Advertisement

ಹೊಸದುರ್ಗ: ಆಳ ಸಮುದ್ರದಲ್ಲಿ ಶಂಕಿತ ಹಡಗು ಪತ್ತೆ

01:29 AM Jul 13, 2022 | Team Udayavani |

ಕುಂಬಳೆ : ಕಾಸರಗೋಡು ಜಿಲ್ಲೆಯ ಹೊಸದುರ್ಗ ಬಲ್ಲದ ಆಳ ಸಮುದ್ರದಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಹಡಗು ಗೋಚರಿಸಿದೆ.

Advertisement

ಹಡಗಿನ ಪ್ರಖರ ಬೆಳಕು ಸಮುದ್ರ ತೀರದುದ್ದಕ್ಕೂ ಕಾಣಿಸುತ್ತಿತ್ತು. ಕರಾವಳಿ ಜಾಗೃತ ಸಮಿತಿಯವರು ಇದನ್ನು ಕಂಡು ಕರಾವಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು, ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಭಾರತೀಯ ನೌಕಾ ಪಡೆ ಮತ್ತು ಕರಾವಳಿ ಸಂರಕ್ಷಣ ಪಡೆಯ ಹಡಗುಗಳು ಬಂದರುಗಳಲ್ಲದೆ ಇತರೆಡೆಗಳಲ್ಲಿ ಸಮುದ್ರ ದಡದ ಮೂಲಕ ಸಾಗುವುದಿಲ್ಲ. ಆದರೆ ಇಲ್ಲಿ ಹಡಗೊಂದು ಸಮುದ್ರ ತೀರದಲ್ಲಿ ಪತ್ತೆಯಾಗಿರುವುದು ಹಲವು ಶಂಕೆಗೆ ಕಾರಣವಾಗಿದೆ.

ಸಮುದ್ರ ಮಾರ್ಗವಾಗಿ ಉಗ್ರವಾದಿಗಳು ನುಸುಳುವ ಸಾಧ್ಯತೆ ಇರುವುದಾಗಿ ದೇಶದ ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಸಮುದ್ರ ಮಾರ್ಗವಾಗಿ ಮಾದಕ ವಸ್ತು, ಆಯುಧ, ಚಿನ್ನ ಸಾಗಾಟ ನಡೆಯುತ್ತಿದೆ. ಇಂಥ ಕೃತ್ಯಗಳು ರಾತ್ರಿ ಕಾಲದಲ್ಲಿ ನಡೆಯುತ್ತಿದ್ದು ಇದನ್ನು ಕೇಂದ್ರ ಗುಪ್ತಚರ ವಿಭಾಗ ತನಿಖೆ ನಡೆಸುತ್ತಿದೆ. ಭಾರತೀಯ ನೌಕಾ ಪಡೆ ಮತ್ತು ಕರಾವಳಿ ಸಂರಕ್ಷಣ ಪಡೆಗೂ ಈ ಕುರಿತು ಜಾಗೃತರಾಗಿರಲು ಆದೇಶ ನೀಡಲಾಗಿದೆ. ಈ ಹಡಗನ್ನು ಪತ್ತೆಹಚ್ಚಲು ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next