Advertisement

Shimoga; ಆಸ್ತಿ ವಿಚಾರದ ಗಲಾಟೆ: ಚರಂಡಿಗೆ ಬಿದ್ದು ವ್ಯಕ್ತಿ ಸಾವು

12:17 PM Jul 30, 2023 | Team Udayavani |

ಶಿವಮೊಗ್ಗ: ಆಸ್ತಿ ವಿಚಾರದಲ್ಲಿ ನಡೆದ ತಳ್ಳಾಟ, ನೂಕಾಟದಲ್ಲಿ ವ್ಯಕ್ತಿಯೊಬ್ಬ ಚರಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.

Advertisement

ವಿದ್ಯಾನಗರದ ಐದನೇ ತಿರುವಿನಲ್ಲಿ ಬರುವ ಸುಭಾಷ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಜ್ಞಾನೇಶ್ವರ್ ಎಂಬ 43 ವರ್ಷದ ವ್ಯಕ್ತಿ ಸಾವನ್ನಪ್ಪಿದ್ಧಾನೆ.

ಇದನ್ನೂ ಓದಿ:INDvsWI: ಎರಡನೇ ಪಂದ್ಯಕ್ಕೆ ರೋಹಿತ್- ವಿರಾಟ್ ಹೊರಗಿಟ್ಟಿದ್ದು ಯಾಕೆ? ಉತ್ತರಿಸಿದ ದ್ರಾವಿಡ್

ಜ್ಞಾನೇಶ್ವರ್ ಬ್ಯಾಗ್​ ರಿಪೇರಿ ಕೆಲಸ ಮಾಡುತ್ತಿದ್ದು, ಶನಿವಾರ ರಾತ್ರಿ ಅತ್ತೆ ಮನೆಗೆ ತೆರಳಿದ್ದ. ಆ ಮನೆ ತನಗೆ ಸೇರಬೇಕು ಎಂದು ಆತನ ಹೆಂಡತಿಯ ತಾಯಿಯ ತಮ್ಮನ ಜೊತೆಗೆ ಮಾತುಕತೆ ಆರಂಭಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ನಡೆದು ತಳ್ಳಾಟ ಆಗಿದೆ. ಈ ವೇಳೆ ಜ್ಞಾನೇಶ್ವರ್​ ಮನೆ ಎದುರಿಗಿದ್ದ ಚರಂಡಿಗೆ ಬಿದ್ದಿದ್ದಾನೆ. ಅಲ್ಲಿಯೇ ಸಾವನ್ನಪ್ಪಿದ್ಧಾನೆ. ಕುಡಿದ ಅಮಲಿನಲ್ಲಿ ನಡೆದ ಘಟನೆಯಲ್ಲಿ ಜ್ಞಾನೇಶ್ವರ್​ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಸ್ಥಳೀಯರು ಚರಂಡಿಯಲ್ಲಿ ಮೃತದೇಹ ಇರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೋಟೆ ಪೊಲೀಸ್ ಸ್ಟೇಷನ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next