Advertisement

5 ವರ್ಷ,3 ಪಕ್ಷ,4 ಚುನಾವಣೆ…!

12:39 AM Apr 21, 2019 | Sriram |

ಕುಂದಾಪುರ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿದ್ದ, ಮಾಜಿ ಮುಖ್ಯಮಂತ್ರಿ ದಿ| ಎಸ್‌. ಬಂಗಾರಪ್ಪ 2004ರಿಂದ 2009ರ ಅವಧಿಯಲ್ಲಿ 5 ವರ್ಷದಲ್ಲಿ 3 ಪಕ್ಷಗಳನ್ನು ಪ್ರತಿನಿಧಿಸಿ, 4 ಚುನಾವಣೆಗಳಲ್ಲಿ ಕಣಕ್ಕಿಳಿಯುವ ಮೂಲಕ ಭಾರತೀಯ ಚುನಾವಣಾ ಇತಿಹಾಸದಲ್ಲಿ ವಿನೂತನವಾದ ದಾಖಲೆಯೊಂದನ್ನು ಮಾಡಿದ್ದರು.

Advertisement

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ (ಆಗ ಬೈಂದೂರು ಉಡುಪಿ ಕ್ಷೇತ್ರದಲ್ಲೇ ಇದ್ದು, 2008ರಲ್ಲಿ ಶಿವಮೊಗ್ಗದೊಂದಿಗೆ ಸೇರ್ಪಡೆಗೊಂಡಿತು.) 2004ರಲ್ಲಿ ಬಿಜೆಪಿ ಸೇರಿ ಕಣಕ್ಕಿಳಿದಿದ್ದ ಬಂಗಾರಪ್ಪ ಸಂಸದರಾಗಿ ಆಯ್ಕೆಯಾದರು. ಒಂದೇ ವರ್ಷ ಅಂದರೆ 2005ರಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡು, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಗೆದ್ದರು.

2008ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅದೇ ಸಮಾಜವಾದಿ ಪಕ್ಷದಿಂದ ಶಿಕಾರಿಪುರದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋಲುಂಡರು. ಮರು ವರ್ಷವೇ ಮತ್ತೆ ಕಾಂಗ್ರೆಸ್‌ ಸೇರಿ, ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಎಸ್‌ವೈ ಪುತ್ರ ಬಿ.ವೈ. ರಾಘವೇಂದ್ರ ಎದುರು ಸ್ಪರ್ಧಿಸಿ ಸೋಲುಂಡರು. ಇದೇ ಬಂಗಾರಪ್ಪ ಸ್ಪರ್ಧಿಸಿದ ಕೊನೆ ಚುನಾವಣೆಯಾಗಿತ್ತು. ಬಳಿಕ 2010ರಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.

ಹೀಗೆ ಬಂಗಾರಪ್ಪ ಅವರು 2004 ರಿಂದ 2009ರ ವರೆಗಿನ 5 ವರ್ಷಗಳಲ್ಲಿ 4 ಚುನಾವಣೆ (3 ಲೋಕಸಭಾ ಹಾಗೂ 1 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ, 2 ಬಾರಿ ಗೆದ್ದು, 2 ಬಾರಿ ಸೋತರು. ಈ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡು, ಆ ಬಳಿಕ ಸಮಾಜವಾದಿ ಪಕ್ಷಕ್ಕೆ ಸೇರಿದರು. ಅನಂತರ ಅದನ್ನು ತೊರೆದು ಕಾಂಗ್ರೆಸ್‌ ಸೇರಿದ ದಾಖಲೆ ಬಂಗಾರಪ್ಪ ಅವರದು.

Advertisement

Udayavani is now on Telegram. Click here to join our channel and stay updated with the latest news.

Next