Advertisement

ಶಿರಾಡಿ: ಸಂಚಾರ ಪುನರಾರಂಭ

01:10 AM Aug 13, 2019 | Sriram |

ಮಂಗಳೂರು: ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರು -ಬೆಂಗಳೂರು ಬಸ್‌ ಸಂಚಾರ ಪುನರಾರಂಭ ಆಗಿದ್ದು, ಸೋಮವಾರ ಹಗಲು ಬಸ್‌ ಮತ್ತು ಲಾರಿ ಸಹಿತ ಎಲ್ಲ ವಾಹನಗಳು ಓಡಾಟ ನಡೆಸಿವೆ.

Advertisement

ಹೀಗಾಗಿ ರಾತ್ರಿ ವೇಳೆ ಖಾಸಗಿ ಬಸ್‌ಗಳು ಶಿರಾಡಿ ಮೂಲಕ ಓಡಾಟ ನಡೆಸಿವೆ ಎಂದು ಖಾಸಗಿ ಬಸ್‌ ಸಂಸ್ಥೆಗಳ ಮೂಲಗಳು ತಿಳಿಸಿವೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಮಡಿಕೇರಿ- ಮೈಸೂರು ಮಾರ್ಗವಾಗಿ ಮಾತ್ರ ಸಂಚರಿಸಿವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ನಿಯಂತ್ರಣ ಅಧಿಕಾರಿ ಅಶ್ರಫ್‌ ಉದಯವಾಣಿಗೆ ತಿಳಿಸಿದ್ದಾರೆ.

ಅಂಕೋಲಾದಲ್ಲಿ ರಸ್ತೆ ಸಂಪರ್ಕ ಯಥಾ ಸ್ಥಿತಿಗೆ ಬಂದಿದ್ದು, ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೋಗುವ ಬಸ್‌ಗಳು ಶಿರಸಿ ಮಾರ್ಗದ ಬದಲು ಅಂಕೋಲಾ ಮಾರ್ಗವಾಗಿ ಓಡಾಟ ನಡೆಸಲಿವೆ ಎಂದು ಮೂಲಗಳು ವಿವರಿಸಿವೆ.

ಮಂಗಳೂರು- ಬೆಂಗಳೂರು ಪ್ರಯಾಣ ದರ ಹೆಚ್ಚಳ?
ಮಂಗಳೂರು-ಬೆಂಗಳೂರು ಖಾಸಗಿ ಬಸ್‌ ಪ್ರಯಾಣ ದರ (ಆನ್‌ಲೈನ್‌ ಬುಕಿಂಗ್‌) ಸೋಮವಾರ 700 ರೂ. ಗಳಿಂದ 800 ರೂ. ತನಕ ಇದ್ದು, ಸಾಮಾನ್ಯ ಸ್ಥಿತಿಯಲ್ಲಿದೆ. ಆ. 13ರ ಬುಕ್ಕಿಂಗ್‌ಗೆ ಕೆಲವು ಬಸ್‌ ಕಂಪೆನಿಗಳಲ್ಲಿ ಗರಿಷ್ಠ 1900 ರೂ. ಇದೆ. 2-3 ದಿನಗಳ ಹಿಂದೆ ಮಳೆ ಮತ್ತು ನೆರೆಯಿಂದ ಬಸ್‌ ಸಾರಿಗೆ ಸಂಪರ್ಕ ಮೊಟಕುಗೊಂಡಿದ್ದಾಗ 3000 ರೂ. ತನಕ ತಲುಪಿತ್ತು.

ವಿಮಾನ ಫುಲ್‌!
ಮಂಗಳೂರು- ಬೆಂಗಳೂರು ವಿಮಾನ ಪ್ರಯಾಣಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಈ ಮಾರ್ಗದಲ್ಲಿ ಪ್ರತಿ ದಿನ ಇಂಡಿಗೊ ಕಂಪೆನಿಯ 4 ಹಾಗೂ ಸ್ಪೈಸ್‌ ಜೆಟ್‌ನ 2 ವಿಮಾನಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಪ್ರಯಾಣಿಕರು ಹೌಸ್‌ ಫುಲ್‌ ಆಗಿವೆ. ವಿಮಾನ ಯಾನಕ್ಕೆ ಸಾಮಾನ್ಯ ಟಿಕೆಟ್‌ ದರ 2,500 ರೂ. ನಿಂದ 3,500 ರೂ, ಇದ್ದು, ಈಗ 3,500 ರೂ.ಗಳಿಂದ 4,500 ರೂ. ಗಳಿಗೇರಿದೆ. ಕೆಲವೊಮ್ಮೆ ಇದು 5,500 ರೂ.ಗಳಿಂದ 6,500 ರೂ. ತನಕ ಹೋಗುತ್ತದೆ. ಇತ್ತೀಚೆಗೆ ತುರ್ತು ಸಂದರ್ಭದಲ್ಲಿ 12,000 ರೂ.ಗೆ ಆಗಿತ್ತು. ತನಕ ತಲುಪಿತ್ತು ಎಂದು ಮೂಲಗಳು ತಿಳಿಸಿವೆ.

Advertisement

ಶಿವಮೊಗ್ಗ ಸಂಚಾರ ಇಂದು ಆರಂಭ
ಧಾರಾಕಾರ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಆಗುಂಬೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವ ಬಸ್‌ ಸಂಚಾರ ಸೋಮವಾರ ಮಧ್ಯಾಹ್ನದ ಬಳಿಕ ಆರಂಭವಾಗಿದೆ. ಆಗುಂಬೆ, ತೀರ್ಥಹಳ್ಳಿ ಮಾರ್ಗವಾಗಿ ಕೆಎಸ್ಸಾರ್ಟಿಸಿಯ 4 ಬಸ್ಸುಗಳು ಸಂಚಾರ ಆರಂಭಿಸಿದವು. ಮಂಗಳವಾರದಿಂದ ಎಂದಿನಂತೆ ಸಂಚಾರ ಆರಂಭಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.

ರೈಲು ಸಂಚಾರ ಸ್ಥಗಿತ
ಕೇರಳದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಂಗಳೂರು ಮೂಲಕ ವಿವಿಧೆಡೆಗಳಿಗೆ ಸಂಚರಿಸುವ ರೈಲುಗಳ ಸಂಚಾರ ಸೋಮವಾರವೂ ಸ್ಥಗಿತಗೊಂಡಿದೆ.

ಗಾಂಧೀಧಾಮ್‌ನಿಂದ ತಿರುನೆಲ್ವೆಲಿಗೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು (19424), ಕುರ್ಲಾದಿಂದ ತ್ರಿವೆಂಡ್ರಮ್‌ಗೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್‌ (16345), ತ್ರಿವೆಂಡ್ರಮ್‌ನಿಂದ ನಿಜಾಮುದ್ದೀನ್‌ಗೆ ಸಂಚರಿಸುವ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ (22654), ಓಖಾದಿಂದ ಎರ್ನಾಕುಲಂಗೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು (16337), ಚಂಡೀಗಢದಿಂದ ಕೊಚ್ಚುವೆಲಿಗೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು (12218) ಸಂಚಾರ ಸ್ಥಗಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next