Advertisement

ಶಿರ್ಲಾಲು: ರಜತ ರಥೋತ್ಸವ, ಜಿನ ಬಿಂಬಗಳಿಗೆ ಮಹಾಮಸ್ತಕಾಭಿಷೇಕ

12:50 AM May 10, 2019 | sudhir |

ಅಜೆಕಾರು: ಶಿರ್ಲಾಲು ಗ್ರಾಮದ ಅತಿಶಯ ಕ್ಷೇತ್ರ ಶ್ರೀ ಅನಂತನಾಥ ಸ್ವಾಮಿ ಬಸದಿಯ ಭಗವಾನ್‌ ಶ್ರೀ ಅನಂತನಾಥ ಸ್ವಾಮಿ ಹಾಗು ಶ್ರೀ ಪದ್ಮಾವತಿ ದೇವಿಯ ವಾರ್ಷಿಕ ರಜತ ರಥಯಾತ್ರೆ ಮತ್ತು ಆದಿನಾಥ ಸ್ವಾಮಿ, ಭರತ ಸ್ವಾಮಿ, ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಮಹೋತ್ಸವದ 6ನೇ ವರ್ಷದ ಪ್ರಯುಕ್ತ ಮಹಾಮಸ್ತಕಾಭಿಷೇಕ ನಡೆಯಿತು.

Advertisement

ರಾಜ್ಯದಲ್ಲಿಯೇ ಪ್ರಥಮ ಎನ್ನಲಾದ ತ್ರಿಮೂರ್ತಿಗಳಿಗೆ ಶ್ರಾವಕರು 108 ಮಂಗಳ ಕಲಶಗಳಿಂದ ಅಬಿಷೇಕ ನೆರವೇರಿಸಿದರು. ಅನಂತರ ಎಳನೀರು, ಇಕ್ಷುರಸ, ಹಾಲು, ಕಲ್ಕಚೂರ್ಣ, ಅರಶಿನ, ಕಷಾಯ, ಚತುಷೊRàಣ ಕಲಶ, Íಶ್ರೀಗಂಧ, ಅಷ್ಟಗಂಧ ಮುಂತಾದ ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಸಲಾಯಿತು.

ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಉಪಸ್ಥಿತರಿದ್ದು ಪ್ರವಚನ ನೀಡಿದರು.

ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ, ಮಾಜಿ ಸಚಿವ ಅಭಯಚಂದ್ರ ಜೈನ್‌ ಉಪಸ್ಥಿತರಿದ್ದರು.

ರಥೋತ್ಸವ ಸಂದರ್ಭ ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಹಾಗೂ ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಭೇಟಿ ನೀಡಿ ಆಶೀರ್ವದಿಸಿದರು.

Advertisement

ಧಾರ್ಮಿಕ ವಿಧಿವಿಧಾನಗಳನ್ನು ವರ್ಧಮಾನ ಇಂದ್ರ ಹಾಗೂ ಶ್ರೀಕಾಂತ ಇಂದ್ರ ಅವರು ನೆರವೇರಿಸಿದರು.

ಉತ್ಸವ ಸಮಯದಲ್ಲಿ ಬಸದಿಯ ಆಡಳಿತ ಮಂಡಳಿ, ಧರ್ಮರತ್ನಾಕರ ಶಿರ್ಲಾಲು ರತ್ನವರ್ಮ ಪೂವಣಿ ಮೆಮೋರಿಯಲ್‌ ಫ್ಯಾಮಿಲಿ ಟ್ರಸ್ಟ್‌, ಶಿರ್ಲಾಲು ಜೈನ್‌ ಮಿಲನ್‌, ಶಿರ್ಲಾಲು, ಅಂಡಾರು, ಜಾರ್ಕಳ ಮುಂಡ್ಲಿಯ ಶ್ರಾವಕ ಬಂಧುಗಳು ಉಪಸ್ಥಿತರಿದ್ದರು.
ಮುನಿರಾಜ ರೆಂಜಾಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next