Advertisement

Shivamogga: ಪಿಡಬ್ಲ್ಯೂಡಿ ಕ್ವಾಟ್ರರ್ಸ್‌ನಲ್ಲಿ ಸರಣಿ ಮನೆಗಳ್ಳತನ

08:54 PM Sep 08, 2024 | Shreeram Nayak |

ಶಿವಮೊಗ್ಗ: ಹಬ್ಬ ಎಂದು ಊರು, ಕೆಲಸದ ನಿಮಿತ್ತ ಹೊರಹೋಗಿದ್ದ ವೇಳೆ ಕಳ್ಳರು ಸರಕಾರಿ ನೌಕರರ ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿರುವ ಘಟನೆ ನಗರದ ಲೋಕೋಪಯೋಗಿ ಇಲಾಖೆ ಕ್ವಾಟ್ರಸ್‌ನಲ್ಲಿ ನಡೆದಿದೆ.

Advertisement

ಬಸವನಗುಡಿಯ ಬಡಾವಣೆಯಲ್ಲಿನ ಪಿಡ್ಲ್ಯೂಡಿ ಕ್ವಾಟ್ರಸ್‌ನಲ್ಲಿನ ಐದು ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು ಇನ್ನೆರಡು ಮನೆಗಳಲ್ಲಿ ಕಳವು ಯತ್ನ ನಡೆಸಲಾಗಿದೆ.

ಜಿಲ್ಲಾಧಿಕಾರಿ ಪಿಎ ದೀಪಕ್‌, ನ್ಯಾಯಾಧಿಧೀಶರ ವಾಹನ ಚಾಲಕ ಪ್ರಕಾಶ್‌, ವಾರ್ತಾ ಇಲಾಖೆ ಅಧಿಕಾರಿ ಭಾಗ್ಯ, ಡಿಸಿ ಕಚೇರಿಯಲ್ಲಿ ಎಸ್‌ಡಿಎ ಆಗಿದ್ದ ಸಂಧ್ಯಾ, ಕಮರ್ಷಿಯಲ್‌ ಟ್ಯಾಕ್ಸ್‌ ಕಚೇರಿ ಸ್ಟೆನೋ ನಂದಿನಿ ಸೇರಿದಂತೆ 5 ಜನರ ಮನೆಯಲ್ಲಿ ಕಳುವಾಗಿದೆ.

ಬೆಳಗಿನ ಜಾವ ಮೂರು ಗಂಟೆಯ ವೇಳೆಗೆ ಘಟನೆ ನಡೆದಿದ್ದು ಎರಡು ಲಕ್ಷಕ್ಕೂ ಹೆಚ್ಚು ನಗದು, 300 ಗ್ರಾಂ. ಚಿನ್ನಾಭರಣ ಕಳ್ಳತನವಾಗಿದೆ. ಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

content-img

ಕಳ್ಳರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.