Advertisement

Gujarat ಕರಾವಳಿಯಲ್ಲಿ 20 ಭಾರತೀಯರಿದ್ದ ಹಡಗಿನ ಮೇಲೆ ಡ್ರೋನ್ ದಾಳಿ

08:31 PM Dec 23, 2023 | Team Udayavani |

ವೆರಾವಲ್ : ಗುಜರಾತ್‌ನ ಕರಾವಳಿಯ ವೆರಾವಲ್‌ನಿಂದ ನೈಋತ್ಯಕ್ಕೆ 200 ಕಿಮೀ ದೂರದಲ್ಲಿರುವ ಇಸ್ರೇಲ್-ಸಂಯೋಜಿತ ವ್ಯಾಪಾರಿ ನೌಕೆಗೆ ಮಾನವ ರಹಿತ ವೈಮಾನಿಕ ವಾಹನವೊಂದು ಶನಿವಾರ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಘಟನೆ ನಡೆದ ಬೆನ್ನಲ್ಲೇ ಸುತ್ತಮುತ್ತಲಿನ ನೌಕಾಪಡೆಯ ಯುದ್ಧನೌಕೆಗಳು 20 ಭಾರತೀಯ ಸಿಬಂದಿಗಳಿದ್ದ ಹಡಗಿನ ಕಡೆಗೆ ದೌಡಾಯಿಸಿ ಸಿಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿವೆ.

Advertisement

20 ಭಾರತೀಯರೊಂದಿಗೆ ಪೋರ್ ಬಂದರ್ ಕರಾವಳಿಯಿಂದ ಸುಮಾರು 217 ನಾಟಿಕಲ್ ಮೈಲುಗಳ ದೂರದಲ್ಲಿ ಎಂವಿ ಕೆಮ್ ಪ್ಲುಟೊ ಹೆಸರಿನ ಹಡಗಿನ ಮೇಲೆ ಶಂಕಿತ ಡ್ರೋನ್ ದಾಳಿ ಸಂಭವಿಸಿದೆ.

ಅರಬ್ಬಿ ಸಮುದ್ರದಲ್ಲಿ ಲೈಬೀರಿಯನ್ ಧ್ವಜದ ರಾಸಾಯನಿಕ ಉತ್ಪನ್ನಗಳ ಟ್ಯಾಂಕರ್ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಹಡಗು ಕಚ್ಚಾ ತೈಲ ಹೊತ್ತು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಮಾಹಿತಿಯ ಪ್ರಕಾರ ಬೆಂಕಿಯನ್ನು ನಂದಿಸಲಾಗಿದೆಯಾದರೂ ಹಡಗಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ.

Advertisement

Udayavani is now on Telegram. Click here to join our channel and stay updated with the latest news.

Next