Advertisement

ಆತಂಕದ ನಡುವೆ ಶಿರಾಡಿ ಘಾಟಿ ಸಂಚಾರ

02:12 AM Aug 12, 2019 | Team Udayavani |

ನೆಲ್ಯಾಡಿ: ಶಿರಾಡಿ ಘಾಟಿ ರಸ್ತೆಯಲ್ಲಿ ರವಿವಾರ ಆತಂಕದಿಂದಲೇ ವಾಹನ ಸಂಚಾರ ಪ್ರಾರಂಭವಾಗಿದೆ.

Advertisement

ರವಿವಾರ ಮಳೆ ತುಸು ಕಡಿಮೆಯಾದ ಹಿನ್ನೆಲೆಯಲ್ಲಿ ಘನ ವಾಹನ ಗಳ ಸಂಚಾರಕ್ಕೂ ಅನುಮತಿ ನೀಡಲಾಯಿತು. ಶನಿವಾರ ತಡರಾತ್ರಿ ಲಾರಿಯೊಂದು ಶಿರಾಡಿ ಗಡಿಯ ಮೇಲ್ಭಾಗದಲ್ಲಿ ಚರಂಡಿಗೆ ಬಿದ್ದ ಪರಿಣಾಮಸಂಚಾರಕ್ಕೆ ಸ್ವಲ್ಪಕಾಲ ತಡೆಯುಂಟಾಗಿತ್ತು. ರವಿವಾರ ಬೆಳಗ್ಗೆ 10 ಗಂಟೆಯ ಬಳಿಕ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಘನ ವಾಹನಗಳಿಗೂ ಸಂಜೆ 6ರ ವರೆಗೆಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದ್ದು, ರಾತ್ರಿ ಗುಡ್ಡ ಕುಸಿತ ಭೀತಿಯ ಕಾರಣ ನಿರ್ಬಂಧ ಹೇರಲಾಗಿದೆ.

ಘನವಾಹನಗಳಿಂದ ಅಡಚಣೆ

ಶನಿವಾರ ರಾತ್ರಿಯಿಂದಲೇ ಘನ ವಾಹನಗಳನ್ನು ಗುಂಡ್ಯ ಪ್ರದೇಶದಲ್ಲಿ ಅಡ್ಡಾದಿಡ್ಡಿ ನಿಲುಗಡೆ ಮಾಡಿದ್ದರಿಂದ ಗುಂಡ್ಯ ಜಂಕ್ಷನ್‌ ಇಡೀ ಬ್ಲಾಕ್‌ ಆಗಿ ವಾಹನಗಳು ಪರದಾಡುವಂತಾಗಿತ್ತು. ಅಪಾರ ಸಂಖ್ಯೆಯಲ್ಲಿ ಇದ್ದ ವಾಹನ ಸವಾರರು ಮತ್ತು ಇತರರಿಗೆ ಆಹಾರದಕೊರತೆ ಎದುರಾಗಿತ್ತು. ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಪ್ರಶಾಂತ್‌ ಭಟ್ ಮಾಣಿಲ ಅವರು ಸುಬ್ರಹ್ಮಣ್ಯದ ಹೊಟೇಲ್ಗಳಿಂದ ಆಹಾರವನ್ನು ಸಂಗ್ರಹಿಸಿ ತಂದು ಗುಂಡ್ಯ ಭಾಗದ ಸಂತ್ರಸ್ತರಿಗೆ ವಿತರಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಗುಂಡಿ ಮುಚ್ಚುವ ಕಾರ್ಯ

Advertisement

ಇದೇವೇಳೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಿಂದ ಗುಂಡ್ಯದ ವರೆಗಿನ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು ಉಂಟಾಗಿದ್ದು, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಆಗ್ರಹ, ಹೆದ್ದಾರಿ ಎಂಜಿನಿಯರ್‌ ಲಿಂಗೇಗೌಡ ಅವರ ಸೂಚನೆ ಮೇರೆಗೆ ಗುಂಡಿಮುಚ್ಚುವ ಕಾರ್ಯ ಪ್ರಾರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next