Advertisement
ಸ್ಥಳದಿಂದ ಎಲ್ಲ ರೈಲ್ವೇ ಸಿಬಂದಿ ಮತ್ತು ಕಾರ್ಮಿಕರನ್ನು ತೆರವುಗೊಳಿಸಲಾಗಿದ್ದು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಎಲ್ಲ ರೈಲುಗಳ ಸಂಚಾರವನ್ನು ಆ. 23ರ ವರೆಗೆ ರದ್ದುಗೊಳಿಸಲಾಗಿದೆ.
Related Articles
ಮಂಗಳೂರು- ಚೆನ್ನೈ ಮತ್ತು ತಿರುವನಂತ ಪುರ-ಮಂಗಳೂರು ನಡುವೆ ಕೆಲವು ರೈಲು ಸಂಚಾರವನ್ನು ಆ. 10ರಂದು ರದ್ದುಗೊಳಿಸಲಾ ಗಿತ್ತು ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.
Advertisement
ಕೊಂಕಣ ರೈಲು ಮಾರ್ಗಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಆ. 12ರ ರೈಲು ನಂ.22660 ಡೆಹ್ರಾಡೂನ್- ಕೊಚ್ಚುವೇಲಿ ಎಕ್ಸ್‌ಪ್ರೆಸ್, ಆ. 13 ಮತ್ತು ಆ. 16ರ ರೈಲು ನಂ. 22149 ಪುಣೆ-ಎರ್ನಾಕುಳಂ ಪೂರ್ಣ ಎಕ್ಸ್‌ಪ್ರೆಸ್, ಆ.14ರ ರೈಲು ನಂ. 22150 ಪುಣೆ-ಎರ್ನಾಕುಲಂ ಎಕ್ಸ್‌ಪ್ರೆಸ್, ಆ.14ರ ರೈಲು ನಂ. 12218 ಚಂಡೀಗಢ-ಕೊಚ್ಚುವೇಲಿ ರೈಲು, ಆ. 12ರ ಕುರ್ಲಾ-ತಿರುವನಂತಪುರ ನಂ. 16345 ನೇತ್ರಾವತಿ ಎಕ್ಸ್‌ಪ್ರೆಸ್, ಆ. 12ರ ರೈಲು ನಂ. 12618 ನಿಜಾಮುದ್ದೀನ್- ಎರ್ನಾಕುಳಂ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ. ವಿಮಾನ ಸಂಚಾರ ವಿಳಂಬ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳು ವಿಳಂಬ ವಾಗಿ ಸಂಚರಿಸಿವೆ.