಾಶ್ರಮ ಬಯಲಿನಲ್ಲಿ ಶುಕ್ರವಾರ ನಡೆದ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರಸ್ತುತಗೊಳಿಸುವ ವೈವಿಧ್ಯಮಯ ಆಳ್ವಾಸ್‌ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ಅವರು ಮಾತನಾಡಿದರು. ಕನ್ನಡದ ಉಳಿವು ನಮ್ಮ ಕೈಲಿದೆ. ಯಾವುದೇ ಕಾರಣಕ್ಕೂ ಕನ್ನಡದ ಮೇಲೆ ನಿರ್ಲಕ್ಷ ಮಾಡುವುದು ಸರಿಯಲ್ಲ. ಕನ್ನಡ ಶಾಲೆಯ ಬದಲಿಗೆ ಆಂಗ್ಲ ಮಧ್ಯಮ ಶಾಲೆ ನಡೆಸುವುದು ಸರಿಯಲ್ಲ. ಮೊದಲು ಸರಕಾರ ಒಂದರಿಂದ ಏಳನೇ ತರಗತಿ ತನಕವಾದರೂ ಏಳು ಶಿಕ್ಷಕರನ್ನು ಶಾಲೆಯೊಂದಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಯೊಬ್ಬರಿಗೂ ಸಾಂಸ್ಕೃತಿಕ ಪ್ರಜ್ಞೆ ಬೇಕು. ಇದರಿಂದಲೇ ಪ್ರೀತಿಯ ಬದುಕು ಕಟ್ಟಬೇಕು. ನಮ್ಮಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಹಗಊ ಕಲಾ ಸಂಪತ್ತು ಇದೆ. ಪ್ರಸ್ತುತ ಅಂಥ ಕಲಾ ಸಂಪತ್ತು ಮುಂದುವರಿಸಲು ಕಲಾಸಕ್ತರು ಜಾಗೃತರಾಗಬೇಕು ಎಂದ ಅವರು, ಶಿರಸಿಗೂ ನಮ್ಮಲ್ಲಿಗೂ ಸಂಬಂಧ ಗಟ್ಟಿಗೊಳ್ಳಬೇಕು. ಒಡಂಬಡಿಕೆಯಾಗಬೇಕು ಎಂದರು.

ಸಂಕಲ್ಪದ ಮುಖ್ಯಸ್ಥ ಪ್ರಮೋದ ಹೆಗಡೆ, ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ ಭಾವೈಕ್ಯತೆ ನಮ್ಮ ಪರಂಪರೆ ವಿಶೇಷತೆಯಾಗಿದೆ ಎಂದರು.

ಸಹಾಯಕ ಆಯುಕ್ತ ರಾಜು ಮೊಗವೀರ, ನ್ಯಾಯಾಧೀಶ ಶಾಂತವೀರಪ್ಪ, ಸಹಕಾರಿ ರವೀಂದ್ರ ಹೆಗಡೆ ಹೀರೇಕೈ, ಬಸವರಾಜ್‌ ದೊಡ್ಮನಿ, ವೆಂಕಟೇಶ ನಾಯ್ಕ, ಶ್ರೀಲತಾ ಕಾಳೇರಮನೆ, ಪ್ರಕಾಶ ಭಾಗವತ್‌, ಡಾ| ಶಿವರಾಂ ಕೆವಿ, ದೀಪಕ ದೊಡ್ಡೂರು ಇತರರು ಇದ್ದರು. ವಿ. ವಿನಾಯಕ ಭಟ್ಟ ಗಾಳಿಮನೆ ನಿರ್ವಹಿಸಿದರು.

Advertisement

ಸಾಂಸ್ಕೃತಿಕ ಸಂಭ್ರಮ: ಮೂಡಬಿದ್ರಿಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಮೂನ್ನೂರೈವತ್ತಕ್ಕೂ ಅಧಿಕ ಮಕ್ಕಳು ಮೂರು ತಾಸುಗಳಿಗೂ ಅಧಿಕ ಕಾಲ ವೈವಿಧ್ಯಮಯ ಕಾರ್ಯಕ್ರಮ ಪ್ರಸ್ತುತಗೊಳಿಸಿ ಜನ ಮೆಚ್ಚುಗೆಗೆ ಕಾರಣರಾದರು.

ಯಕ್ಷಗಾನದಲ್ಲಿ ಶ್ರೀರಾಮ ಪಟ್ಟಾಭಿಷೇಕ, ಭರತನಾಟ್ಯದಲ್ಲಿ ನವದುರ್ಗೆಯರು, ಮಣಿಪುರಿಯ ಸಾಹಸಾತ್ಮಕ ನೃತ್ಯ, ಮಲ್ಲಕಂಬ ಪ್ರದರ್ಶನ, ಕಥಕಳಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನೆರೆದಿದ್ದ ನಾಲ್ಕು ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next