ಸಕಲೇಶಪುರ: ಶಿರಾಡಿ ಘಾಟ್‌ನಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಜತೆ ಸುರಂಗ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲು ಮುಂದಾಗಿರುವುದು ಪರಿಸರವಾದಿಗಳು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚತುಷ್ಪಥ ರಸ್ತೆಗೆ ಹಾಸನ- ಸಕಲೇಶಪುರ-ಮಾರನಹಳ್ಳಿ ನಡುವಿನ ಕಾಮಗಾರಿ ಕಳೆದ ಐದಾರು ವರ್ಷಗಳಿಂದ ನಡೆಯುತ್ತಿದೆ. ಈ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿದ್ದ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ. ಅಲ್ಲದೆ ರಸ್ತೆ ಕಾಮಗಾರಿಗಾಗಿ ಹಲವೆಡೆ ಗುಂಡಿಗಳನ್ನು ಮುಚ್ಚಲು ಲಕ್ಷಾಂತರ ಲೋಡ್ ಮಣ್ಣನ್ನು ಸಕಲೇಶಪುರ ತಾಲೂಕಿನ ವಿವಿಧೆಡೆಯಿಂದ ತಂದು ಸುರಿಯಲಾಗಿದೆ. ಇದರಿಂದ ಪರಿಸರದ ಮೇಲೆ ಈಗಾಗಲೇ ದುಷ್ಪರಿಣಾಮ ಬೀಳುತ್ತಿದೆ.
ಹೆಚ್ಚಿದ ಭೂ ಕುಸಿತ: ಸಕಲೇಶಪುರ-ದೋಣಿಗಾಲ… -ಮಾರನಹಳ್ಳಿ ಮಾರ್ಗದಲ್ಲಂತೂ ಚತು ಷ್ಪಥ ರಸ್ತೆ ಕಾಮಗಾರಿಗಾಗಿ ಲಕ್ಷಾಂತರ ಮರಗಳನ್ನು ಕಡಿದು, ಹಲವೆಡೆ ಬೆಟ್ಟ ಗುಡ್ಡಗಳನ್ನು ಕೊರೆದಿರುವುದರಿಂದ ಈ ರಸ್ತೆಯಲ್ಲಿ ಭೂ ಕುಸಿತಗಳು ಸಾಮಾನ್ಯವಾಗಿದೆ. ದೋಣಿ ಗಾಲ್ ಸಮೀಪ ಕಳೆದ 2 ಮಳೆಗಾಲಗಳಲ್ಲಿ ಭೂ ಕುಸಿತ ಉಂಟಾಗಿ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.
ಮಾರನಹಳ್ಳಿಯಿಂದ ಮುಂದಕ್ಕೆ ಇನ್ನು ಕಡಿದಾದ ತಿರುವು ಗಳು ಹಾಗೂ ಬೃಹತ್ ಅರಣ್ಯಗಳಿದ್ದು ಈ ಹಿನ್ನೆಲೆ ಕೇಂದ್ರ ಸರ್ಕಾರ ಮೊದಲಿಗೆ ಮಾರನಹಳ್ಳಿಯಿಂದ 23 ಕಿ.ಮೀ ದೂರ ಸುರಂಗ ಮಾರ್ಗವನ್ನು ಮಾಡುವ ಪ್ರಸ್ತಾವನೆ ಹೊಂದಿತ್ತು. ಆದರೆ, ಕಳೆದ ತಿಂಗಳು ಕೇಂದ್ರ ಕೇಂದ್ರ ಹೆದ್ದಾರಿ, ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುರಂಗ ಮಾರ್ಗ ಮಾಡಲು ಅಪಾರ ಹಣ ವ್ಯಯ ಮಾಡಬೇಕಾಗುತ್ತದೆ. ಈ ಹಿನ್ನೆಲೆ ಸುರಂಗ ಮಾರ್ಗದ ಯೋಜನೆ ಕೈ ಬಿಡಲು ಮುಂದಾಗಿದ್ದೇವೆ ಎಂದರು.
ಪರಿಸರದ ಮೇಲೆ ಹಾನಿ: ಈಗಾಗಲೆ ಪಶ್ಚಿಮಘಟ್ಟವನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಹಾಳುಗೆಡವಲಾ ಗುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಶಿರಾಡಿ ಘಾಟ್‌ನಲ್ಲಿ ಎರಡು ಯೋಜನೆಗಳನ್ನು ಮಾಡಲು ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಸುರಂಗ ಮಾರ್ಗ ಯೋಜನೆ ಬೇಕಿದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಅವಶ್ಯವಿರಲಿಲ್ಲ. ಇಲ್ಲ ಚತುಷ್ಪಥ ರಸ್ತೆ ಕಾಮಗಾರಿ ಮಾಡಲು ಮುಂದಾದಲ್ಲಿ ಸುರಂಗ ಮಾರ್ಗದ ಅವಶ್ಯವಿರಲಿಲ್ಲ. ಇದೀಗ ಕೇಂ ದ್ರ ಸರ್ಕಾರ ಎರಡು ಯೋಜನೆಗಳನ್ನು ಅನುಷ್ಠಾನ ಮಾಡಲು ಮುಂದಾಗಿದ್ದು, ಇದರಿಂದ ಪರಿಸರದ ಮೇಲೆ ನೇರ ಹಾನಿಯಾಗುವುದರಲ್ಲಿ ಅನುಮಾ ನವಿಲ್ಲ. ಹಲವಾರು ಜೀವ ವನ್ಯ ಜೀವಿ ಪ್ರಭೇದಗಳು ಹಾಗೂ ಸಸ್ಯ ಸಂಕುಲಗಳು ಪಶ್ಚಿಮ ಘಟ್ಟದಲ್ಲಿದ್ದು ಸುರಂಗ ಮಾರ್ಗದಿಂದ ಈ ಜೀವ ಸಂಕುಲ ಗಳಿಗೆ ನೇರವಾಗಿ ಹಾನಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಎರಡರಲ್ಲಿ ಒಂದು ಯೋಜನೆಯನ್ನು ಮಾತ್ರ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿದೆ.
23.5 ಕಿ.ಮೀ. ಉದ್ದದ ಸುರಂಗ ಮಾರ್ಗ
ಕೇಂದ್ರ ಸರ್ಕಾರ ಏಕಾಏಕಿ ಶಿರಾಡಿ ಘಾಟಿ ವಿಭಾಗದ ಮಾರನಹಳ್ಳಿ-ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 1, 976 ಕೋಟಿ ರೂ. ಮೊತ್ತದ ಬಿಡ್ ಕರೆದಿದ್ದು ಅಲ್ಲದೆ 23 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ 2023ರ ಏಪ್ರಿಲ್ ಒಳಗಾಗಿ ಸಾಧ್ಯತೆ ವರದಿ (ಡಿಪಿಆರ್) ಅಂತಿಮಗೊಳಿಸಿ ಮೇ ತಿಂಗಳಿನಲ್ಲಿ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಈ ಯೋಜನೆಗೆ ಸುಮಾರು 15 ಸಾವಿರ ಕೋಟಿ ಅನು ದಾನ ಮೀಸಲಿಡಲಾಗುತ್ತದೆ ಎಂದು ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದಾರೆ. ಆಸ್ಟ್ರಿಯಾ ಮೂಲದ ಜಿಯೊ ಕನ್ಸಲ್ಟ್ ಇಂಡಿಯಾ ಸಂಸ್ಥೆ ಡಿಪಿಆರ್ ಸಿದ್ಧಪಡಿ ಸಿದ್ದು ಸುಮಾರು 23.5 ಕಿ.ಮೀ
ಉದ್ದದ ಸುರಂಗ ಮಾರ್ಗ ಯೋಜನೆಯಲ್ಲಿ 6 ಸುರಂಗಗಳು, 7 ಸೇತುವೆಗಳು ಸೇರಿದೆ.
ಈಗಾಗಲೆ ಮಲೆನಾಡು ಭಾಗದಲ್ಲಿ ಜಲವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಅಪಾರ ಪರಿಸರ ನಾಶವಾಗಿದೆ. ಇದೀಗ ಶಿರಾಡಿ ಘಾಟ್‌ನಲ್ಲಿ ಎರಡು ಯೋಜನೆಗಳನ್ನು ಮಾಡುವುದು ಸರಿಯಲ್ಲ. ಯಾವುದಾದರು ಒಂದು ಯೋಜನೆಯನ್ನು ಅನುಷ್ಠಾನ ಮಾಡಲಿ, ಈ ಯೋಜನೆಯಿಂದ ಮಲೆನಾಡಿಗರಿಗೆ ತೊಂದರೆಯೆ ಹೆಚ್ಚು.
● ಇತಿಹಾಸ್, ಪರಿಸರವಾದಿ
ಸುಧೀರ್ ಎಸ್.ಎಲ್