ಪುತ್ತೂರು: ಮಂಗಳೂರು- ಬೆಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿ ಶಿರಾಡಿ ಘಾಟಿ ಆಗಸ್ಟ್ 1ರ ಮಧ್ಯರಾತ್ರಿ 12 ಗಂಟೆಯಿಂದಲೇ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಅಗತ್ಯ ಇಲಾಖೆಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶ ಪತ್ರ ವನ್ನು ಬುಧವಾರ ರವಾನಿಸಿದ್ದಾರೆ ಮಧ್ಯ ರಾತ್ರಿ ವೇಳೆಗೆ ಗುಂಡ್ಯ ಹಾಗೂ ಮಾಣಿ ಸಮೀಪ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರೆಯಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಶಿರಾಡಿ ಘಾಟಿ ರಸ್ತೆ ಜು. 15ರಂದು ಉದ್ಘಾಟನೆಗೊಂಡಿದ್ದರೂ ಲಘು ವಾಹನಗಳಿಗಷ್ಟೇ ತೆರೆದುಕೊಂಡಿತ್ತು. ತಡೆಗೋಡೆ, ರಸ್ತೆ ಅಂಚಿನ ಕಾಮಗಾರಿ ಬಾಕಿ ಇದ್ದ ಹಿನ್ನೆಲೆಯಲ್ಲಿ ಘನ ವಾಹನಗಳಗೆ ಮತ್ತೂ 15 ದಿನ ತಡೆ ನೀಡಲಾಗಿತ್ತು. ಘಾಟಿಯಲ್ಲಿ ಇನ್ನೂ 3 ಕಿ.ಮೀ. ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ಅಂಚಿಗೆ ಮಣ್ಣು ಹಾಕುವ ಕಾಮಗಾರಿ ಬಾಕಿ ಇದೆ. ತಡೆಗೋಡೆ ಕುಸಿತ ಕಂಡಿರುವಲ್ಲಿ, ರಿಫ್ಲೆಕ್ಟರ್, ಶೀಟ್‌ಗಳನ್ನು ಹಾಕಲಾಗಿದೆ.
ಉಪ್ಪಿನಂಗಡಿ: ಆ. 1 ರಿಂದಲೇ ಘಾಟಿ ಮೂಲಕ ಘನ ವಾಹನಗಳಿಗೆ ಅವಕಾಶ ಲಭಿಸುವ ನಿರೀಕ್ಷೆಯಲ್ಲಿ ಹಲವು ವಾಹನಗಳು ಗುಂಡ್ಯ ತನಕ ಬಂದಿದ್ದವು. ಜಿಲ್ಲಾಡಳಿತ ಆದೇಶ ಬಾರದಿದ್ದ ಕಾರಣ ಅವುಗಳನ್ನು ಪೊಲೀಸರು ತಡೆಹಿಡಿದರು.
ಶಿರಾಡಿ ಘಾಟಿ ರಸ್ತೆಯಲ್ಲಿ ಬಾಕಿ ಯಾಗಿದ್ದ ಕಾಮಗಾರಿ ಪೂರ್ಣಗೊಂಡಿವೆ. ಆದ್ದರಿಂದ ಘನ ವಾಹನಗಳ ಸಂಚಾರಕ್ಕೆ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಹಿಂದಕ್ಕೆ ಪಡೆಯ ಲಾಗಿದೆ. ಆಗಸ್ಟ್ 2ರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಶಿರಾಡಿ ಮುಕ್ತವಾಗಿದೆ.
-ಶಶಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿ, ದ.ಕ.