Advertisement
ಇತಿಹಾಸ ಎರಡನೇ ಮಹಾಯುದ್ಧದ ಸಮಯದಲ್ಲಿ ಮಹಿಳೆಯರು ಈ ಬಗೆಯ ಡ್ರೆಸ್ ಗಳನ್ನು ತೊಡುತ್ತಿದ್ದರು. ಮೊದಲ ಬಾರಿಗೆ ಇದನ್ನು ರೊಸಿ ಎನ್ನುವವರು ಬಳಕೆಗೆ ತಂದಿದ್ದು ಇದನ್ನು ನೋಡಿದ ಬೇರೆ ದೇಶದ ಮಹಿಳೆಯರು ತಲೆಗೊಂದು ಸ್ಕಾರ್ಫ್
ತೊಡಲು ಪ್ರಾರಂಭಿಸಿದರು. ಅನಂತರ 20ನೇ ಶತಮಾನದಲ್ಲಿ ಕೂಡ ಇದರ ಬಳಕೆ ಹೆಚ್ಚಿದ್ದು ಸ್ಕೈಡೈವರ್ ಗಳು ಮತ್ತು ಪ್ಯಾರಾ ಶೂಟರ್‌ಗಳಿಗಾಗಿ ಈ ಒನ್‌ಪಿಸ್ ಜಂಪ್ ಸೂಟ್ ಉಡುಗೆಗಳನ್ನು ತಯಾರಿಸಲಾಗುತ್ತಿತ್ತು. ಮುಂದೇ ಅತಿ ಹೆಚ್ಚು ಬಾಳಿಕೆ ಬರುವುದರಿಂದ ಇದೇ ದಿರಿಸು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸ್ತ್ರೀಯರ ಉಡುಪಾಯಿತು.
ಚಿಕ್ಕ ಮಕ್ಕಳಿಗೂ ಬಲು ಇಷ್ಟದ ಉಡುಗೆ. ಚಿಕ್ಕ ಜಂಪ್‌ಸೂಟ್ ಹಾಗೂ ಉದ್ದನೆಯ ಸೂಟ್ ಗಳು ಲಭ್ಯವಿದ್ದು ಜೀನ್ಸ್ ಗಳಲ್ಲಿ, ಹಾಗೂ ತೆಳು ನೈಲಾನ್ ಬಟ್ಟೆಗಳಲ್ಲಿ ಬಗೆ ಬಗೆಯ ಡಿಸೈನ್ ಗಳಲ್ಲೂ ಸಿಗುತ್ತಿವೆ. ಮಕ್ಕಳಿಗೆ ಬೆಲ್ಟ್
ಬೇಕಾದಲ್ಲಿ ಕಾಟನ್, ಪ್ಲಾಸ್ಟಿಕ್ ಬೆಲ್ಟ್ ಲಭ್ಯ ವಿದ್ದು ಇಷ್ಟವಾಗುವ ಹಾಗೆ ಮ್ಯಾಚ್ ಮಾಡಬಹುದಾಗಿದೆ. ಸೆಲೆಬ್ರೆಟಿಗಳ ಫೆವರೆಟ್
ಸೆಲೆಬ್ರೆಟಿಗಳು ಕೂಡ ಇದನ್ನು ತೊಟ್ಟು ಸಂಭ್ರಮಿಸುತ್ತಿದ್ದಾರೆ. ಶಾಪಿಂಗ್, ಶೂಟಿಂಗ್ ಹೀಗೆ ವಿವಿಧೆಡೆ ಧರಿಸುತ್ತಿದ್ದಾರೆ. ಅದಲ್ಲದೆ ತುಂಬಾ ಕಂಫರ್ಟ್ ಫೀಲ್ ನೀಡುವುದರಿಂದ ಮಾರಾಟದಲ್ಲಿ ಮೂಂಚೂಣಿಯಲ್ಲಿದೆ.
Related Articles
ಹುಡುಗಿಯರು ವಿವಿಧ ಬಗೆಯ ಜಂಪ್ ಸೂಟ್ ಹಾಕುವಾಗ ಹುಡುಗರಲ್ಲಿಯೂ ಕೂಡ ಟ್ರೆಂಡ್ ಶುರುವಾಗಿದ್ದು ಪಾರ್ಟಿ, ಫಂಕ್ಷನ್ ಗಳಿಗೆ ಒಂದೇ ಬಗೆಯಲ್ಲಿ ಬಟ್ಟೆ ತೊಟ್ಟು ಮ್ಯಾಚಿಂಗ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಹುಡುಗರ ಸೂಟ್ ನಲ್ಲಿ ಅಷ್ಟು ವೈವಿಧ್ಯತೆ ಕಂಡು ಬರುವುದಿಲ್ಲವಾದರೂ ವೈಟ್ ಟೀ ಶರ್ಟ್ ಗೆ ಅಥವಾ ಇನ್ನಿತರ ಲೈಟ್ ಬಣ್ಣದ ಶರ್ಟ್ ಹುಡುಗರಿಗೆ ಚಂದವಾಗಿ ಕಾಣುತ್ತವೆ.
Advertisement
ನಿಮಗಿಷ್ಟವಾಗು ವಂತಹ ಸೂಟ್ಜಂಪ್ ಸೂಟ್ ಗಳು ಅನೇಕ ಮಾದರಿಯಲ್ಲಿದ್ದು ನಿಮಗಿಷ್ಟವಾಗುವಂತೆ ತೊಡಬಹುದಾಗಿದೆ. ಅರ್ಧ ತೋಳು ಉದ್ದ ತೋಳು, ವಿತೌಟ್ ನೆಕ್, ವಿತ್ ನೆಕ್, ಪ್ಲೈನ್ ಜೀನ್ಸ್, ಕಲರ್ ಜೀನ್ಸ್ , ಬಿಗಿ ಯಾದ ಹಾಗೂ ಸಡಿಲವಾದ ಜಂಪ್ ಸೂಟ್, ನಿಮಗೆ ಬೇಕಾದಲ್ಲಿ ಡಿಸೈನ್‌ಗಳನ್ನು ನೀವು ಹೇಳಿ ಮಾಡಿಸಿಕೊಳ್ಳಬಹುದಾಗಿದೆ. ಜೀನ್ಸ್ ಗಳು ಮತ್ತು ಪ್ಲೈನ್ ಟೀ ಶರ್ಟ್ ಅಥವಾ ಫುಲ್ ಜೀನ್ಸ್ ಗಳು ಕೂಡ ಇದ್ದು ಫುಲ್ ಜೀನ್ಸ್ ಗಳಲ್ಲಿ ವಿವಿಧ ಮಾದರಿಯ ಬೆಲ್ಟ್ ಗಳು ಲಭ್ಯ ವಿದ್ದು ನಿಮ್ಮ ದಿರಿಸಿಗೆ ತಕ್ಕಂತೆ ಅದನ್ನು ಧರಿಸಬಹುದಾಗಿದೆ. ಪ್ರೀತಿ ಭಟ್ ಗುಣವಂತೆ