Advertisement
ಎ. 23ರಂದು ಮತದಾನ ನಡೆಯಲಿದ್ದು, 12 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ, ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ, ಬಿಎಸ್‌ಪಿಯಿಂದ ಗುಡ್ಡಪ್ಪ, ಉತ್ತಮ ಪ್ರಜಾಕೀಯ ಪಕ್ಷದಿಂದ ಆರ್. ವೆಂಕಟೇಶ್, ರಿಪಬ್ಲಿಕನ್ ಸೇನಾ ಪಕ್ಷದ ಎನ್.ಟಿ. ವಿಜಯ ಕುಮಾರ್, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಕೆ. ಕೃಷ್ಣ, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್. ಉಮೇಶಪ್ಪ, ಬಿ.ಕೆ. ಶಶಿಕುಮಾರ್, ಶೇಖರ್ ನಾಯ್ಕ, ಉಮೇಶ ಶರ್ಮಾ, ಮಹಮ್ಮದ್ ಯೂಸೂಫ್ ಖಾನ್ ಹಾಗೂ ಕೆ.ಸಿ. ವಿನಯ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳ, ಉಡುಪಿ, ಕಾಪು, ಕುಂದಾಪುರ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಒಳಪಟ್ಟರೆ, ಬೈಂದೂರು ಮಾತ್ರ ಶಿವಮೊಗ್ಗ ಕ್ಷೇತ್ರಕ್ಕೆ ಸೇರಿದೆ. ಬೈಂದೂರು ಭಾಗದಲ್ಲೂ ಈಗಾಗಲೇ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧ್ಯೆ ನಿಕಟ ಪೈಪೋಟಿ ಕಂಡು ಬರುತ್ತಿದ್ದು, ಉಭಯ ಪಕ್ಷಗಳ ಪ್ರಮುಖ ನಾಯಕರು ಮತದಾರರ ಕೊನೆಯ ಕ್ಷಣದ ಓಲೈಕೆಯಲ್ಲಿ ತೊಡಗಿದ್ದಾರೆ.