ಶಿವಮೊಗ್ಗ: ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ರತಿ ಕ್ಷಣವೂ ಎಚ್ಚರದಿಂದ ಇರಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ| ವಿನಯಾ ಶ್ರೀನಿವಾಸ್ ಹೇಳಿದರು.
ನಗರದ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ಹೆಪಟೈಟಿಸ್
-ಬಿ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರತಿನಿತ್ಯ ಸಾವಿರಾರು ಉಪಯೋಗಿದ ಸಿರಿಂಜುಗಳು ಹಾಗೂ ಶಸ್ತ್ರ ಚಿಕಿತ್ಸೆಗೆ ಬಳಕೆಯಾದ ವಸ್ತುಗಳು (ಬಯೋ ಮೆಡಿಕಲ್ ವೇಸ್ಟೇಜ್) ತ್ಯಾಜ್ಯಕ್ಕೆ ಸೇರುತ್ತವೆ. ಈ ಸಿರಿಂಜುಗಳನ್ನು ಯಾರಿಗೂ ಹಾನಿಯಾಗದ ರೀತಿಯಲ್ಲಿ ನಾಶಪಡಿಸುವ ಜವಾಬ್ದಾರಿ ಸ್ವಚ್ಛತಾ ಸಿಬ್ಬಂದಿ ಮೇಲೆ ಇರುತ್ತದೆ. ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ತ್ಯಾಜ್ಯಗಳೊಂದಿಗೆ ರೋಗಿಗಳಿಗೆ ಚುಚ್ಚಿದ ಸಿರಿಂಜುಗಳು ಇದ್ದು ಇದು ಸಿಬ್ಬಂದಿಗೆ ಚುಚ್ಚಿ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ ಎಂದರು.
ಪ್ರತಿನಿತ್ಯ ಆಸ್ಪತ್ರೆಗೆ ಸಾವಿರಾರು ಮಂದಿ ರಕ್ತ ಪರೀಕ್ಷೆಗೆಹಾಗೂ ಇನ್ನಿತರೆ ಚಿಕಿತ್ಸೆಗೆ ಬರುತ್ತಾರೆ. ಈ ರೋಗಿಗಳಲ್ಲಿ ಎಚ್‌ಐವಿ ಪೀಡಿತರು, ಹೆಪಟೈಟಿಸ್- ಬಿ ಮತ್ತು ಹೆಪಟೈಟಿಸ್- ಸಿ ನಂತಹ ಭಯಾನಕ ವೈರಾಣು ಉಳ್ಳ ರೋಗಿಗಳೂ ಬರುತ್ತಾರೆ. ಇವರಿಗೆ ಬಳಸಿದ ಸಿರಿಂಜುಗಳನ್ನು ನಾಶಪಡಿಸುವ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಜೀವನ ಪೂರ್ತಿ ಇದರಿಂದ ನರಕ ಯಾತನೆ ಅನುಭವಿಸಬೇಕಾಗುತ್ತದೆ ಎಂದರು.
ಹೆಪಟೈಟಿಸ್- ಬಿ ರೋಗವು ಮಾರಕವಾಗಿದ್ದರು ಅದು ಬಾರದಂತೆ ಲಸಿಕೆ ನೀಡಬಹುದು. ಆದರೆ ಹೆಪಟೈಟಿಸ್- ಸಿ ಮತ್ತು ಎಚ್‌ಐವಿದಂತಹ ವೈರಸ್ ನಮ್ಮ ದೇಹವನ್ನು ಪ್ರವೇಶಿಸಿದರೆ ಅದಕ್ಕೆ ಚಿಕಿತ್ಸೆ ಇಲ್ಲ. ಹೆಪಟೈಟಿಸ್- ಬಿ ಮನುಷ್ಯನ ದೇಹವನ್ನು ಸೇರಿದ ಕೆಲವು ತಿಂಗಳುಗಳಲ್ಲಿ ತನ್ನ ಪ್ರಭಾವವನ್ನು ತೋರಿಸಲು ಪ್ರಾರಂಭಿಸುತ್ತದೆ. ಇದು ನೇರವಾಗಿ ಮನುಷ್ಯನ ಯಕೃತ್ತಿಗೆ ದಾಳಿ ಮಾಡುತ್ತದೆ. ಹಾಗೆಯೇ ಎಚ್‌ಐವಿ ವೈರಾಣು ಸಹಾ ಅಪಾಯಕಾರಿ. ಒಮ್ಮೆ ದೇಹವನ್ನು ಪ್ರವೇಶಿಸಿದರೆ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನೇ ಕುಂದಿಸಿ ಕೊನೆಗೆ ಆತ ಪ್ರಾಣ ಬಿಡುವಂತೆ ಮಾಡುತ್ತದೆ ಎಂದರು.
ಕಾಲೇಜಿನ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥ ಡಾ| ಅಮೃತ್ ಉಪಾಧ್ಯಾಯ ಮಾತನಾಡಿ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯವು ಸದಾ ತಮ್ಮ ಎಲ್ಲಾ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಯೋಚಿಸುತ್ತದೆ. ಹೆಪಟೈಟಿಸ್- ಬಿ ರೋಗದಿಂದ ಸಂಪೂರ್ಣ ಸುರಕ್ಷತೆಯನ್ನು ಪಡೆಯಬೇಕಾದರೆ ಒಟ್ಟು 3 ಚುಚ್ಚುಮದ್ದನ್ನು ಪಡೆಯಬೇಕಾಗುತ್ತದೆ. ಅನಂತರವೇ ಇದರಿಂದ ಸಂಪೂರ್ಣ ರಕ್ಷಣೆ ಪಡೆಯಲು ಸಾಧ್ಯ. ಮೊದಲನೆಯ ಚುಚ್ಚುಮದ್ದು ತೆಗೆದುಕೊಂಡ ದಿನದಿಂದ ಸರಿಯಾಗಿ ಒಂದು ತಿಂಗಳಿಗೆ ಮತ್ತು ಆರು ತಿಂಗಳಿಗೆ ಚುಚ್ಚು ಮದ್ದನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅ ಧೀಕ್ಷಕ ಡಾ| ಸುಜಿತ್ ಹಾಲಪ್ಪ, ಮೈಕ್ರೋ ಬಯಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಸ್ವರೂಪ ರಾಣಿ, ಸಹಾಯಕ ಪ್ರಾಧ್ಯಾಪಕರಾದ ಡಾ| ಕಿರಣ್, ಡಾ| ಸಾ ಯಾ, ಇನೆ ಕ್ಷನ್ ಕಂಟ್ರೋಲ್ ಶ್ರುಶ್ರೂಷಕಿ ಡಾ| ಪದ್ಮಾಕ್ಷಿ ಇನ್ನಿತರರು ಇದ್ದರು.