Advertisement
ನಗರದ ಡಿಸಿಸಿ ಸಭಾಂಗಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಏರ್ಪಡಿಸಲಾಗಿದ್ದ ಎನ್.ಡಿ. ಸುಂದರೇಶ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 80ರ ದಶಕದಲ್ಲಿ ರಾಜ್ಯದಲ್ಲಿ ರೈತ ಸಂಘ ಅತ್ಯಂತ ಪ್ರಬಲ ಸಂಘಟನೆಯಾಗಿ ಹೊರ ಹೊಮ್ಮಿತು ಎಂದರು. ಅಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರಕ್ಕೆ ರೈತರ ಚಳವಳಿ ಆರಂಭವಾಯಿತು ಎಂದರೆ ಒಂದು ರೀತಿಯಲ್ಲಿ ನಡುಕ ಶುರುವಾಗುತ್ತಿತ್ತು. ಆ ಮಟ್ಟದ ಪ್ರಬಲ ಹಾಗೂ ಶಕ್ತಿಯುತ ಚಳವಳಿ ರೈತಸಂಘದ್ದಾಗಿತ್ತು ಎಂದರು. ಎನ್.ಡಿ. ಸುಂದರೇಶ್, ಪ್ರೊ| ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ ಅವರು ರೈತ ಸಂಘಟನೆಯನ್ನು ಕೆಳ ಹಂತದಿಂದ ಸಂಘಟಿಸುವ ಮೂಲಕ ಈ ರಾಜ್ಯದ ಅನ್ನದಾತನ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಮೂಲಕ ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಹೋರಾಟ ನಡೆಸಿದರು. ಇದರ ಪರಿಣಾಮವಾಗಿಯೇ ಈ ನಾಯಕರು ಇಂದಿಗೂ ಸಹ ನಮ್ಮೆಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
Advertisement
ರಾಜ್ಯಾಡಳಿತಕ್ಕೆ ನಡುಕ ಹುಟ್ಟಿಸಿತ್ತು ರೈತಸಂಘ
01:29 PM Dec 22, 2019 | Naveen |
Advertisement
Udayavani is now on Telegram. Click here to join our channel and stay updated with the latest news.