Advertisement

Shimoga: ಶಿವಮೊಗ್ಗ ಗಲಭೆ: ನ್ಯಾಯಾಂಗ ತನಿಖೆಗೆ ಆಗ್ರಹ

11:57 PM Oct 04, 2023 | Team Udayavani |

ಬೆಂಗಳೂರು: ಶಿವಮೊಗ್ಗ ಘಟನೆ ಹಿಂದೆ ರಾಜ್ಯದ ಶಾಂತಿ ಹಾಳು ಮಾಡುವ ಉದ್ದೇಶ ಇದ್ದಂತಿದೆ. ಆದ್ದರಿಂದ ಈ ಘಟನೆಯ ನ್ಯಾಯಾಂಗ ತನಿಖೆ ಮಾಡುವಂತೆ ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದರು.

Advertisement

ಪಕ್ಷದ ಕಚೇರಿಯಲ್ಲಿ ಬುಧವಾರ ಅವರು ಮಾತನಾಡಿ, ಕರ್ನಾಟಕದ ಮುಂದೆ ಬಹಳ ದೊಡ್ಡ ಅಪಾಯ ಇದೆ. ಶಿವಮೊಗ್ಗ, ಕೋಲಾರ ಪ್ರಕರಣಗಳು ಅದರ ಟೆಸ್ಟಿಂಗ್‌ ಡೋಸ್‌ ಇದ್ದಂತಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಈ 140 ದಿನಗಳಲ್ಲಿ ಕೋಮುವಾದಿ ಶಕ್ತಿಗಳು ವಿಜೃಂಭಿಸಲು ಬಿಟ್ಟಿರುವುದೇ ಸಾಧನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭಾ ಫ‌ಲಿತಾಂಶ ಬರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಪಾಕಿಸ್ಥಾನ್‌ ಜಿಂದಾಬಾದ್‌ ಎಂದು ಕೂಗುತ್ತಾರೆ. ಭಟ್ಕಳದಲ್ಲಿ ಹಿಂದೂಗಳ ಹೆಣ ಎತ್ತಲು ಕೂಡ ಜನ ಇರಬಾರದು ಎಂದು ಮುಸ್ಲಿಮರೊಬ್ಬರು ಬರೆದಿದ್ದರು. ಬೆಳಗಾವಿಯಲ್ಲಿ ಜೈನಮುನಿಯ ಹತ್ಯೆ ಆಗಿದೆ. ಟಿ.ನರಸೀ ಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ನಡೆದಿದೆ. ಫ‌ಲಿತಾಂಶ ಬಂದ ಮರುದಿನವೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದವರು ಆರೋಪಿಸಿದರು.

ಮುಂದುವರಿದ ಬಿಗಿ ಬಂದೋಬಸ್ತ್
ಶಿವಮೊಗ್ಗ: ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಉದ್ವಿಗ್ನ ಸ್ಥಿತಿ ತಲುಪಿದ್ದ ರಾಗಿಗುಡ್ಡ ಸಹಜ ಸ್ಥಿತಿಗೆ ಮರಳುತ್ತಿದೆ. ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಕೆಲವಷ್ಟು ವಿನಾಯಿತಿಗಳನ್ನು ನೀಡಲಾಗಿದ್ದು ಬುಧವಾರ ಶಾಲಾ, ಕಾಲೇಜು, ಕಚೇರಿಗೆ ತೆರಳಲು ಜನ ಮನೆಯಿಂದ ಹೊರಬಂದರು. ಸೆಕ್ಷನ್‌ 144 ಮುಂದುವರಿಸಲಾಗಿದೆ.

ಘಟನೆ ಬಳಿಕ ರಾಗಿಗುಡ್ಡ ಬಡಾವಣೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ತಡೆಯಲು ಜನ ಮನೆಯಿಂದ ಹೊರ ಬಾರದಂತೆ ಪೊಲೀಸರು ನಿರ್ಬಂ ಧ ಹೇರಿದ್ದರು. ರಾಗಿಗುಡ್ಡ ಬಡಾವಣೆಯಲ್ಲಿ ಜನರ ಓಡಾಟಕ್ಕೆ ನಿಬಂìಧವಿದೆ. ಆದರೆ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ, ಕೆಲಸಗಳಿಗೆ ತೆರಳುವವರಿಗೆ ಅವಕಾಶ ಕಲ್ಪಿಸಲಾಗಿದೆ. ಅಂಗಡಿ ಮುಂಗಟ್ಟು ತೆರೆದಿದ್ದು ಅಗತ್ಯ ವಸ್ತುಗಳ ಖರೀದಿ ಮಾಡಲಾಗುತ್ತಿದೆ. ನಿಧಾನವಾಗಿ ರಾಗಿಗುಡ್ಡ ಬಡಾವಣೆ ಸಹಜ ಸ್ಥಿತಿಗೆ ಮರಳುತ್ತಿದೆ.

Advertisement

ಶಿವಮೊಗ್ಗ ಸಹಜ ಸ್ಥಿತಿಗೆ

ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ| ಅಲೋಕ್‌ ಮೋಹನ್‌ ತಿಳಿಸಿದರು. ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆಗೂ ಮೊದಲು ಮಾತನಾಡಿದ ಅವರು, ಗಲಭೆಯಲ್ಲಿ ಇದುವರೆಗೆ 27 ಪ್ರಕರಣ ದಾಖಲಾಗಿದ್ದು, 64 ಜನರನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಗಲಭೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಇದೀಗ ಕೆಎಸ್‌ಆರ್‌ಪಿ ಮತ್ತು ಡಿಎಆರ್‌ ಪಡೆಗಳನ್ನು ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಿದರು.

ಗಲಭೆ ಸ್ಥಳದಲ್ಲಿ ಬಿಜೆಪಿ ಸತ್ಯಶೋಧನೆ
ಬೆಂಗಳೂರು: ಶಿವಮೊಗ್ಗ ಗಲಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಖಂಡಿಸಿದ್ದು, ಗಲಭೆ ನಡೆದ ಸ್ಥಳಕ್ಕೆ ಗುರುವಾರ ಬೆಳಗ್ಗೆ 11 ಗಂಟೆಗೆ ಬಿಜೆಪಿ ನಾಯಕರನ್ನೊಳಗೊಂಡ ಸತ್ಯಶೋಧನ ತಂಡ ಭೇಟಿ ನೀಡಲಿದೆ ಎಂದು ತಿಳಿಸಿ¨ªಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ಎನ್‌.ರವಿಕುಮಾರ್‌, ಎಸ್‌. ರುದ್ರೇ ಗೌಡ ತಂಡದಲ್ಲಿ ಇರಲಿದ್ದಾರೆ.

ತಪ್ಪಿತಸ್ಥರನ್ನು ಹಿಡಿದು ಒಳಗೆ ಹಾಕುವ ಬದಲು ಸಚಿವರೇ ಕ್ಲೀನ್‌ ಚಿಟ್‌ ಕೊಡುವ ಕೆಲಸ ಮಾಡುತ್ತಿದ್ಧಾರೆ. ಈ ಸರಕಾರದ ತುಷ್ಟೀಕರಣದ ನೀತಿಯೇ ಸಮಾಜ ಘಾತುಕ ಶಕ್ತಿಗಳು ಹೆಚ್ಚಾಗಲು ಕಾರಣವಾಗಿದೆ.
– ಬಸವರಾಜ ಬೊಮ್ಮಾಯಿ,ಮಾಜಿ ಸಿಎಂ

2023ರ ಜನವರಿ, ಫೆಬ್ರವರಿಯಲ್ಲಿ 7361 ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ, ನಮಗೆ ಈಗ ಬುದ್ಧಿ ಹೇಳುವುದಾ? ಅವರ ಕಾರ್ಯಕರ್ತರ ಪರವಾಗಿ ಅವರೇನು ರಾಜಕಾರಣ ಮಾಡಿದ್ದಾರೆ ಎಂಬುದು ಗೊತ್ತಿದೆ. ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಅಮಾಯಕರ ಮೇಲಿನ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವಷ್ಟೆ.
– ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next