Advertisement

ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳಿಗೆ ಶಿಂಧೆ ನಿರ್ದೇಶ

12:20 PM Jul 27, 2019 | Suhan S |

ಮುಂಬಯಿ, ಜು. 26: ರಾಜ್ಯದಲ್ಲಿ ಎಚ್1ಎನ್‌1, ಡೆಂಗ್ಯೂ, ಮಲೇರಿಯಾ ಮತ್ತು ಲೆಪ್ಟೋ ಮುಂತಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರುವ ಮೂಲಕ ಪ್ರತಿ ರೋಗಿಯ ಜೀವ ಉಳಿಸಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಔಷಧಗಳ ಉಪಲಬ್ಧತೆ ಮತ್ತು ಹಂದಿಜ್ವರದ ಮೇಲೆ ನಿಯಂತ್ರಣ ಕಂಡುಕೊಳ್ಳಲು ಕಾರ್ಯ ನಡೆಸುತ್ತಿದ್ದು. ಸದ್ಯ ರಾಜ್ಯವ್ಯಾಪ್ತಿಯ ಆರೋಗ್ಯ ಇಲಾಖೆಗಳ ಬಳಿ ಸುಮಾರು, 9 ಲಕ್ಷ ಗುಳಿಗೆಗಳು ಲಭ್ಯವಿವೆ ಎಂದು ಹೇಳಿದ ಆರೋಗ್ಯ ಸಚಿವ ಏಕನಾಥ್‌ ಶಿಂಧೆ ಅವರು, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ತಡೆ ಗಟ್ಟಲು ಎಲ್ಲಾ ಜಿಲ್ಲಾ ಮಟ್ಟದ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು.

Advertisement

ಆರೋಗ್ಯ ಕಟ್ಟಡದಲ್ಲಿರುವ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಮನಪಾ ಆಯುಕ್ತರು, ಆರೋಗ್ಯ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಶಿಂಧೆ ಅವರು ಮಾತುಕತೆ ನಡೆಸಿದರು.

ರಾಜ್ಯಾದ್ಯಂತ ಆರೋಗ್ಯ, ಆದಾಯ ಮತ್ತು ಮಹಾಪಾಲಿಕೆಗಳೊಂದಿಗೆ ಸಮನ್ವಯದಿಂದ ರೋಗವನ್ನು ನಿಯಂತ್ರಿಸುವ ಎಲ್ಲಾ ಜಿಲ್ಲಾ ಮಟ್ಟದ ಕಾರ್ಯವಿಧಾನಗಳ ಸಮಗ್ರ ಪರಿಶೀಲನೆ ನಡೆಸಲಾಯಿತು. ಅನಂತರ ಯೋಜನೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಆರೋಗ್ಯ ವ್ಯವಸ್ಥೆಯ ಕುರಿತು ವಿವಿಧ ಸಂಸ್ಥೆಗಳ ವತಿಯಿಂದ ಸಲ್ಲಿಸಲಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಶಿಂಧೆ ಅವರು, ಇಂದಿನ ಪರಿಶೀಲನಾ ಸಭೆಯಲ್ಲಿ, ರಾಜ್ಯದಲ್ಲಿ ಎಚ್1ಎನ್‌1, ಡೆಂಗ್ಯೂ, ಮಲೇರಿಯಾ, ಲೆಪ್ಟೋ ಮತ್ತು ಇತರ ಕಾಯಿಲೆಗಳ ಪರಿಹಾರಕ್ಕಾಗಿ ನಡೆಯುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಹಂದಿ ಜ್ವರದ ಲಕ್ಷಣ ಕಂಡುಬಂದಲ್ಲಿ ಅದಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ವಿಳಂಬ ಮಾಡದಂತೆ ಖಾಸಗಿ ವೈದ್ಯರಿಗೆ ಸೂಚನೆ ನೀಡಲಾಗಿದೆ. ರಾಜ್ಯವು ಹಂದಿ ಜ್ವರಕ್ಕೆ ಚಿಕಿತ್ಸೆ ಮತ್ತು ರೋಗಿಯನ್ನು ವೆ ಂಟಿಲೇಟರ್‌ನಲ್ಲಿ ಇರಿಸಲು ಕೈಗೊಂಡಿರುವ ಪ್ರೋಟೋಕಾಲ್ ದೇಶದಲ್ಲಿ ಅತ್ಯುತ್ತಮವಾಗಿದ್ದು, ಈಗ ಕೇಂದ್ರ ಸರಕಾರ ಇದನ್ನು ಅಂಗೀಕರಿಸಿ ದೇಶಾದ್ಯಂತ ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಮುಂಬಯಿ ಮಹಾನಗರ ಪಾಲಿಕೆಯ ನಿಯಮ 381ರ ಪ್ರಕಾರ, ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಇತರ ಮನಪಾಗಳು ಕೂಡ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಹೇಳಿದರು. ಭಾಗಶಃ ನಿರ್ಮಾಣವಿರುವ ಪ್ರದೇಶದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತಿಯಾದರೆ, ಅಂತಹ ಸಂದರ್ಭದಲ್ಲಿ ನೋಟಿಸ್‌ ನೀಡಿ ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಿ, ಕೂಡಲೇ ನೀರಿನ ಟ್ಯಾಂಕ್‌ಗಳು, ಟಾಯರ್ಗಳಲ್ಲಿ ಸಂಗ್ರಹವಾಗಿರುವ ನೀರನ್ನು ತೆಗೆಯಬೇಕು ಎಂದು ಆರೋಗ್ಯ ಸಚಿವರು ಹೇಳಿದರು. ರಾಜ್ಯದಲ್ಲಿ ಸದ್ಯ ಡೆಂಗ್ಯೂವಿನ ಸುಮಾರು 1556 ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

Advertisement

ಗಡ್ಚಿರೋಲಿ ಜಿಲ್ಲೆಯಲ್ಲಿ ಮಲೇರಿಯಾವನ್ನು ನಿಯಂತ್ರಿಸಲು ಸುಮಾರು 1400 ಹಳ್ಳಿಗಳಲ್ಲಿ ಔಷಧ ಸಿಂಪಡಿಸುವಿಕೆಯನ್ನು ನಡೆಸಲಾಗಿದ್ದು, ಈವರೆಗೆ ಸುಮಾರು 4 ಲಕ್ಷ ಸೊಳ್ಳೆಗಳ ಉತ್ಪಾದನೆ ಸ್ಥಳಗಳು ಪತ್ತೆಯಾಗಿವೆ.

ಆರೋಗ್ಯ ಇಲಾಖೆಯು ಆರೋಗ್ಯ ಸೇವೆ ಗಳನ್ನು ಕೊನೆಯ ಘಟಕಕ್ಕೆ ತಲುಪಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು. ಅನಾರೋಗ್ಯದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಆರೋಗ್ಯ ಇಲಾಖೆಯಲ್ಲಿ ನಂಬಿಕೆಯನ್ನು ಹೆಚ್ಚಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬಗ್ಗೆ ಆರೋಗ್ಯ ಸಚಿವ ಏಕನಾಥ ಶಿಂಧೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next