Advertisement

ಅನುದಾನದ ಸೂಕ್ತ ಬಳಕೆ: ಹಸಿರು ಆವರಣದಿಂದ ಕಂಗೋಳಿಸುತ್ತಿದೆ ಶಿರಗುಂಪಿ ಗ್ರಾಪಂ

12:39 PM Jun 05, 2022 | Team Udayavani |

ದೋಟಿಹಾಳ: 2014ರಲ್ಲಿ ರಾಜ್ಯ ಸರಕಾರ ಎಷ್ಟು ಗ್ರಾಪಂ ಮರುವಿಂಗಡನೆ ಮಾಡಿದರು, ಈ ವೇಳೆ ರಚನೆಯಾದ ಗ್ರಾಪಂ. ಸರಕಾರದ ಅನುದಾನದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಒಂದು ಸುಂದರ ಪರಿಸರ ಸ್ನೇಹಿ ಗ್ರಾಪಂವಾಗಿ ಮಾಡಿದ್ದು ನೋಡುವರಿಗೆ ಹಾಗೂ ಅಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ.

Advertisement

2014ರಲ್ಲಿ ಮುದೇನೂರ ಗ್ರಾಪಂನಿಂದ ವಿಂಗಡನೆಗೊಂಡ ಶಿರಗುಂಪಿ ಗ್ರಾಪಂ ಇಲಾಖೆ ಮೊದಲು ಗ್ರಾಮದ ಸಮುದಾಯ ಭವನದಲ್ಲಿ ಕಾರ್ಯಲಯವನ್ನು ಆರಂಭಿಸಿದರು. ನಂತರ ಸರಕಾರ ರಾಜೀವ ಗಾಂಧಿಸೇವ ಕೇಂದ್ರಕ್ಕೆ 16 ಲಕ್ಷ ರೂ, ಹಾಗೂ ಒಂದು ಉಗ್ರಣ ಕೊಠಡಿಗೆ 11ಲಕ್ಷ ರೂ,ಗಳ ಮರುವಿಂಗಡನೆಕೊಂಡ ಗ್ರಾಪಂಗಳಿಗೆ ಅನೂದಾನವನ್ನು ಬಿಡುಗಡೆ ಮಾಡಿತು. ಇದನ್ನು ಶಿರಗುಂಪಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಪಂ ಕಛೇರಿಗೆ ಮೀಸಲಿದ ಸುಮಾರ ನಾಲ್ಕು ಎಕರೆ ವ್ಯಾಪ್ತಿಯ ಜಾಗದಲ್ಲಿ ಒಂದು ಎಕರೆ ಜಾಗದಲ್ಲಿ ರಾಜೀವ ಗಾಂಧಿಸೇವ ಕೇಂದ್ರ ಮತ್ತು ಉಗ್ರಣ ಕೊಠಡಿಯನ್ನು ನಿರ್ಮಿಸಿ ಉಳಿದ ಮೂರು ಎಕರೆ ಪ್ರದೇಶದಲ್ಲಿ ಹಸಿರು ಹೊನ್ನು ಮಾಡಲು 100ಕ್ಕೂ ಹೆಚ್ಚು ಸಸಿಗಳನ್ನು ನಡೆಸಿ ಕಂಗೊಳಿಸುವಂತೆ ಮಾಡಿದಾರೆ.

ಜಿಲ್ಲೆಯಲ್ಲಿ ಒಂದು ಪರಿಸರ ಸ್ನೇಹಿ ಗ್ರಾಪಂ ಆಗಿ ಅಭಿವೃದ್ಧಿ ಕಾಣುತ್ತಿರು ಈ ಗ್ರಾಪಂ ಕಛೇರಿಯು ದೋಟಿಹಾಳ-ಮುದೇನೂರ ಮುಖ್ಯ ರಸ್ತೆಯ ಪಕ್ಕದಲ್ಲಿ ಇದೆ. ಗ್ರಾಮದಲ್ಲಿ ಸರವೇ ಸಾಮಾನ್ಯವಾಗಿ ನೀರು, ವಿದ್ಯುತ್ ಕೊರತೆ ಮಧ್ಯೆ ಗ್ರಾಪಂ ಇಂತಹ ಹಸಿರಿನ ಉದ್ಯಾನ ನಿರ್ಮಿಸಿರುವುದು ರಸ್ತೆ ಮಾರ್ಗದಲ್ಲಿ ಸಂಚರಿಸುವ ಸುತ್ತ-ಮುತ್ತಲ ಗ್ರಾಮಗಳ ಜನರಿಗೂ ಹಾಗೂ ಅಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ.

ಈ ಉದ್ಯಾನ ಹೊನದಲ್ಲಿ ಸುಮಾರು 100ಕ್ಕೂ ಹೆಚ್ಚು ಸಸ್ಯಗಳನ್ನು ಬೆಳಸಲಾಗಿದೆ. ಬೆವಿನ ಮರ, ಟೆಂಗಿನ ಗಿಡ, ನುಗ್ಗೆ ಮರ, ನಿಂಬೆ, ಬಾದಾಮಿ, ಅಶೋಕ, ಸಿಲ್ವಾರ್, ಗುಲ್ ಮೊಹರ್, ಇನ್ನೂ ಅನೇಕ ಜಾತಿಯ ಸಸಿಗಳು ಉದ್ಯಾನದಲ್ಲಿ ಬೆಳೆಸುತ್ತಿರುವುದು ನಿಂತು ನೋಡುಗರನ್ನು ಕೈ ಬೀಸಿ ಕರೆಯುತ್ತಲಿವೆ.

Advertisement

ಕಛೇರಿ ರಜೆ ದಿನಗಳಲ್ಲಿ ಉದ್ಯಾನ ಹಾಳಾಗದಂತೆ ಕಾಪಡಲು ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಎಚ್ಚರವಹಿಸುತ್ತಾರೆ ಹೀಗಾಗಿ ಒಂದು “ಪರಿಸರ ಸ್ನೇಹಿ ಗ್ರಾಪಂ” ಮಾಡಲು ಆಡಳಿತ ಮಂಡಳಿಯರು ಯಶಸ್ವಿಯಾಗಲು ಕಾರಣವಾಗಿದೆ.

ಈ ಗ್ರಾಪಂ ಉದ್ಯಾನವನ ಸುಂದರವಾಗಿ ಕಾಣಲು ಕಳೆದ ಅವಧಿಯ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಪರಿಶ್ರಮ ಬಹಳ ಮುಖ್ಯವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.

ಇದನ್ನು ಗಮನಿಸಿದ ಸರಕಾರ ‘ಹಳ್ಳಿಗಳ ಸಮಗ್ರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ’ ಎಂಬ ಘೋಷ ವಾಕ್ಯಕ್ಕೆ ಪೂರಕ ಎನ್ನುವಂತೆ ಶಿರಗುಂಪಿ ಗ್ರಾಪಂಗೆ 2018-19ನೇ ಸಾಲಿನ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ‘ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿತಯ.

ಈ ಗ್ರಾಪಂ ಸುಂದರವಾದ ಉದ್ಯಾನವನ ನೋಡಲು ಬೇರೆ ಬೇರಿ ಜಿಲ್ಲೆಗಳ ಗ್ರಾಪಂ ಸದಸ್ಯರು ಭೇಟಿ ನೀಡಿದ್ದಾರೆ.

ಈ ಒಂದು ಉದ್ಯಾನವನ ನಿರ್ಮಾಣ ಮಾಡಬೇಕದರೆ ಅನೇಕ ತೊಂದರೆಗಳು ಬರುತ್ತವೆ. ಇವುಗಳನ್ನು ಮೀರಿ ಹಿಂದಿನ ಅವಧಿಯ ಆಡಳಿತ ಮಂಡಳಿಯ ಸದಸ್ಯರು ಸುಂದರ ಹಸಿರು ಹೊನ್ನು ಕಂಗೊಳಿಸುವಂತೆ ಮಾಡಿದಾರೆ. ಇದು ನಮ್ಮ ಗ್ರಾಪಂಗೆ ಒಂದು ಹೆಮ್ಮೇಯ ವಿಷಯ. -ಅಮರೇಶ ಪಾಟೀಲ್ ,ಗ್ರಾಪಂ ಸದಸ್ಯ ಶಿರಗುಂಪಿ.

 

-ವರದಿ: ಮಲ್ಲಿಕಾರ್ಜುನ ಮೆದಿಕೇರಿ. ದೋಟಹಾಳ.

Advertisement

Udayavani is now on Telegram. Click here to join our channel and stay updated with the latest news.

Next