Advertisement

ಮಿಸೈಲ್, ಶಸ್ತ್ರಾಸ್ತ್ರ ತುಂಬಿದ್ದ ಚೀನಾ ನೌಕೆ ಪಾಕ್ ಬದಲು ಗುಜರಾತ್ ಬಂದರಿನಲ್ಲಿ ಲಂಗರು?

11:09 AM Feb 19, 2020 | Nagendra Trasi |

ಅಹಮದಾಬಾದ್: ಚೀನಾ ಆಡಳಿತಕ್ಕೊಳಪಟ್ಟ ಹಾಂಗ್ ಕಾಂಗ್ ಬಾವುಟ ಹೊಂದಿರುವ ಬೃಹತ್ ನೌಕೆಯನ್ನು ಕೇಂದ್ರ ಮತ್ತು ರಾಜ್ಯ ಭದ್ರತಾ ಏಜೆನ್ಸಿ ಅಧಿಕಾರಿಗಳು, ಡಿಆರ್ ಡಿಒ ಅಧಿಕಾರಿಗಳು ಹಾಗೂ ಕಸ್ಟಮ್ಸ್ ಅಧಿಕಾರಿಗಳು ಗುಜರಾತ್ ನ ಕಾಂಡ್ಲಾ ಬಂದರು ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದು ಸಿಬ್ಬಂದಿಗಳ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

Advertisement

“ಡಾ ಕೂಯಿ ಯೂನ್” ಹೆಸರಿನ ಹಡಗು ಚೀನಾದ ಜಿಯಾಂಗ್ ಯಿನ್ ಬಂದರಿನಿಂದ ಜನವರಿ 17ರಂದು ಹೊರಟಿತ್ತು. ನೌಕೆಯಲ್ಲಿ ಮಿಸೈಲ್ ತಯಾರಿಕೆಗೆ ಸಂಬಂಧಿಸಿದ ಕೆಲವು ಉಪಕರಣಗಳು ಇದ್ದಿದ್ದು ಇದು ಕರಾಚಿಯ ಖ್ವಾಸಿಂ ಬಂದರು ಪ್ರದೇಶ ತಲುಪಬೇಕಿತ್ತು ಎಂದು ಕೆಲವು ಭಾರತೀಯ ಮತ್ತು ವಿದೇಶಿ ಮಾಧ್ಯಮಗಳ ವರದಿ ವಿವರಿಸಿದೆ.

ಇದು ಜನರಲ್ ಕಾರ್ಗೋ ನೌಕೆಯಾಗಿದ್ದು, ಇದರಲ್ಲಿ 22 ಮಂದಿ ಸಿಬ್ಬಂದಿಗಳಿದ್ದಾರೆ. ಹಡಗು ಕಾಂಡ್ಲಾದ ಬಂದರಿನಲ್ಲಿ ಲಂಗರು ಹಾಕಿತ್ತು. ಕೆಲವು ವಸ್ತುಗಳನ್ನು ಇಳಿಸಲು ಅಥವಾ ತುಂಬಿಸಲು ಹಡಗು ಲಂಗರು ಹಾಕಿರಬೇಕು ಎಮದು ಕಾಂಡ್ಲಾ ಬಂದರು ಅಧಿಕಾರಿಗಳು ಶಂಕಿಸಿದ್ದರು. ಆದರೆ ಕಸ್ಟಮ್ಸ್ ಅಧಿಕಾರಿಗಳು ಸಿಬ್ಬಂದಿಯನ್ನು ಬಂಧಿಸಿ, ಪರಿಶೀಲಿಸಿದಾಗ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದ್ದವು.

ಹಡಗಿನಲ್ಲಿ ಕ್ಷಿಪಣಿ ಉಡ್ಡಯನ ಮಾಡಲು ಬಳಸುವ ಪ್ರೆಶ್ಶರ್ ಚೇಂಬರ್ ಸಾವಿರಾರು ಟನ್ ಗಳಷ್ಟು ಇದ್ದಿರುವುದಾಗಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next