Advertisement
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೋರಿದ ಪ್ರವಾಹದಿಂದಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 4,200 ಕಿ.ಮೀ. ರಸ್ತೆ ಹಾನಿಯಾಗಿದ್ದು, ಸುಮಾರು 8 ಸಾವಿರ ಕೋ. ರೂ. ನಷ್ಟವನ್ನು ಅಂದಾಜಿಸಲಾಗಿದೆ. ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆಗಳ ದುರಸ್ತಿಗೆ 500 ಕೋ.ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಮುಂದಿನ ವರ್ಷ ಎಪ್ರಿಲ್‌ನಿಂದ ದೇಶಾದ್ಯಂತ ಏಕರೂಪದ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದವರು ತಿಳಿಸಿದರು. ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿರುವ 32 ಟೋಲ್ ಗೇಟ್‌ಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ದೇಶದ್ರೋಹಿಗಳು, ಭಯೋತ್ಪಾದಕರ ಗುರುತು ಹಿಡಿಯಲೂ ಇದು ಸಹಕಾರಿಯಾಗಲಿದೆ ಎಂದರು. ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿರುವ 32 ಟೋಲ್ ಗೇಟ್‌ಗಳಲ್ಲಿಯೂ ಹೊಸ ಟೋಲ್ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ. ಇದರಿಂದ ವಾಹನ ಸವಾರರ ಸಮಯ, ಇಂಧನ ಹಾಗೂ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೆ ನೋಂದಣಿಯಿಲ್ಲದ ವಾಹನ, ದಾಖಲೆಗಳಿಲ್ಲದೆ ವಾಹನ ಸವಾರಿ ಮಾಡುವುದನ್ನು ಟೋಲ್‌ಗೇಟ್‌ಗಳಲ್ಲಿಯೇ ಪತ್ತೆ ಹಚ್ಚುವ ವ್ಯವಸ್ಥೆ ಜಾರಿಗೆ ಬರಲಿದೆ. ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಗೆ ಕೇಂದ್ರ ಹಾಗೂ ರಾಜ್ಯ ಶೇ. 50ರಷ್ಟು ವೆಚ್ಚ ಭರಿಸಲಿವೆ.