Advertisement

ಶಿರ್ಲಾಲು: ನೂತನ ಬಂಡೆ ಚಿತ್ರ ಪತ್ತೆ

10:05 AM Nov 06, 2018 | Harsha Rao |

ಕಾಪು: ಕರಾವಳಿ ಕರ್ನಾಟಕದಲ್ಲಿ ರಾಕ್‌ ಆರ್ಟ್‌ ನೆಲೆಗಳಾಗಿ ಬುದ್ಧನ ಜೆಡ್ಡು, ಗಾವಳಿ, ಮಂದಾರ್ತಿ, ಖಜಾನೆ, ಸುಬ್ರಹ್ಮಣ್ಯ ನೆಲೆಗಳನ್ನು ಕಾಣಬಹುದು. ಆದರೆ ಈ ನೆಲೆಗಳಿಗೆ ಶಿರ್ಲಾಲು ಸಹ ಸೇರಿದೆ ಎಂದು ಇತ್ತೀಚೆಗೆ ಕ್ಷೇತ್ರ ಕಾರ್ಯ ಶೋಧನೆಯ ಸಂದರ್ಭದಲ್ಲಿ ತಿಳಿದು ಬಂದಿದೆ.

Advertisement

ಶಿರ್ಲಾಲಿನ ಹಾಡಿಯಂಗಡಿ  ಗ್ರಾ.ಪಂ.ಗೆೆ ಸೇರುವ ಬ್ರಂದಬೆಟ್ಟು ಹೊಸಮನೆ ರತ್ನವರ್ಮ ಜೈನ್‌ ಅವರ ಮನೆಯ ಪಕ್ಕದಲ್ಲಿರುವ ಕುಕ್ಕುಂಜಲ ಬಂಡೆಯಲ್ಲಿ ಇತಿಹಾಸ, ಪುರಾತತ್ವ ಸಂಶೋಧಕರಾದ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಮತ್ತು ಸುಭಾಸ್‌ ನಾಯಕ್‌ ಬಂಟಕಲ್ಲು ಇವರು ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ  ಬಂಡೆ ಚಿತ್ರವನ್ನು ಪತ್ತೆ ಮಾಡಿದ್ದಾರೆ. ಕ್ಷೇತ್ರ ಕಾರ್ಯ ಶೋಧನೆಗೆ ಹರೀಶ್‌ ಆಚಾರ್ಯ ಪಡಿಬೆಟ್ಟು, ಶಿರ್ಲಾಲು ಗ್ರಾ.ಪಂ. 
ಮಾಜಿ ಸದಸ್ಯ ವಿಟuಲ ಆಚಾರ್ಯ, ಎಂ.ಪಿ.ಎಂ.ಸಿ.  ಕಾರ್ಕಳ ಕಾಲೇಜಿನ ವಿದ್ಯಾರ್ಥಿ ಸಿದ್ದಾರ್ಥ್ ಜೈನ್‌ ಸಹಕಾರ ನೀಡಿದ್ದರು. 

ಕುಕ್ಕುಂಜಲ ಬಂಡೆಯ ಮೇಲ್ಭಾಗದಲ್ಲಿರುವ ಬಂಡೆ ಚಿತ್ರಕ್ಕೆ ಸ್ಥಳೀಯರು ಸೂರ್ಯ ಎಂದು ಕರೆಯುತ್ತಾರೆ. ಬಂಡೆ ಚಿತ್ರದ ಉತ್ತರದ ಪರಿಧಿಯಿಂದ 3 ರೇಖೆಗಳನ್ನು ಮಾಡಲಾಗಿದ್ದು, ವೃತ್ತದಲ್ಲಿ ಬಿಂದುವನ್ನು ಕೊರೆಯಲಾಗಿದೆ. ವೃತ್ತದ ವ್ಯಾಸವು 20 ಸೆಂ.ಮೀ. ಇದ್ದು, ಉತ್ತರದ ಪರಿಧಿಯಲ್ಲಿ ಮಾಡಲ್ಪಟ್ಟ ಸರಳ ರೇಖೆಗಳು 12 ಸೆಂ.ಮೀ. ಅಳತೆಯನ್ನು ಹೊಂದಿದೆ.  ಒಟ್ಟಿಗೆ 34 ಸೆಂ.ಮೀ. ಅಳತೆಯನ್ನು ಒಳಗೊಂಡಿರುವ ಈ ಬಂಡೆ ಚಿತ್ರದ ಉತ್ತರ ದಿಕ್ಕಿನಲ್ಲಿ ಸುಮಾರು 4 ಚದರ ಮೀಟರ್‌ ಅಳತೆಯಲ್ಲಿ 70-80 ಗುಳಿಗಳನ್ನು ಗುರುತಿಸಬಹುದು. ಸ್ಥಳಿಯರು ಇದನ್ನು ಚೆನ್ನಮಣೆ ಎಂದು ಕರೆಯುತ್ತಾರೆ. ಆದರೆ ಇಷ್ಟು ಪ್ರಮಾಣದ ಗುಳಿಗಳು ಚೆನ್ನಮಣೆಯನ್ನು ಹೋಲುವುದಿಲ್ಲ.

ಮಂದಾರ್ತಿಯಲ್ಲೂ ಹಿಂದೆ ಪತ್ತೆಯಾಗಿತ್ತು 
ಇದೇ ಮಾದರಿಯ ಬಂಡೆ ಚಿತ್ರವನ್ನು ಪ್ರೊ| ಟಿ. ಮುರುಗೇಶಿ ಹಾಗೂ ಪ್ರಶಾಂತ್‌ ಶೆಟ್ಟಿಯವರು ಮಂದಾರ್ತಿಯಲ್ಲಿ ಪತ್ತೆ ಮಾಡಿದ್ದರು.  ಹಾಗೆಯೇ ಕಾರ್ಕಳ ತಾಲೂಕಿನ ಖಜಾನೆ ಎಂಬ ಸ್ಥಳದಲ್ಲೂ ಸಹ ಬಂಡೆಯ ಮೇಲ್ಭಾಗದಲ್ಲಿ ಈ ಮಾದರಿಯ ಬಂಡೆ ಚಿತ್ರ ಕಂಡುಬಂದಿತ್ತು. ಮಂದಾರ್ತಿಯಲ್ಲಿರುವ ಬಂಡೆ ಚಿತ್ರವು 25 ಸೆಂ. ಮೀ ಅಳತೆಯನ್ನು ಹೊಂದಿದ್ದು ಹಾಗೂ ಬೆರಳೆಣಿಕೆಯಷ್ಟು ಗುಳಿಗಳು ಕಂಡುಬಂದಿವೆ. ಮಂದಾರ್ತಿ ಹಾಗೂ ಕುಕ್ಕುಂಜಲದಲ್ಲಿ ದೊರೆತ ಬಂಡೆ ಚಿತ್ರಕ್ಕೆ ಪೂರ್ಣ ಪ್ರಮಾಣದ ಹೋಲಿಕೆಯಿದ್ದು, ಕೇವಲ ಗಾತ್ರದಲ್ಲಿ ಮಾತ್ರ ವ್ಯತ್ಯಾಸವನ್ನು ಕಾಣಬಹುದು. ಹಾಗಾಗಿ ಈ ಚಿತ್ರವನ್ನು ಒಂದೇ ಸಮುದಾಯದವರು ಬಿಡಿಸಿರ ಬಹುದೇ ಎಂಬ ಊಹಿಸಲಾಗುತ್ತಿದೆ.

ಇಲ್ಲಿ ಪತ್ತೆಯಾದ ಬಂಡೆ ಚಿತ್ರದ ಕಾಲಮಾನವನ್ನು ಸೂಕ್ಷ್ಮವಾಗಿ ಗಮನಿಸಿ ದಾಗ ಇದು ಬƒಹತ್‌ ಶಿಲಾಯುಗಕ್ಕೆ 
ಸೇರಿದ ನೆಲೆಯಾಗಿರಬಹುದು ಎಂಬ ಊಹೆಯನ್ನು ಕೇರಳದ ತ್ರಿವೆಂಡ್ರಮ್‌ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಮುಖ್ಯಸ್ಥ ಡಾ| ಅಜಿತ್‌ ಕುಮಾರ್‌ ವ್ಯಕ್ತಪಡಿಸಿದ್ದು, ಶಿರ್ಲಾಲಿನ ಐತಿಹ್ಯವು ಪ್ರಾಗಿತಿಹಾಸದ ಕಾಲಮಾನಕ್ಕೆ ಹೋಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next