ಸಿದ್ದಾಪುರ: ಜೀವನದಲ್ಲಿ ಆತ್ಮ ವಿಶ್ವಾಸ, ನಿಶ್ಚಲವಾದ ಗುರಿ ಹೊಂದಿದಾಗ ಕಾರ್ಯ ಸಾಧನೆಯೊಂದಿಗೆ ಉನ್ನತ ಸ್ಥಾನ ಮಾನಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರು ಮಾದರಿಯಾಗಿದ್ದಾರೆ. ಶೈನ್ ಶೆಟ್ಟಿ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗುವ ಮೂಲಕ ಕುಂದಾಪುರದ ಕೀರ್ತಿಯನ್ನು ಜಗತ್ತಿನಾದ್ಯಂತ ಹೆಚ್ಚಿಸಿದ್ದಾರೆ. ಹೀಗೆ ಯುವ ಸಮುದಾಯ ಹುಟ್ಟೂರ ಕೀರ್ತಿಯನ್ನು ಹೆಚ್ಚಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹಿಲಿಯಾಣ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಹೇಳಿದರು.
ಅವರು ಕಲರ್ ಕನ್ನಡ ಬೀಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧೆ-7ರ ವಿಜೇತ ಶೈನ್ ಶೆಟ್ಟಿ ಅಭಿಮಾನಿಗಳು ಆರ್ಡಿಯಲ್ಲಿ ಹಮ್ಮಿಕೊಂಡ ಶೈನ್ ಶೆಟ್ಟಿ ಹೂಟ್ಟೂರು ಸಮ್ಮಾನದಲ್ಲಿ ಸಮ್ಮಾನಿಸಿ, ಮಾತನಾಡಿದರು.
ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಉನ್ನತ ಸ್ಥಾನಮಾನಗಳು, ಗೌರವ, ಸಮ್ಮಾನಗಳು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಮನಸ್ಸಿನಲ್ಲಿ ದೃಢವಾದ ಗುರಿ, ವ್ಯಕ್ತಿತ್ವದ ಗುಣಗಳು, ಜನರ ಆಶೀರ್ವಾದಗಳಿಂದ ಯಶಸ್ಸು ಕಾಣಲು ಸಾಧ್ಯವಿದೆ. ಸಾಧನೆ ಮಾಡಿದ್ದಾಗ ಹುಟ್ಟೂರು, ಭಾಷಾಭಿಮಾನ, ದೇಶಾಭಿಮಾನ ಅಗತ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಪಡೆದರೂ ಅದು ಹುಟ್ಟೂರಿನ ಹಿರಿಮೆಯನ್ನು ಹೆಚ್ಚಿಸುತ್ತದೆ.ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಸಾಧನೆಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಎಸ್. ಚಂದ್ರಶೇಖರ್ ಶೆಟ್ಟಿ ಸೂರೊYàಳಿ, ವಿಹಿಂಪ ಕುಂದಾಪುರ ಪ್ರಖಂಡದ ಅಧ್ಯಕ್ಷ ವೈ. ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ನಿವೃತ್ತ ಶಿಕ್ಷಕ ಬಾಬು ಶೆಟ್ಟಿ ಜಗುÉಗುಡ್ಡೆ, ಬೆಳ್ವೆ ಗ್ರಾ. ಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಸದಸ್ಯರಾದ ಸತೀಶ್‌ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ, ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ ಬೆಪ್ಡೆ, ಶೈನ್ ಶೆಟ್ಟಿ ಸಂಬಂಧಿಕರಾದ ಎ. ಗುಣಾಕರ ಶೆಟ್ಟಿ, ಪ್ರೇಮಾ ಗುಣಾಕರ ಶೆಟ್ಟಿ, ನ್ಯಾಯವಾದಿ ಉದಯ ಶೆಟ್ಟಿ ಕಾಳಾವರ, ತಂದೆ-ತಾಯಿಯಾದ ಶರತ್‌ಕುಮಾರ ಶೆಟ್ಟಿ ಹಾಗೂ ಇಂದಿರಾ ಎಸ್. ಶೆಟ್ಟಿ, ಸಹೋದರರಾದ ನಿಶಾಂತ ಶೆಟ್ಟಿ, ಸುಶಾಂತ ಶೆಟ್ಟಿ, ನಿಚಿನ್ ಶೆಟ್ಟಿ, ಅನಿವಾಸಿ ಭಾರತೀಯ ಶೈನ್ ಶೆಟ್ಟಿ ಅಭಿಮಾನಿ ಬಳಗದ ರಮೇಶ ಪೂಜಾರಿ, ದಿಲೀಪ್‌ರಾಜ್, ಧರ್ಮರಾಜ್ ಶೆಟ್ಟಿ ಸೇರಿದಂತೆ ನೂರಾರೂ ಅಭಿಮಾನಿ ಗಳು ಉಪಸ್ಥಿತರಿದ್ದರು.
ಅಭಿಮಾನಿಗಳು ಶೈನ್ ಶೆಟ್ಟಿ ಅವರಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಗಣೇಶ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.