Advertisement

ಸಂಶೋಧನೆಯಲ್ಲಿ ಆಧುನಿಕ ಆರೋಗ್ಯ ಚಿಕಿತ್ಸೆ- ತಂತ್ರಜ್ಞಾ ನ ಅಗತ್ಯ

07:52 PM Oct 31, 2019 | Naveen |

ಶಿವಮೊಗ್ಗ: ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಮತ್ತು ಜೆ.ಎನ್‌.ಎನ್‌.ಸಿ. ಕಾಲೇಜಿನ ವತಿಯಿಂದ ಸಮೂಹವಾಗಿ ಸಂಶೋಧನೆ ಹಾಗೂ ಸಹಕಾರದ ವಿಷಯವಾಗಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.

Advertisement

ಸಭೆಯ ಪ್ರಾರಂಭದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ| ಲತಾ ನಾಗೇಂದ್ರ ಮಾತನಾಡಿ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಮತ್ತು ಜೆ.ಎನ್‌. ಎನ್‌.ಸಿ. ಕಾಲೇಜುಗಳು ಆಧುನಿಕ ಆರೋಗ್ಯ ಚಿಕಿತ್ಸೆ ಮತ್ತು ತಂತ್ರಜ್ಞಾನ ಸಂಶೋಧನೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರವು ಸಂಶೋಧನೆಗೆ ಸದಾ ಪ್ರೋತ್ಸಾಹ ನೀಡುತ್ತದೆ. ಜೆ.ಎನ್‌.ಎನ್‌.ಸಿ ಕಾಲೇಜಿನ ಎಲ್ಲಾ ಚಟುವಟಿಕೆಗಳಿಗೂ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಸಹಕಾರ ನೀಡುತ್ತದೆ ಎಂದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಂಧೋಧನಾ ಕೇಂದ್ರದ ನಿರ್ದೇಶಕ ಡಾ|
ಕಾಶೀನಾಥ್‌ ಹಾಗೂ ಜೆ.ಎನ್‌.ಎನ್‌.ಸಿ ಕಾಲೇಜಿನ ಪ್ರಾಂಶುಪಾಲ ಡಾ| ಎಚ್‌.ಆರ್‌. ಮಹದೇವಸ್ವಾಮಿ ಅವರು ತಮ್ಮ ಕಾಲೇಜಿನ ಬೆಳವಣಿಗೆ, ಉದ್ದೇಶಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಸಭೆಯಲ್ಲಿ ಎರಡೂ ಶಿಕ್ಷಣ ಸಂಸ್ಥೆಗಳು ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಇನ್‌ ಹೆಲ್ತ್‌ಕೇರ್‌-ರಿಸರ್ಚ್‌ ಅವೆನ್ಯು ಆ್ಯಂಡ್‌ ಚಾಲೆಂಜಸ್‌ ಎಂಬ ವಿಷಯದ ಕುರಿತು ಜನವರಿ ತಿಂಗಳ ಕೊನೆಯಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ| ವಿನಯಾ ಶ್ರೀನಿವಾಸ್‌, ಪ್ರಾಂಶುಪಾಲ ಡಾ| ಎಸ್‌.ಎಂ. ಕಟ್ಟಿ, ಶೈಕ್ಷಣಿಕ ನಿರ್ದೇಶಕ ಡಾ| ಆರ್‌.ಪಿ. ಪೈ, ಜೆ.ಎನ್‌.ಎನ್‌.ಸಿ. ಕಾಲೇಜಿನ ಉಪ ಪ್ರಾಂಶುಪಾಲ ಡಾ| ಎಲ್‌.ಕೆ. ಶ್ರೀಪತಿ, ಪ್ರೊ| ಎಚ್‌. ರಾಘವೇಂದ್ರ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next