Advertisement

ಅಕಾಲಿಕ ಮಳೆ; ಕೃಷಿ ಚಟುವಟಿಕೆಗೆ ಹಿನ್ನಡೆ

01:24 PM Dec 02, 2019 | Team Udayavani |

ಶಿವಮೊಗ್ಗ: ಡಿಸೆಂಬರ್‌ ಮೊದಲ ವಾರದಲ್ಲಿ ಆರಂಭವಾಗಿರುವ ಅಕಾಲಿಕ ಮಳೆಯು ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟು ಮಾಡಿದ್ದು, ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ಆರಂಭವಾದ ಜಿಟಿಜಿಟಿ ಮಳೆಯು ಸಂಜೆಯಾದರೂ ನಿಂತಿರಲಿಲ್ಲ. ಭಧ್ರಾವತಿ, ಸಾಗರ, ಹೊಸನಗರ ಭಾಗದಲ್ಲಿ ಭತ್ತ ಹಾಗೂ ಅಡಕೆ ಕಾಯಿ ಕಟಾವು ಆರಂಭವಾಗಿದ್ದು
ಕೃಷಿಕರು ಆತಂಕದಲ್ಲಿದ್ದಾರೆ. ಈಗಾಗಲೇ ಭತ್ತ ದರ ಕಳೆದುಕೊಂಡಿದ್ದು ಅಕಾಲಿಕ ಮಳೆಯಿಂದ ಇನ್ನಷ್ಟು ಕುಸಿಯುವ ಆತಂಕದಲ್ಲಿದೆ. ಮೆಕ್ಕೆಜೋಳ ತೆನೆಯನ್ನು ರೈತರು ಒಣಗಿಸುವಲ್ಲಿ ನಿರತರಾಗಿದ್ದು ಉತ್ತಮ ಬೆಲೆಗೆ ಕಾಯ್ದಿರಿಸಿದ್ದಾರೆ. ರಸ್ತೆ, ಹೊಲ, ಗದ್ದೆಗಳಲ್ಲಿ ಕಟಾವು ಮಾಡಿ, ರಾಶಿ ಮಾಡಿ ಇಟ್ಟ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

Advertisement

ಶಿವಮೊಗ್ಗದ ಅಮೃತ 2 ಮಿಮೀ, ಸೊನಲೆ 1, ರಾಮನಗರ 2, ತುದೂರು 2, ಅರಮಘಟ್ಟ 2, ಮಲ್ಲಾಪುರ 2, ಹೊಸಹಳ್ಳಿ 6, ಹುಂಚದಕಟ್ಟೆ 1, ಮೇಲಿನಹನಸವಾಡಿ 1, ಕೊಮ್ಮನಾಳು 2, ಹಾಡೋನಹಳ್ಳಿ 1, ತೇವರಘಟ್ಟ 2, ಕೊನಗವಳ್ಳಿ 2, ಸಿಂಗನಮನೆ 3, ಗಾಜನೂರು 4, ಮಂಗೋಟೆ 2, ಹಿರಿಯೂರು 6, ಅರಹತೊಳಲು 1, ಗುಡುಮಘಟ್ಟ 4, ಮಾರುತಿಪುರ 1, ಹೆದ್ದಾರಿಪುರ 1, ಹುರುಳಿ
1, ಕುಂಚೇನಹಳ್ಳಿ 2, ತ್ರಿಣಿವೆ 1, ಎಣ್ಣೆಕೊಪ್ಪ 1, ಚೋರಡಿ 1, ಸಿರಿಗೆರೆ 2, ಮತ್ತಿಮನೆ 1, ಸೋಗಾನೆ 6, ಸನ್ಯಾಸಿಕೋಡುಮಗೆ 2 ಮಿಮೀ ಮಳೆಯಾಗಿದೆ. ಭಾನುವಾರ ರಾತ್ರಿ ಕೂಡ ಮಳೆ ಮುಂದುವರಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next