Advertisement

ಶಿಂಜೋ ಅಬೆ ಫಾಲೋ ಮಾಡಿದ ಏಕೈಕ ನಾಯಕ ಪ್ರಧಾನಿ ಮೋದಿ

07:55 PM Jul 08, 2022 | Team Udayavani |

ಶಿಂಜೋ ಅಬೆ ಅವರು ಟ್ವಿಟರ್‌ನಲ್ಲಿ ಕೇವಲ ಮೂವರನ್ನು ಮಾತ್ರ ಫಾಲೋ ಮಾಡುತ್ತಿದ್ದರು. ಅವರಲ್ಲಿ ಮೋದಿ ಕೂಡ ಒಬ್ಬರು ಎಂಬುದು ಹೆಮ್ಮೆ ಪಡುವ ವಿಚಾರ.

Advertisement

ಅಬೆ ಅವರು ಫಾಲೋ ಮಾಡುತ್ತಿದ್ದ ಇನ್ನಿಬ್ಬರೆಂದರೆ ಅವರ ಪತ್ನಿ ಅಕೀ ಅಬೆ ಹಾಗೂ ಜಪಾನ್‌ನ ಪತ್ರಕರ್ತ ನವೊಕಿ ಇನೊಸ್‌.

ಇಲ್ಲಿ ಗಮನಿಸಬೇಕಾದ ವಿಶೇಷವೇನೆಂದರೆ, ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮುನ್ನವೇ ಅಬೆ ಅವರು ಮೋದಿಯವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದರು ಎಂಬುದು.

ಇದು, ಇವರಿಬ್ಬರ ನಡುವೆ ಆತ್ಮೀಯತೆ ಹಾಗೂ ಭಾರತ- ಜಪಾನ್‌ ನಡುವಿನ ಸ್ನೇಹ, ಬಾಂಧವ್ಯಗಳ ಪ್ರತಿಬಿಂಬವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next