Advertisement
ಶುಕ್ರವಾರ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಂತ್ರಾಂಶ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡುವುದು, ನಿಗ ದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಲು ಇದು ಸಹಕಾರಿಯಾಗಲಿದೆ ಎಂದರು.
Related Articles
Advertisement
ಪಿ.ಒ.ಎಸ್. ಯಂತ್ರಗಳ ಮೂಲಕ ಸ್ವತ್ತಿನ ಪ್ರದೇಶದಲ್ಲಿಯೇ ಕರ ವಸೂಲಿಗಾರರಿಂದ ಆನ್ ಲೈನ್ ಮೂಲಕ ತೆರಿಗೆ ಸಂಗ್ರಹಣೆ ಪ್ರಗತಿಯಲ್ಲಿದೆ. ಆಸ್ತಿ ತೆರಿಗೆ ನಮೂನೆ-3ನ್ನು ಏಕಗವಾಕ್ಷಿಯ ಮೂಲಕ ಗಣಕೀಕೃತ ನಕಲನ್ನು ನೀಡಲಾಗುತ್ತಿದೆ. ಪ್ರಸ್ತುತ ಕಾಲಮಿತಿ ಇದ್ದರೂ ಸಹ ನಿಗ ತ ಅವಧಿಯಲ್ಲಿ ವಿಲೇಯಾಗದ ಕಡತಗಳ ವಿಲೇವಾರಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ನ್ಯೂನತೆ ಸರಿಪಡಿಸಲಾಗಿದೆ ಎಂದರು.
ಅರ್ಜಿದಾರರಿಗೆ ಕಡತದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಹಾಗೂ ಕಡತ ಅನುಮೋದನೆಯಾದ ಬಗ್ಗೆ ಆಸ್ತಿ ವರ್ಗಾವಣೆ ಶುಲ್ಕದ ಕುರಿತು ಅರ್ಜಿದಾರರಿಗೆ ತಕ್ಷಣದ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಕಡತಗಳನ್ನು ಅನುಕ್ರಮವಾಗಿ ಆದ್ಯತೆಯ ಮೇರೆಗೆ ವಿಲೇ ಮಾಡಲು ಅನುಕೂಲವಾಗಲಿದೆ ಎಂದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ಕಂದಾಯ ವಿಭಾಗದಲ್ಲಿ ಕಡತಗಳ ನಿರ್ವಹಣೆಗೆ ಹಾಗೂ ಖಾತೆಗಳ ವಿವರ/ಮಾಹಿತಿಗಳನ್ನು ಒಳಗೊಂಡಂತೆ ಎಲ್ಲಾ ಕಾರ್ಯಗಳನ್ನು ಡಿಜಿ ಫೈಲ್ ಎಂಬ ಒಂದೇ ತಂತ್ರಾಂಶದಲ್ಲಿ ನಿರ್ವಹಿಸಲಾಗುತ್ತಿರುವುದು ವಿಶೇಷವಾಗಿದೆ ಎಂದರು.
ಇಂತಹ ತಂತ್ರಾಂಶದ ಅಳವಡಿಕೆಯಿಂದ ತ್ವರಿತ ಸೇವೆ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದ ಅವರು, ಈ ತಂತ್ರಾಂಶದಿಂದ ಕಡತ ವಿಲೇವಾರಿಯ ಹಂತಗಳ ಬಗ್ಗೆ ಅರ್ಜಿದಾರರ ಮೊಬೈಲ್‌ಗೆ ಸಕಾಲಿಕ ಸಂದೇಶ ರವಾನೆಯಾಗಲಿದೆ. ತಂತ್ರಾಂಶ ಬಳಕೆಯಿಂದ ಅಧಿ ಕಾರಿ/ಸಿಬ್ಬಂದಿಗಳಿಗೆ ಕಾರ್ಯದ ಒತ್ತಡ ಕಡಿಮೆಯಾಗಿ ಶೀಘ್ರವಾಗಿ ಸೇವೆ ನೀಡಲು ಅವಕಾಶವಾಗಲಿದೆ.
ಅರ್ಜಿದಾರರಿಗೆ ಮೊಬೈಲ್ ಮೂಲಕವೇ ಸಂದೇಶ ರವಾನೆಯಾಗುವುದರಿಂದ ಅನವಶ್ಯಕವಾಗಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದರು. ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಖಾ, ಸುವರ್ಣ ಶಂಕರ್, ಶಂಕರ್, ಜ್ಞಾನೇಶ್ವರ್, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ ಸೇರಿದಂತೆ ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.