Advertisement

ಶಿರ್ಲಾಲು ಸೂಡಿ ಬಸದಿಯ ಪುನಃ ನಿರ್ಮಾಣ ಸಂಕಲ್ಪ

06:00 AM Jul 09, 2018 | Team Udayavani |

ಅಜೆಕಾರು:ಪಶ್ಚಿಮ ಘಟ್ಟ ತಪ್ಪಲಿನ ಕಾನನದ ನಡುವೆ ಇರುವ ಪುಟ್ಟ ಗ್ರಾಮ ಶಿರ್ಲಾಲು ಸೂಡಿ. ಇಲ್ಲಿನ ತಾಣದ ಬೆಟ್ಟು ಎಂಬಲ್ಲಿ ಸುಮಾರು ಎರಡು ಶತಮಾನಗಳಿಂದ ಯಾವುದೇ ಪೂಜೆ ಕಾರ್ಯಕ್ರಮ ನಡೆಯದೇ ಜನರ ಮನದಿಂದ ಕಣ್ಮರೆಯಾಗಿದ್ದ ಬಸದಿಯೊಂದು ಗೋಚರಕ್ಕೆ ಬಂದಿದ್ದು ಇದರ  ಪುನರ್‌ ನಿರ್ಮಾಣದ ಸಂಕಲ್ಪವನ್ನು ಸ್ಥಳೀಯರು ಮಾಡಿದ್ದಾರೆ.

Advertisement

ಸುಮಾರು 300 ವರ್ಷಗಳ ಹಿಂದೆ ನಿರ್ಮಾಣಗೊಂಡು ಸ್ಥಳೀಯರ ಆರಾಧ್ಯ ಆರಾಧನ ಕೇಂದ್ರವಾಗಿ ವೈಭವದಿಂದ ಧಾರ್ಮಿಕ ಚಟುವಟಿಕೆ ನಡೆಯುತ್ತಿದ್ದ ಈ ಬಸದಿಯಲ್ಲಿ 200 ವರ್ಷಗಳಿಂದ ಯಾವುದೇ ಧಾರ್ಮಿಕ ಕಾರ್ಯ ನಡೆದಿಲ್ಲ. ಅನಂತರದ ದಿನಗಳಲ್ಲಿ ಬಸದಿ ಶಿಥಿಲಗೊಂಡು ಸಂಪೂರ್ಣವಾಗಿ ಕುಸಿದು ಬಿದ್ದು ಗಿಡ ,ಮರ, ಪೊದೆಗಳಿಂದ ಆವೃತವಾಗಿ ಕಣ್ಮರೆಯಾಗಿತ್ತು.

ಬಸದಿಯ ಗರ್ಭಗುಡಿ ಕುಸಿದು ಬಿದ್ದು ಕೇವಲ ಗೋಡೆಯ ಮುರಕಲ್ಲುಗಳು ಅವಶೇಷವಾಗಿ ಕಂಡುಬಂದರೆ, ಬಸದಿಯ ಹೊರಭಾಗದಲ್ಲಿ ಕಲ್ಕುಡ ದೈವದ ಕಲ್ಲು ಪಾಳುಬಿದ್ದ ಸ್ಥಿತಿಯಲ್ಲಿದೆ.ಬಸದಿಗೆ ಸಂಬಂಧಪಟ್ಟಂತೆ ಸುಮಾರು 20 ಅಡಿ ಆಳದ ತೀರ್ಥಬಾವಿ ಪಾಳುಬಿದ್ದಿದೆ.ಇದರ ಸುತ್ತಲೂ ಗಡಿ ಕಲ್ಲುಗಳಿದ್ದು ಹಿಂದೆ ವೈಭವದಿಂದ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಕುರುಹು ಗೋಚರಿಸುತ್ತಿವೆ.

ಸೂಡಿ ಮನೆತನದ ಆಡಳಿತಕ್ಕೊಳಪಟ್ಟ ಈ ಬಸದಿಯಲ್ಲಿ ಭಗವಾನ್‌ ಶ್ರೀ ಆದಿನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ದೇವಿ ಆರಾಧಿಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೂಡಿ ಮನೆತನ, ಸ್ಥಳೀಯ ಗಾಮಸ್ಥರಿಗೆ ಸಂಕಷ್ಟ ಎದುರಾದಾಗ ದೈವಜ್ಞರ ಆರೂಢ ಪಶ್ನೆಯಲ್ಲಿ ಕಂಡುಕೊಂಡಂತೆ ಬಸದಿ ಪುನರ್‌ ನಿರ್ಮಾಣದ ಸಂಕಲ್ಪ ಮಾಡಲಾಗಿದೆ.

ಬಸದಿಗೆ ಸಂಬಂಧಪಟ್ಟು ಹಿಂದೆ ಸುಮಾರು 400 ಎಕರೆ ಜಾಗ ಇದ್ದರೆ ಈಗ 25 ಸೆಂಟ್ಸ್‌ ಜಾಗ ಇದ್ದು ಅದರಲ್ಲಿ ಬಸದಿ ನಿರ್ಮಾಣ ಕಾರ್ಯ ನಡೆಯಲಿದೆ. 

Advertisement

40 ಲ.ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣ
ಪುನರ್‌ ನಿರ್ಮಾಣದ ಪೂರ್ವಭಾವಿಯಾಗಿ ನಡೆಯಬೇಕಾದ ಎಲ್ಲ ಧಾರ್ಮಿಕ ಕಾರ್ಯ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಹಿಂದೆ ಬಸದಿ ಇದ್ದ ಜಾಗದಲ್ಲಿಯೇ ಆಯಾ ಅಳತೆಗೆ ಅನುಗುಣವಾಗಿ ಬಸದಿ ನಿರ್ಮಿಸುವ ಸಲುವಾಗಿ ಸಮಿತಿ , ಟ್ರಸ್ಟ್‌ ರಚಿಸಲಾಗಿದೆ. ಜು. 15ರಂದು ಪೂಜೆಯೊಂದಿಗೆ ಉತVನನ ಕಾರ್ಯ ಆರಂಭವಾಗಲಿದ್ದು  ಅನಂತರ ಸುಮಾರು 40 ಲ.ರೂ. ವೆಚ್ಚದಲ್ಲಿ ವಾಸ್ತು ಪ್ರಕಾರವಾಗಿ ಬಸದಿ ನಿಮಾರ್ಣಗೊಳ್ಳಲಿದೆ .

Advertisement

Udayavani is now on Telegram. Click here to join our channel and stay updated with the latest news.

Next